ಹಾಸನ

ಬಸವಣ್ಣನ ತತ್ವ ಅಳವಡಿಕೆಯಿಂದ ಉತ್ತಮ ಬದುಕು: ಪ್ರಿಯದರ್ಶಿನಿ

Published On :

ಹೊಳೆನರಸೀಪುರ:   ಮನುಷ್ಯ ಬಸವಣ್ಣನ ತತ್ವ ಆದರ್ಶಗಳನ್ನು ಆಳವಡಿಸಿಕೊಂಡಾಗ ಮಾತ್ರ  ಉತ್ತಮ ಶೈಲಿಯ ಮತ್ತು ಒತ್ತಡ ರಹಿತ ಬದುಕು ನಡೆಸಲು ಸಾಧ್ಯ ಎಂದು ರಾಜ್ಯ ಪ್ರಶಸ್ತಿ ಪುರಸ್ಕೃತ ಪ್ರಿಯದರ್ಶಿನಿ ಅಯ್ಯಂಗಾರ್ ಹೇಳಿದರು.
ಪಟ್ಟಣದ ಯೋಗ ಭವನದಲ್ಲಿ ಜಿಲ್ಲಾ ನೆಹರು ಯುವ ಕೇಂದ್ರ, ಪ್ರೇಮ ಮಹಿಳಾ ಸಮಾಜ ಮತ್ತು ಪತಂಜಲಿ ಯೋಗ ಕೂಟ ಆಯೋಜಿಸಿದ್ದ ಮೂರು ದಿನದ ಶಿಬಿರ ಉದ್ಘಾಟಿಸಿ ಮಾತನಾಡಿ,  ಮನುಷ್ಯ ಯೋಗ,  ಪ್ರಾಣಾಯಾಮಗಳಿಂದ ಮನಸ್ಸಿನ ಒತ್ತಡ ಕಡಿಮೆ ಮಾಡಿಕೊಳ್ಳ ಬಹುದು. ಮೂರು ದಿನ ಆಯೋಜಿಸಿರುವ ಶಿಬಿರದಲ್ಲಿ ಭಾಗವಹಿಸಿರುವ ಎಲ್ಲರಿಗೂ ಅದರ ಅರಿವು ಮೂಡಲೆಂದು ಆಶಿಸಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಟ್ಟಸೋಮಪ್ಪ ಮಾತನಾಡಿ,  ಇತ್ತೀಚಿನ ಜಂಜಾಟದಲ್ಲಿ ಮನುಷ್ಯನ ಜೀವನಶೈಲಿ ಬದಲಾಗಿರುವುದರಿಂದ ಇಲ್ಲದ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾನೆ. ಇದನ್ನು ಹೋಗಲಾಡಿಸಿಕೊಳ್ಳುವ ಸಲುವಾಗಿ ಇಂತಹ ಶಿಬಿರಗಳು ಅತ್ಯವಶ್ಯ ಎಂದು ತಿಳಿಸಿದರು. ಪತಂಜಲಿ ಯೋಗ ಕೂಟದ ಅಧ್ಯಕ್ಷ ಕೆ.ಮಂಜಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪತಂಜಲಿ ಯೋಗಾಕೂಟದ ಮುಖ್ಯಸ್ಥ ಕೆ.ಜಿ.ಗಣೇಶ್‌ಬಾಬು, ಕಾರ್ಯದರ್ಶಿ ವಾಸುದೇವಮೂರ್ತಿ, ಲೋಕೇಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.