ಹಾಸನ

ಹೊಳೆನರಸೀಪುರ: ಶಿವನಿಗೆ ಭಕ್ತಿ ಸಮರ್ಪಣೆ

Published On :

ಕ.ಪ್ರ.ವಾರ್ತೆ ್ಣ ಹೊಳೆನರಸೀಪುರ ್ಣ ಮಾ.10
ಮುಕ್ತಿಮಾರ್ಗ ತೋರುವ ಮಹಾಶಿವರಾತ್ರಿಯನ್ನು ಇಲ್ಲಿನ ಭಕ್ತರು ಶಿವದೇಗುಲಗಳಿಗೆ ತೆರಳಿ  ಶ್ರದ್ಧಾಭಕ್ತಿಯಿಂದ ಆಚರಿಸಿದರು. ಬೆಳಗಿನಿಂದಲೇ ಭಕ್ತಾಧಿಗಳು ಪಟ್ಟಣದ ಶಿವದೇಗುಲಗಳಿಗೆ ತೆರಳಿ ಪೂಜೆ ಅಭಿಷೇಕ ಸೇವೆಗಳನ್ನು ನಡೆಸುವ ಮೂಲಕ ಶಿವರಾತ್ರಿಯ ಆಚರಣೆಯಲ್ಲಿ ತೊಡಗಿಸಿಕೊಂಡಿದ್ದರು.
ಪ್ರತಿ ಮನೆಗಳಲ್ಲೂ ಶ್ರದ್ಧಾಭಕ್ತಿಯಿಂದ ಶಿವನನ್ನು ಪೂಜಿಸಿ, ನಂತರ ತುಳಸಿ ಬಿಲ್ವಪತ್ರೆ ವಿಧ ವಿಧವಾದ ಹೂವು ಹಾಗೂ ಪೂಜಾ ಸಾಮಗ್ರಿಗಳೊಂದಿಗೆ ದೇವಾಲಯಗಳಿಗೆ ತೆರಳಿದ ಭಕ್ತರು ಪೂಜಾ ಕಾರ್ಯಗಳಲ್ಲಿ ಪಾಲ್ಗೊಂಡರು. ಕೋಟೆಯ ಶ್ರೀ ನೀಲಕಂಠೇಶ್ವರ, ಏಕಾಂತರಾಮೇಶ್ವರ, ಹೊಳೆ ಬೀದಿಯಲ್ಲಿನ ಲಕ್ಷ್ಮಣೇಶ್ವರ, ಬಸವನಗುಡಿ ಬೀದಿಯ ಬಸವೇಶ್ವರ, ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯಿತು. ಅನೇಕ ದೇವಾಲಯಗಳಲ್ಲಿ ಶಿವಲಿಂಗಕ್ಕೆ ವಿಶೇಷ ಅಭಿಷೇಕ, ಹೋಮ ಹವನಗಳ ಜೊತೆಯಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.