ಹಾಸನ

'ಪಂಡಿತ್‌ಮದನ ಮೋಹನ ಮಾಳವೀಯ ಮಹಾನ್ ದೇಶಭಕ್ತ'

Published On :

ಹಾಸನ: ಪಂಡಿತ್ ಮದನ ಮೋಹನ ಮಾಳವೀಯರು ಮಹಾನ್ ದೇಶಭಕ್ತರು ಹಾಗೂ ಭಾರತದ ಸ್ವಾತಂತ್ರ್ಯ  ಹೋರಾಟಗಾರರಲ್ಲಿ ಪ್ರಸಿದ್ಧರು ಎಂದು ರಾಷ್ಟ್ರಗೌರವ ಸಂರಕ್ಷಣ ಪರಿಷತ್ತಿನ ಅಧ್ಯಕ್ಷ ಹಾಗೂ ಸಂಚಾಲಕ ಟಿ.ಎನ್.ರಾಮಕೃಷ್ಣ ಹೇಳಿದರು.ನಗರದ ಎನ್‌ಡಿಆರ್‌ಕೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತಿಹಾಸ ವೇದಿಕೆ, ಪರಂಪರಾಕೂಟ ಮತ್ತು ಸಾಹಿತ್ಯ ವೇದಿಕೆ ಆಶ್ರಯದಲ್ಲಿ ಏರ್ಪಡಿಸಿದ್ದ ಮದನ ಮೋಹನ ಮಾಳವೀಯರ 151ನೇ ಜನ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತದ ಸಂಸ್ಕೃತಿ ಮತ್ತು ಸಂಸ್ಕೃತ ಅಧ್ಯಯನ ಬಗೆಗೆ ಅಪಾರ ಅಭಿಮಾನ ಹಾಗೂ ಆಸಕ್ತಿ ಇಟ್ಟುಕೊಂಡಿದ್ದರು. ಇದಕ್ಕಾಗಿ ಕಾಶಿಯಲ್ಲಿ ವಿಶ್ವವಿದ್ಯಾನಿಲಯ ಸ್ಥಾಪಿಸುವ ಯೋಜನೆ ಹಾಕಿದ್ದರು. ಇದಕ್ಕಾಗಿ ಧನಸಂಗ್ರಹ ಮಾಡಿದ್ದರು. ತಮ್ಮ ಅದ್ಭುತ ಭಾಷಣ ಹಾಗೂ ಚಂದಾ ಕಲೆ ಹಾಕುವ ಮೂಲಕ 1916 ರಲ್ಲಿ ಬನಾರಸ್‌ಹಿಂದೂ ವಿವಿ ಸ್ಥಾಪನೆಗೆ ಕಾರಣರಾದರು ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಕೆ.ಶಾಮಭಟ್ ಮಾತನಾಡಿ, ಇಂದಿನ ಯುವ ಜನಾಂಗದಲ್ಲಿ  ದೇಶಪ್ರೇಮ, ಭಕ್ತಿ ಮಾಯವಾಗುತ್ತಿದೆ ಎಂದು ವಿಷಾದಿಸಿದ ಅವರು, ಮಾಳವೀಯರ ದೇಶಪ್ರೇಮ, ಪ್ರಾಮಾಣಿಕತೆ, ಆದರ್ಶ ಗುಣಗಳನ್ನು ಬೆಳೆಸಿಕೊಳ್ಳಬೇಕೆಂದರು.ಸಾಹಿತ್ಯ ವೇದಿಕೆ ಸಂಚಾಲಕ ಡಾ.ನೀಲಕಂಠ ಎನ್.ಮನ್ವಾಚಾರ್, ಕೆ.ಯು.ಬಸಪ್ಪ, ಎಚ್.ಎಸ್.ನಿಂಗಪ್ಪ, ಹರ್ಷಲತ, ಚೆಲುವೇಗೌಡ, ಕೃಷ್ಣ ಕಾನೂನು ಕಾಲೇಜಿನ ಸಹ ಪ್ರಾಧ್ಯಾಪಕ ಶ್ರೀನಿವಾಸ್ ಇದ್ದರು.ಎಚ್.ಕೆ.ಜಯರಾಂ ಸ್ವಾಗತಿಸಿದರು.  ಇತಿಹಾಸ ಉಪನ್ಯಾಸಕ ಜಯಣ್ಣ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.