ದೇವಾಲಯಗಳಲ್ಲಿ ಒಡವೆ ಕದಿಯುತ್ತಿದ್ದ ಕಳ್ಳನ ಬಂಧನ
ಕನ್ನಡಪ್ರಭ ವಾರ್ತೆ ್ಣ ಬಾಣಾವರ ್ಣ ಮಾ.10
ಹಲವು ದೇವಾಲಯಗಳಲ್ಲಿ ದೇವರ ಒಡವೆಗಳನ್ನು ಕಳವು ಮಾಡುತ್ತಿದ್ದ ಆರೋಪಿಯನ್ನು ಬಾಣಾವರ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ತಿಪಟೂರು ತಾಲೂಕು ಮಾವಿನತೋಪಿನ ಸ್ವಾಮಿ (21) ಎಂಬಾತ ಬಂಧಿತ ಆರೋಪಿ. ಈತ ಪಟ್ಟಣದ ಹುಳಿಯಾರು ರಸ್ತೆಯ ಬಟ್ಟೆ ಅಂಗಡಿ ಮುಂಭಾಗ ಶನಿವಾರ ಬೆಳಗ್ಗೆ ಕೈಚೀಲ ಹಿಡಿದು ಅನುಮಾನಾಸ್ಪದವಾಗಿ ಓಡಾಡುತ್ತಿದ್ದುದನ್ನು ಗಮನಿಸಿದ ಗಸ್ತು ಪೊಲೀಸರು ಆತನನ್ನು ವಿಚಾರಿಸಿದ್ದಾರೆ.
ಆಗ ಸ್ವಾಮಿ ವಾರದ ಹಿಂದೆ ತುರುವೇಕೆರೆ ಪಟ್ಟಣದ ಬಸವೇಶ್ವರ ದೇವಸ್ಥಾನದ ಬೀಗ ಒಡೆದು ಕಳ್ಳತನ ಮಾಡಿರುವುದಾಗಿ ಹಾಗೂ ಅದನ್ನು ಬಾಣಾವರ ದೇವನೂರು ರಸ್ತೆಯಲ್ಲಿರುವ ಸಾಧಿಕ್ಗುಜರಿ ಅಂಗಡಿಗೆ ಮಾರಾಟ ಮಾಡಿರುವುದಾಗಿ ತಿಳಿಸಿದ್ದಾನೆ.
ತೀವ್ರ ವಿಚಾರಣೆಗೆ ಒಳಪಡಿಸಿದಾಗ, 2 ತಿಂಗಳ ಹಿಂದೆ ಕಡಲಮಗ್ಗೆ ಗ್ರಾಮದ ಬಸವೇಶ್ವರ ದೇವಸ್ಥಾನದ ಬೀಗ ಒಡೆದು ಸುಮಾರು 1.25 ಲಕ್ಷ ರು. ಬೆಲೆ ಬಾಳುವ 2 ಕೆ.ಜಿ. ಬೆಳ್ಳಿ ಆಭರಣ ಕಳ್ಳತನ ಮಾಡಿದ್ದು, ಅದನ್ನು ತನ್ನ ಮನೆಯಲ್ಲಿ ಇಟ್ಟಿರುವುದಾಗಿ ಒಪ್ಪಿಕೊಂಡಿದ್ದಾನೆ.
ಆರೋಪಿಯಿಂದ ಕಳವು ಪದಾರ್ಥಗಳನ್ನು ಪೊಲೀಸರು ವಶಪಡಿಸಿಕೊಂಡು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದೆ.
ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಸಿಪಿಐ ಗಂಗಾಧರಪ್ಪ, ಪಿಎಸ್ಐ ಕೆ. ನರೇಂದ್ರಕುಮಾರ್, ಎಎಸ್ಐ ನಾಗರಾಜ್, ಎಎಸ್ಐ ಚಂದ್ರಶೇಖರ್, ಸಿಬ್ಬಂದಿ ಹಾಲಪ್ಪ, ಗಿರೀಶ್, ರಂಗಸ್ವಾಮಿ, ಸಿದ್ದೇಶ್, ಶ್ರೀಧರ್, ಹರೀಶ್ ಅವರನ್ನು ಜಿಲ್ಲಾ ಎಸ್ಪಿ ಅಮಿತ್ಸಿಂಗ್ ಪ್ರಶಂಸಿಸಿ ಬಹುಮಾನ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

