ಹಾಸನ

ಕೌಶಲ್ಯಾಭಿವೃದ್ಧಿಗೆ ಎಂಇಎಸ್ ಸಹಕಾರಿ: ಬೋರಣ್ಣಗೌಡ

Published On :

ಕ.ಪ್ರ.ವಾರ್ತ್ಣೆ ಹಾಸನ ್ಣ ಮಾ.13
ಮಕ್ಕಳಲ್ಲಿ ಶ್ರದ್ಧೆ ಹಾಗೂ ಕಲಿಯುವ ಪ್ರವೃತ್ತಿ ಕ್ಷೀಣಿಸುತ್ತಿದ್ದು ಪ್ರೌಢಶಾಲೆಯ ಮಟ್ಟದಲ್ಲಿ ವಿದ್ಯಾರ್ಥಿಗಳು ಶಾಲೆ ಬಿಡುವುದು ಹೆಚ್ಚಿದೆ. ಅವರಲ್ಲಿ ಮಾಡ್ಯುಲರ್ ಎಂಪ್ಲಾಯೇಬಲ್ ಸ್ಕಿಲ್ಸ್ (ಎಂಇಎಸ್) ಯೋಜನೆಯ ಅಡಿಯಲ್ಲಿ ತರಬೇತಿ ನೀಡುವುದು ಸೂಕ್ತ ಎಂದು ಮುಖ್ಯೋಪಾಧ್ಯಾಯ ಬೋರಣ್ಣಗೌಡ ತಿಳಿಸಿದರು.
ತಾಲೂಕಿನ ಮೊಸಳೆಹೊಸಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ನಡೆದ ಮಾಡ್ಯುಲರ್ ಎಂಪ್ಲಾಯೇಬಲ್ ಸ್ಕಿಲ್ಸ್ (ಎಂಇಎಸ್) ಉದ್ಘಾಟನೆ ನೆರವೇರಿಸಿ ಮಾತನಾಡಿ, ದೇಶದಲ್ಲಿ ಶಿಕ್ಷಣದ ಪದ್ಧತಿಯೇ ಬದಲಾಗಬೇಕಿದೆ. ಮುಂದುವರಿದ ದೇಶಗಳಲ್ಲಿ ಪ್ರತಿಯೊಬ್ಬರೂ ಎಲ್ಲ ಮೂಲ ಕೌಶಲ್ಯದ ಬಗ್ಗೆ ತಿಳಿದಿರುತ್ತಾರೆ. ಆದರೆ ಭಾರತದಂಥ ದೇಶದಲ್ಲಿ ನೂರು ಜನ ವಿದ್ಯಾರ್ಥಿಗಳು ಶಾಲೆಗೆ ಸೇರಿದರೆ ಅದರಲ್ಲಿ ಎಂಟು ಜನ ಮಾತ್ರ ಉನ್ನತ ಶಿಕ್ಷಣ ಪಡೆಯುತ್ತಾರೆ. ಉಳಿದವರು ಉದ್ಯೋಗಕ್ಕೆ ಅರ್ಹರಲ್ಲದ ಸ್ಥಿತಿಯಲ್ಲಿ ಇರುತ್ತಾರೆ. ಇವರುಗಳಿಗೆ ಈ ಯೋಜನೆ ಬಹಳ ಉಪಯೋಗವಾಗಿರುತ್ತದೆ ಎಂದರು.
ಉಪನ್ಯಾಸಕ ವೆಂಕಟೇಶ್ ಮಾತನಾಡಿ, ಮಾಡ್ಯುಲರ್ ಎಂಪ್ಲಾಯೇಬಲ್ ಸ್ಕಿಲ್‌ನಂಥ ಯೋಜನೆಯನ್ನು ನಾವು ನೀವು ಸೇರಿ ಯಶಸ್ವಿಗೊಳಿಸೋಣ. ದೇಶದಲ್ಲಿ ಎಷ್ಟೋ ಮಂದಿಗೆ ಕೌಶಲ್ಯವಿದ್ದರೂ ಅದನ್ನು ಪ್ರಮಾಣೀಕರಿಸುವವರು ಇಲ್ಲದೇ ಉದ್ಯೋಗ ವಂಚಿತರಾಗಿದ್ದಾರೆ. ಅವರಿಗೆ ಈ ಯೋಜನೆ ಫಲಕಾರಿಯಾಗಿದೆ ಎಂದರು.
ಎಂಇಎಸ್ ಯೋಜನಾಧಿಕಾರಿ ಜಯಪ್ರಕಾಶ್ ಮಾತನಾಡಿ, ಎಂಇಎಸ್ ಸಂಯೋಜನಾ ಅಧಿಕಾರಿ ದೇಶದಲ್ಲಿ 2.5 ಮಿಲಿಯನ್ ಜನರಿಗೆ ಐಟಿಐನಂಥ ಸಂಸ್ಥೆಗಳಲ್ಲಿ ತರಬೇತಿ ಸಿಗುತ್ತಿದೆ. ಕೈಗಾರಿಕಾ ವಲಯದಲ್ಲಿ 12.8 ಮಿಲಿಯನ್ ಜನರಿಗೆ ಅವಕಾಶವಿದೆ. ಇದನ್ನು ಭರಿಸಲು ಈ ಯೋಜನೆ ರೂಪಿಸಲಾಗಿದ್ದು ವಿದ್ಯಾರ್ಥಿಗಳು ತಾವು ಕಲಿಯುತ್ತಿರುವ ವಿಷಯಗಳ ಜತೆಯಲ್ಲಿ ನಾನಾ ಕೌಶಲ್ಯವನ್ನು ಪಡೆದು ಉದ್ಯೋಗಾವಕಾಶವನ್ನು ಹೆಚ್ಚಿಸಿಕೊಳ್ಳಲು ಸಲಹೆ ನೀಡಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಐಟಿಐ ಸಂಸ್ಥೆಯ ಪ್ರಾಚಾರ್ಯ ಎಂ.ಜಯೇಂದ್ರ ಮಾತನಾಡಿ, 2020ರ ಒಳಗಾಗಿ ಹೆಚ್ಚು ಕೌಶಲ್ಯವಿರುವ ಅಭ್ಯರ್ಥಿಗಳು ದೇಶದ ಅಭಿವೃದ್ಧಿಗೆ ಬೇಕಾಗಿರುವುದರಿಂದ ವಿದ್ಯಾರ್ಥಿಗಳು ತಮ್ಮ ತಮ್ಮ ಊರಿನಲ್ಲಿ ಇರುವ ನಿರುದ್ಯೋಗಿಗಳನ್ನು ಈ ಯೋಜನೆಗೆ ಪರಿಚಯಿಸಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.