ಹಾಸನ

'ಭಾರತ ಇಂದಿಗೂ ಮೂಢನಂಬಿಕೆಗೆ ಸಿಲುಕಿ ನರಳುತ್ತಿದೆ'

Published On :

ಹಾಸನ: ಭಾರತ ದೇಶ ಮೂಢನಂಬಿಕೆಯನ್ನೇ ಜೀವನಾಧಾರ ಹಾಗೂ ಬದುಕಿನ ಸಿದ್ಧಾಂತ ಮಾಡಿಕೊಂಡು ಬದುಕುತ್ತಿದೆ ಹಾಗಾಗಿ ಸ್ವಾತಂತ್ರ್ಯ ಸಿಕ್ಕಿ 70ವರ್ಷ ಸಮೀಪಿಸುತ್ತಿದ್ದರೂ ಅಂಧಕಾರದಲ್ಲಿ ಸಿಲುಕಿ ಜಗತ್ತಿನ ಬಡರಾಷ್ಟ್ರಗಳ ಸಾಲಿನಲ್ಲೇ ನರಳುತ್ತಿದೆ ಎಂದು  ಬಿಜಿವಿಎಸ್ ಹಾಸನ ಜಿಲ್ಲಾ ಕಾರ್ಯದರ್ಶಿ ಅಹಮದ್ ಹೇಳಿದರು. ದುದ್ದ ಹೋಬಳಿ ಅರಸೀಹಳ್ಳಿ ಗ್ರಾಮದಲ್ಲಿ ಪುಷ್ಪರವಿ ರಾಷ್ಟ್ರೀಯ ಕೈಗಾರಿಕಾ ತರಬೇತಿ ಸಂಸ್ಥೆಯ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದಲ್ಲಿ ಇತ್ತೀಚೆಗೆ ವೈಜ್ಞಾನಿಕ ಮನೋಧರ್ಮ ಮತ್ತು ಮೂಢನಂಬಿಕೆ ಕುರಿತು ಅವರು ಉಪನ್ಯಾಸ ನೀಡಿದರು.  ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಸರ್ಕಾರಿ ರತ್ನಾಕರರ ಒಕ್ಕೂಟದ ಜಿಲ್ಲಾ ಕಾರ್ಯದರ್ಶಿ ಡಿ.ಟಿ.ಶಿವಣ್ಣ ಮಾತನಾಡಿ, ಹಳ್ಳಿ ಜನರ ನಂಬಿಕೆಗಳು ಮುಗ್ಧತೆಯಿಂದ ಕೂಡಿರುತ್ತವೆ. ಆ ಮುಗ್ಧತೆಯನ್ನು ಆಳುವ ವರ್ಗ ಪುರೋಹಿತರು ಮತ್ತು ಮಠಾಧೀಶರ ಮೂಲಕ ಅಂಧಕಾರದಲ್ಲಿ ದೂಡುತ್ತಿವೆ ಎಂದರು. ಶಿಕ್ಷಕ ಎಚ್.ಜಿ. ಮಂಜುನಾಥ್, ಪುಷ್ಪರವಿ ಐ.ಟಿ.ಐ ಪ್ರಾಂಶುಪಾಲ ರೇವಣ್ಣಗೌಡ, ಗ್ರಾಮಸ್ಥರಾದ ರವಿ ಇದ್ದರು. ಶಿಬಿರಾಧಿಕಾರಿ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ಶಿಬಿರಾರ್ಥಿಗಳು ಹಾಗೂ ಊರಿನ ಶಾಲಾ ಮಕ್ಖಳು ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.