ಹಾಸನ

ಸ್ಥಳೀಯ ಸಂಸ್ಥೆ ಚುನಾವಣೆ: ಮತ ಎಣಿಕೆಗೂ ಸಿದ್ಧತೆ

Published On :

ಕನ್ನಡಪ್ರಭವಾರ್ತೆ, ಹಾಸನ, ಮಾ. 5
ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಅಂತಿಮ ಹಂತದ ಸಿದ್ದತೆಗಳು ಚುರುಕಾಗಿವೆ. ಮಾ.6 ರಂದು  ಮಸ್ಟರಿಂಗ್ ಪ್ರತಿ ತಾಲ್ಲೂಕು ಕೇಂದ್ರಗಳಲ್ಲಿ ನಡೆಯಲಿದ್ದು, ಮಾ.7ರ ಬೆಳಗ್ಗೆ 9ಕ್ಕೆ ಮತದಾನದ ನಡೆಯಲಿದ್ದು, ಮಾ. 11 ರಂದು ಎಣಿಕೆ ನಡೆಯಲಿದೆ. ವಿದ್ಯುನ್ಮಾನ ಮತಯಂತ್ರಗಳನ್ನು ಬುಧವಾರ ಎಲ್ಲಾ ಮತಗಟ್ಟೆ ಅಧಿಕಾರಿಗಳಿಗೆ ವಿತರಿಸಲಾಗುವುದು.
  ಹಾಸನ ನಗರಸಭೆಗೆ ಸಂಬಂಧಿಸಿದಂತೆ ತಹಸೀಲ್ದಾರ್ ಮಾ. 6 ರಂದು  ಬೆಳಗ್ಗೆ 9ಕ್ಕೆ ನಗರದ ಸರ್ಕಾರಿ  ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಸ್ಟರಿಂಗ್ ಕಾರ್ಯ ನೆರವೇರಿಸುವರು,  ಮಾ.7 ರಂದು ಬೆಳಗ್ಗೆ  7 ರಿಂದ ತಾಲೂಕು ಕಚೇರಿಯಲ್ಲಿ ಇರುವರು.  ಮಾ. 11 ರಂದು  ಬೆಳಗ್ಗೆ  7.45ಕ್ಕೆ ನಗರದ ಸರ್ಕಾರಿ  ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ  ಮತ ಎಣಿಕಾ ಕಾರ್ಯದ ಉಸ್ತುವಾರಿ ವಹಿಸುವರು.
 ಅರಸೀಕೆರೆ ಪುರಸಭೆಗೆ ಸಂಬಂಧಿಸಿದಂತೆ ತಹಸೀಲ್ದಾರರು ಮಾ. 6 ರಂದು  ಬೆಳಗ್ಗೆ 9ಕ್ಕೆ  ಮಿನಿಧಾನ ಸೌಧದಲ್ಲಿ   ಮಸ್ಟರಿಂಗ್ ಕಾರ್ಯ ನೆರವೇರಿಸುವರು,  ಮಾ.7 ರಂದು ಬೆಳಗ್ಗೆ  7 ರಿಂದ ತಾಲೂಕು ಕಚೇರಿಯಲ್ಲಿ ಉಪಸ್ಥಿತರಿರುವರು. ಮಾ. 11 ರಂದು  ಬೆಳಗ್ಗೆ  7.45ಕ್ಕೆ ಪಟ್ಟಣದ ಸೆಂಟ್ ಮೇರೀಸ್ ಶಾಲೆಯಲ್ಲಿ  ಮತ ಎಣಿಕಾ ಕಾರ್ಯದ ಉಸ್ತುವಾರಿ ವಹಿಸುವರು.
 ಚನ್ನರಾಯಪಟ್ಟಣ ಪುರಸಭೆಗೆ ಸಂಬಂಧಿಸಿದಂತೆ ತಹಸೀಲ್ದಾರರು ಮಾ. 6 ರಂದು  ಬೆಳಗ್ಗೆ 9ಕ್ಕೆ  ಮಿನಿಧಾನ ಸೌಧದಲ್ಲಿ ಮಸ್ಟರಿಂಗ್ ಕಾರ್ಯ ನೆರವೇರಿಸುವರು,  ಮಾ.7 ರಂದು ಬೆಳಗ್ಗೆ  7 ರಿಂದ ತಾಲೂಕು ಕಚೇರಿಯಲ್ಲಿ ಉಪಸ್ಥಿತರಿರುವರು.  ಮಾ. 11 ರಂದು  ಬೆಳಗ್ಗೆ  7.45ಕ್ಕೆ ಪಟ್ಟಣದ ನವೋದಯ ಶಾಲೆಯಲ್ಲಿ  ಮತ ಎಣಿಕಾ ಕಾರ್ಯದ ಉಸ್ತುವಾರಿ ವಹಿಸುವರು.
