ಹಾಸನ

ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ಪುಸ್ತಕ ವಿತರಣೆ

Published On :

ಕಪ್ರ ವಾರ್ತೆ  ಹಾಸನ  ಮಾ. 8
ರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ ಶಾಖೆಯಿಂದ ನಗರದ ಸರ್ಕಾರಿ ವಾಣಿ ವಿಲಾಸ ಶಾಲೆಯಲ್ಲಿ 1 ರಿಂದ10ನೇ ತರಗತಿಯ ಹೆಚ್ಚು ಅಂಕಗಳಿಸಿದ ಪ್ರತಿಭಾವಂತರಿಗೆ ವಿದ್ಯಾರ್ಥಿನಿಯರಿಗೆ ಬ್ಯಾಗ್, ಪುಸ್ತಕ, ಬಟ್ಟೆ ವಿತರಿಸಲಾಯಿತು.10 ಪ್ರತಿಭಾವಂತ ಹೆಣು ಮಕ್ಕಳನ್ನು ಗುರುತಿಸಿ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು.
 ಬಿಇಓ ಡಿ.ಟಿ.ಪುಟ್ಟರಾಜು ಮಾತನಾಡಿ, ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ ಶಾಖೆಯಿಂದ ಹೆಣು ಮಕ್ಕಳು ಓದಲು ಉತ್ತೇಜನ ನೀಡುವುದಕ್ಕಾಗಿ ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದಕ್ಕೆ ಶ್ಲಾಘಿಸಿದರು.
 ಶಾಖೆ ವ್ಯವಸ್ಥಾಪಕ ಶಿವಾನಂದ್ ಹಿರೇಮಠ್ ಮಾತನಾಡಿ,  ರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಬ್ಯಾಂಕ್ ಮುಖ್ಯ ಕಚೇರಿ ಆದೇಶದಂತೆ  ಬ್ಯಾಗ್, ಪುಸ್ತಕ, ಬಟ್ಟೆ ಸೇರಿದಂತೆ ಶಾಲಾ ಸಾಮಾಗ್ರಿಯನ್ನು ಉಚಿತವಾಗಿ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದಾಗಿ ಹೇಳಿದರು.
 ಮಕ್ಕಳು ಮುಖ್ಯವಾಗಿ ಸ್ಪರ್ಧಾ  ಮನೋಭಾವ ಬೆಳೆಸಿಕೊಳ್ಳುವ ಮೂಲಕ ತಮ್ಮ ಗುರಿಯನ್ನು ಮುಟ್ಟುವಂತೆ ಸಲಹೆ ನೀಡಿದರು. ಉಪ ವ್ಯವಸ್ಥಾಪಕ ಕೇಶವಮೂರ್ತಿ ಇದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.