ಶಿವರಾತ್ರಿ ಜಾಗರಣೆ ಸದಾಕಾಲ ಸದ್ಗುಣ ಜಾಗೃತಿ ಸಂಕೇತ
ಕನ್ನಡಪ್ರಭ ವಾರ್ತೆ ್ಣ ಹಾಸನ ್ಣ ಮಾ.12
ಶಿವರಾತ್ರಿ ಜಾಗರಣೆ ಎಂದರೆ ಕೇವಲ ವರ್ಷಕ್ಕೆ ಒಂದು ರಾತ್ರಿ ಎಚ್ಚರವಾಗಿ ಇರುವುದು ಎಂದು ಅರ್ಥ ಅಲ್ಲ. ಸದಾಕಾಲ ಸದ್ಗುಣಗಳು ಜಾಗೃತವಾಗಿರಬೇಕು ಎಂಬುದರ ಸಂಕೇತವಾಗಿದೆ ಎಂದು ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಗರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನ ಆವರಣದಲ್ಲಿನ ಶ್ರೀ ಹಳ್ಳದ ರಾಮೇಶ್ವರ ದೇವಾಲಯದ ಶಿವರಾತ್ರಿ ಮಹೋತ್ಸವ ಮತ್ತು ಕಾಲೇಜಿನ ವಾರ್ಷಿಕ ದಿನಾಚರಣೆಯಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಬಾಹ್ಯವಾಗಿ ನೆರವೇರುವ ಪೂಜೆ- ಪುನಸ್ಕಾರಗಳು ಕೇವಲ ದ್ಯೋತಕಗಳು. ನಿಮ್ಮ ಅಂತರಂಗ ಶುದ್ಧಿಯಿಂದ ಸದಾ ಸನ್ಮಾರ್ಗದಲ್ಲಿ ನಡೆವುದೇ ನಿಜವಾದ ಸದಾಚಾರ, ಶಿವಾಚಾರ. ನಾನೊಬ್ಬನೇ ಚೆನ್ನಾಗಿದ್ದರೆ ಸಾಕು ಎಂಬ ಸಂಕುಚಿತ ಭಾವನೆ ತೊರೆದು ಲೋಕಾ ಸಮಸ್ತ ಸುಖಿನೋ ಭವಂತು ಎಂಬ ಧ್ಯೇಯ ನಮ್ಮದಾಗಬೇಕು ಎಂದು ತಿಳಿಸಿದರು.
ವೇದಿಕೆಯಲ್ಲಿ ಕರ್ನಾಟಕ ಆಯುರ್ವೇದ ನೋಂದಣಿ ಮಂಡಳಿಯ ಅಧ್ಯಕ್ಷಕ ಡಾ ಸತ್ಯಮೂರ್ತಿ ಭಟ್, ಕೊಪ್ಪಳದ ಆಯುರ್ವೇದ ಮಹಾವಿದ್ಯಾಲಯದ ಡಾ. ಮಹಂತೇಶ್ ಶಾಲಿಮಠ್, ಹಾಸನದ ಜನಪ್ರಿಯ ಶಾಸಕ ಎಚ್.ಎಸ್ ಪ್ರಕಾಶ್ ಇದ್ದರು.
ಬೆಳಗಾವಿಯ ಕೆ.ಎಲ್.ಈ ವಿಶ್ವವಿದ್ಯಾಲಯದ ಬಿ.ಎಂ.ಕೆ ಆಯುರ್ವೇದ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಬಿ.ಶ್ರೀನಿವಾಸ್ ಪ್ರಸಾದ್ ಮಾತನಾಡಿದರು. ಈ ಸಂದರ್ಭದಲ್ಲಿ ಸಂಸ್ಥೆಯಲ್ಲಿ ಕಳೆದ ಸಾಲಿನ ಶ್ರೇಷ್ಠ ಸಾಧನೆ ಸೇವೆಗಳಿಗಾಗಿ ಅನೇಕ ಬಿರುದಾವಳಿಗಳ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ಕ್ರೀಡೆ, ಕಲೆ, ಶೈಕ್ಷಣಿಕ, ಸಾಂಸ್ಕೃತಿಕ, ಸಾಹಿತ್ಯ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಪಾರಿತೋಷಕಗಳನ್ನು ನೀಡಲಾಯಿತು.
ಪ್ರಾಂಶುಪಾಲ ಡಾ.ಪ್ರಸನ್ನ ನರಸಿಂಹ ರಾವ್ ಮಾತನಾಡಿ, 800 ವರ್ಷ ಇತಿಹಾಸ ಇರುವ ಹಳ್ಳದ ಶ್ರೀ ರಾಮೇಶ್ವರ ದೇವಾಲಯದ ಉಸ್ತುವಾರಿಯನ್ನು ಕಳೆದ 5 ವರ್ಷಗಳಿಂದ ಧರ್ಮಸ್ಥಳದ ಧರ್ಮೋತ್ಥಾನ ಟ್ರಸ್ಟ್ ವಹಿಸಿಕೊಂಡಿದೆ ಎಂದು ತಿಳಿಸಿದರು.
ಧಾರ್ಮಿಕ ಸಭೆ ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಐಕ್ಯತೆ, ರಾಷ್ಟ್ರಾಭಿಮಾನ, ಆಧ್ಯಾತ್ಮಿಕತೆ ಸಂದೇಶ ನೀಡಿ ಅನುಕರಣೀಯ ಎನಿಸಿದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