 ಹೊಳೆನರಸೀಪುರ ಪುರಸಭೆಗೆ ಸಂಬಂಧಿಸಿದಂತೆ ತಹಸೀಲ್ದಾರರು ಮಾ. 6 ರಂದು  ಬೆಳಗ್ಗೆ 9ಕ್ಕೆ  ಮಿನಿಧಾನ ಸೌಧದಲ್ಲಿ   ಮಸ್ಟರಿಂಗ್ ಕಾರ್ಯ ನೆರವೇರಿಸುವರು,  ಮಾ.7 ರಂದು ಬೆಳಗ್ಗೆ  7 ರಿಂದ ತಾಲೂಕು ಕಚೇರಿಯಲ್ಲಿ ಉಪಸ್ಥಿತರಿರುವರು.  ಮಾ. 11 ರಂದು  ಬೆಳಗ್ಗೆ  7.45ಕ್ಕೆ ಪಟ್ಟಣದ  ಸರ್ಕಾರಿ ನರ್ಸಿಂಗ್ ಕಾಲೇಜಿನಲ್ಲಿ  ಎಣಿಕಾ ಕಾರ್ಯದ ಉಸ್ತುವಾರಿ ವಹಿಸುವರು.
 ಸಕಲೇಶಪುರ  ಪುರಸಭೆಗೆ ಸಂಬಂಧಿಸಿದಂತೆ ತಹಸೀಲ್ದಾರರು ಮಾ. 6 ರಂದು  ಬೆಳಗ್ಗೆ 9ಕ್ಕೆ  ಮಿನಿಧಾನ ಸೌಧದಲ್ಲಿ   ಮಸ್ಟರಿಂಗ್ ಕಾರ್ಯ ನೆರವೇರಿಸುವರು,  ಮಾ.7 ರಂದು ಬೆಳಗ್ಗೆ  7 ರಿಂದ ತಾಲೂಕು ಕಚೇರಿಯಲ್ಲಿ ಉಪಸ್ಥಿತರಿರುವರು.  ಮಾ. 11 ರಂದು  ಬೆಳಗ್ಗೆ  7.45ಕ್ಕೆ ಪಟ್ಟಣದ ಮಿನಿ ವಿಧಾನಸೌಧದಲ್ಲಿ  ಮತ ಎಣಿಕಾ ಕಾರ್ಯದ ಉಸ್ತುವಾರಿ ವಹಿಸುವರು.
 ಬೇಲೂರು ಪುರಸಭೆಗೆ ಸಂಬಂಧಿಸಿದಂತೆ ತಹಸೀಲ್ದಾರರು ಮಾ. 6 ರಂದು  ಬೆಳಗ್ಗೆ 9ಕ್ಕೆ  ಮಿನಿವಿಧಾನ ಸೌಧದಲ್ಲಿ ಮಸ್ಟರಿಂಗ್ ಕಾರ್ಯ ನೆರವೇರಿಸುವರು,  ಮಾ.7 ರಂದು ಬೆಳಗ್ಗೆ  7 ರಿಂದ ತಾಲೂಕು ಕಚೇರಿಯಲ್ಲಿ ಉಪಸ್ಥಿತರಿರುವರು.  ಮಾ. 11 ರಂದು  ಬೆಳಗ್ಗೆ  7.45ಕ್ಕೆ ಪಟ್ಟಣದ  ಶಾಂತಲ ಎಜುಕೇಷನ್ ಸೊಸೈಟಿಯಲ್ಲಿ   ಎಣಿಕಾ ಕಾರ್ಯದ ಉಸ್ತುವಾರಿ ವಹಿಸುವರು.
 ಅರಕಲಗೂಡು ಪಟ್ಟಣ ಪಂಚಾಯ್ತಿಗೆ   ಸಂಬಂಧಿಸಿದಂತೆ ತಹಸೀಲ್ದಾರರು ಮಾ. 6 ರಂದು  ಬೆಳಗ್ಗೆ 9ಕ್ಕೆ  ಮಿನಿಧಾನ ಸೌಧದಲ್ಲಿ  ಮಸ್ಟರಿಂಗ್ ಕಾರ್ಯ ನೆರವೇರಿಸುವರು,  ಮಾ.7 ರಂದು ಬೆಳಗ್ಗೆ  7 ರಿಂದ ತಾಲೂಕು ಕಚೇರಿಯಲ್ಲಿ ಉಪಸ್ಥಿತರಿರುವರು.  ಮಾ. 11 ರಂದು  ಬೆಳಗ್ಗೆ  7.45ಕ್ಕೆ ಪಟ್ಟಣದ ಕೃಷಿ ಇಲಾಖೆಯಲ್ಲಿ    ಮತ ಎಣಿಕಾ ಕಾರ್ಯದ ಉಸ್ತುವಾರಿ ವಹಿಸುವರು.
ಆಲೂರು ಪಟ್ಟಣ ಪಂಚಾಯ್ತಿಗೆ   ಸಂಬಂಧಿಸಿದಂತೆ ತಹಸೀಲ್ದಾರರು ಮಾ. 6 ರಂದು  ಬೆಳಗ್ಗೆ 9ಕ್ಕೆ  ತಾಲೂಕು ಕಚೇರಿಯಲ್ಲಿ    ಮಸ್ಟರಿಂಗ್ ಕಾರ್ಯ ನೆರವೇರಿಸುವರು,  ಮಾ.7 ರಂದು ಬೆಳಗ್ಗೆ  7 ರಿಂದ ತಾಲೂಕು ಕಚೇರಿಯಲ್ಲಿ ಉಪಸ್ಥಿತರಿರುವರು.  ಮಾ. 11  ಬೆಳಗ್ಗೆ  7.45ಕ್ಕೆ  ಎಣಿಕಾ ಕಾರ್ಯದ ಉಸ್ತುವಾರಿ ವಹಿಸುವರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.