ವಿಕೃತ ಮನಸ್ಸಿನವರ ಕುತಂತ್ರ
ಆಲೂರು: ಟಿಪ್ಪು ವಿಶ್ವವಿದ್ಯಾಲಯ ನಿರ್ಮಾಣ ಮತ್ತು ಕಾವೇರಿ ನೀರನ್ನು ಉಳಿಸುವಂತೆ ಆಗ್ರಹಿಸಿ ವೀರಕನ್ನಡಿಗ ಟಿಪ್ಪು ಸೇನೆ ಕಾರ್ಯಕರ್ತರು ಭಾನುವಾರ ಬೈಕ್ ರ್ಯಾಲಿ ನಡೆಸಿದರು. ಅವರು ಪಟ್ಟಣದ ಕೊನೇಪೇಟೆಯಲ್ಲಿ ಸಕಲೇಶಪುರದಿಂದ ಆಗಮಿಸಿ ಬೈಕ್ ರ್ಯಾಲಿ ನಡೆಸಿದರು.
ಟಿಪ್ಪು ಮಹಾನ್ ದೇಶಪ್ರೇಮಿ, ಸ್ವಾತಂತ್ರ್ಯ ಸೇನಾನಿ. ಆತನ ಹೆಸರನ್ನು ಶ್ರೀರಂಗಪಟ್ಟಣದಲ್ಲಿ ನಿರ್ಮಿಸಲುದ್ದೇಶಿಸಿರುವ ವಿವಿಗೆ ನಾಮಕರಣ ಮಾಡಲು ವಿರೋಧ ವ್ಯಕ್ತ ಪಡಿಸುತ್ತಿರುವವರು ಮೊದಲು ಆತ್ಮಾವಲೋಕನ ಮಾಡಿಕೊಳ್ಳಬೇಕು. ಕೆಲವು ವಿಕೃತ ಮನಸ್ಸಿನವರು ಜನರಲ್ಲಿ ಒಡಕು ಮೂಡಿಸುವ ದೃಷ್ಟಿಯಿಂದ ಕುತಂತ್ರ ನಡೆಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ತಾ. ನಾಗರಿಕ ಹೋರಾಟ ಸಮಿತಿ ಅಧ್ಯಕ್ಷ ಕೆ.ಎಸ್.ಮಂಜೇಗೌಡ ಮಾತನಾಡಿ, ಟಿಪ್ಪು ಅಧಿಕಾರಾವಧಿಯಲ್ಲಿ ಬಹು ಸಂಖ್ಯಾತ ಹಿಂದುಗಳೂ ಸೇರಿದಂತೆ ಎಲ್ಲರಿಗೂ ಸಮಾನ ನ್ಯಾಯ ನೀಡಿದ ಮಹಾನ್ ಮಾನವತಾವಾದಿ ಅಂತಹವನ ವಿರುದ್ಧ ಮಾತನಾಡುವುದು ಸರಿಯಲ್ಲ ಎಂದು ಹೇಳಿದರು.
ದಸಂಸ ದೇವರಾಜ್ ಮಾತನಾಡಿ, ಟಿಪ್ಪು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಯುದ್ಧ ಮಾಡುತ್ತ ಮಡಿದ ಮೊದಲ ಸೇನಾನಿ, ದೇಶ ರಕ್ಷಣೆಗಾಗಿ ತನ್ನ ಮಕ್ಕಳನ್ನೇ ಒತ್ತೆಯಿಟ್ಟ ಮಹಾನ್ ದೇಶ ಪ್ರೇಮಿ ಎಂದರು. ಪತ್ರಕರ್ತರ ಸಂಘದ ಅಧ್ಯಕ್ಷ ರಾಘವೇಂದ್ರ, ಕಸಾಪ ಅಧ್ಯಕ್ಷ ಗುಲಾಂ ಸತ್ತಾರ್, ಜಯ ಕರ್ಕಾಟಕ ಅಧ್ಯಕ್ಷ ಹನುಮಂತೇಗೌಡ, ಕಾರ್ಯದರ್ಶಿ ಪ್ರದೀಪ್, ಛಲವಾದಿ ಮಹಾಸಭಾ ಅಧ್ಯಕ್ಷ ಎ.ಟಿ.ಮಲ್ಲೇಶ್, ಪಪಂ ಮಾಜಿ ಸದಸ್ಯ ರಂಗೇಗೌಡ, ಜಾಸಾಪ ನಿರ್ದೇಶಕ ದ್ಯಾವಪ್ಪ, ಹಿರಿಯ ನಾಗರೀಕ ಜಿ.ತಿಮ್ಮನ ಹಳ್ಳಿ ಅಣ್ಣಾಜಿ ಗೌಡ, ಟೈಲರ್ ಅಸೋಸಿಯೇಶನ್ ನಿರ್ದೇಶಕ ಖದೀರ್ ಅಹಮದ್ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

