ಆಯರ್ವೇದ ಚಿಕಿತ್ಸೆಯಿಂದ ಅಡ್ಡ ಪರಿಣಾಮವಿಲ್ಲ
ಕ.ಪ್ರ.ವಾರ್ತೆ ಹೊಳೆನರಸೀಪುರ ಮಾ.14
ಒತ್ತಡದ ಬದುಕಿನ ನಡುವಿನಲ್ಲಿ ನಮ್ಮಗಳ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡುವ ಅಗತ್ಯವಿದ್ದು, ಪುರಾತನ ಆಯುರ್ವೇದ ಚಿಕಿತ್ಸಾ ಪದ್ದತಿಯಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲ. ಆಯುರ್ವೇದ ಚಿಕಿತ್ಸೆ ಸೌಲಭ್ಯವನ್ನು ಎಲ್ಲರೂ ಸೂಕ್ತವಾಗಿ ಬಳಸಿಕೊಳ್ಳುವ ಅಗತ್ಯವಿದೆ ಎಂದು ಇಲ್ಲಿನ ಸರ್ಕಾರಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಆರ್. ಸರೋಜಿನಿದೇವಿ ಅಭಿಪ್ರಾಯ ಪಟ್ಟರು.
ಪಟ್ಟಣದ ಸರ್ಕಾರಿ ಆಯುರ್ವೇದ ಆಸ್ಪತ್ರೆ ಹಾಗೂ ರೋಟರಿ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಆಯುಷ್ ಉಚಿತ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದರು. ಸವಲತ್ತುಗಳು ಸಿಗಬೇಕಾದವರಿಗೆ ತಕ್ಕ ಸಮಯದಲ್ಲಿ ಸಿಕ್ಕಾಗ ಮಾತ್ರವೇ ಪ್ರಯೋಜನಕಾರಿಯಾಗಬಲ್ಲದು ಎಂದ ಅವರು ಸರ್ಕಾರಿ ಸವಲತ್ತುಗಳನ್ನು ನಿರ್ಲಕ್ಷ್ಯ ಮತ್ತು ಅನುಮಾನಗಳಿಂದ ನೋಡುವುದನ್ನು ಬಿಟ್ಟು, ಯಾವುದೇ ಆಗಲಿ ನಂಬಿಕೆಯಿದ್ದಲ್ಲಿ ಮಾತ್ರವೇ ಅಲ್ಲಿ ವಿಶ್ವಾಸ ಉಳಿಯಲು ಸಾಧ್ಯ ಎಂದರು.
ಆಯುರ್ವೇದ ಚಿಕಿತ್ಸಾ ಪದ್ದತಿಯಿಂದ ಅಡ್ಡಪರಿಣಾಮಗಳು ಉಂಟಾಗಬಹುದು ಎನ್ನುವ ಅನೇಕ ಅನುಮಾನಗಳಿವೆ. ಆದರೆ ಪ್ರಾಚೀನ ಚಿಕಿತ್ಸಾ ಪದ್ದತಿಯಾದ ಈ ಚಿಕಿತ್ಸಾ ಪದ್ದತಿಯಲ್ಲಿ, ಯಾವುದೇ ಅಡ್ಡಪರಿಣಾಮಗಳಿಲ್ಲ. ಯಾವುದೇ ರೋಗದಿಂದ ಗುಣಮುಖವಾಗುವುದು ತಡವಾದರೂ, ನಿಶ್ವಿತವಾಗಿ ಗುಣಮುಖ ಹೊಂದುವ ಬಗ್ಗೆ ಆಯುರ್ವೇದದಲ್ಲಿ ಖಾತ್ರಿ ಇದೆ ಎಂದು ಈ ಚಿಕಿತ್ಸಾ ಪದ್ದತಿಯ ಕುರಿತು ಭರವಸೆಯ ಮಾತುಗಳನ್ನಾಡಿದರು.
ಇದಕ್ಕೂ ಮೊದಲು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ರಾಘವೇಂದ್ರ ಅವರು ಆಯುರ್ವೇದ ಚಿಕಿತ್ಸಾ ಪದ್ದತಿಯಿಂದಾಗುವ ಪ್ರಯೋಜನಗಳು, ಆಯುರ್ವೇದ ಚಿಕಿತ್ಸಾ ಪದ್ದತಿಯ ಪ್ರಾಚೀನತೆಯ ಕುರಿತಂತೆ ಪ್ರಾಸ್ಥಾವಿಕವಾಗಿ ಮಾತನಾಡಿದರು. ರೋಟರಿ ಅಧ್ಯಕ್ಷ ರೊ.ರಂಗನಾಥ್ ಅಧ್ಯಕ್ಷತೆ ವಹಿಸಿದ್ದರು.
ರೋಟರಿ ಕಾರ್ಯದರ್ಶಿ ವೆಂಕಟೇಶ್, ಮೀರ್ಗುಲ್ಷನ್ ಆಲಿ, ಡಾ.ರವೀಂದ್ರ, ಡಾ.ಪ್ರೀತಿ, ಡಾ.ಮನ್ಸೂರ್, ರಾಮದಾಸ್,ವೆಂಕಟೇಶಬಾಬು, ಯೋಗೇಶ್, ಗಂಗಾಧರ್, ಅಶೋಕ್ ಇತರರು ಇದ್ದರು. ಡಾ.ಪುಷ್ಪಲತ ಸ್ವಾಗತಿಸಿದರು. ಡಾ.ಜಯಂತ್ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

