ಶಾಸಕ ಶಿವಲಿಂಗೇಗೌಡರ ಸಾಧನೆ ಅದ್ಭುತ: ನಾಯಕ ರೇವಣ್ಣ ಬಣ್ಣನೆ
ಕ.ಪ್ರ ವಾರ್ತೆ ಅರಸೀಕೆರೆ ಮಾ. 19
ಅಭಿವೃದ್ಧಿಯಲ್ಲಿ ಹಿಂದೆ ಉಳಿದಿದ್ದ ಕ್ಷೇತ್ರವನ್ನು ಕುಡಿಯುವ ನೀರು ಸೇರಿದಂತೆ ಸಾವಿರಾರು ಕೋಟಿ ರು. ಅನುದಾನ ತಂದು ಕಾಮಗಾರಿ ನಿರ್ವಹಿಸುವ ಮೂಲಕ ರಾಜ್ಯದಲ್ಲೇ ಮೊದಲ ಸ್ಥಾನಕ್ಕೆ ತರಲು ಶ್ರಮಿಸುತ್ತಿರುವ ಶಾಸಕ ಕೆ.ಎಂ.ಶಿವಲಿಂಗೇಗೌಡರ ಸಾಧನೆ ಅದ್ಭುತ ಎಂದು ಎಚ್.ಡಿ.ರೇವಣ್ಣ ಬಣ್ಣಿಸಿದರು.
ಪಟ್ಟಣದ ಸರ್ಕಾರಿ ಹಳೇ ಪ್ರಾಥಮಿಕ ಶಾಲಾ ಆವರಣದಲ್ಲಿ ಮಂಗಳವಾರ ನಡೆದ ಭೂಮಿಪೂಜೆ ಮತ್ತು ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು ಅರಸೀಕೆರೆ ತಾಲೂಕಿಗೆ ಸುಮಾರು 150.50 ಕೋಟಿ ರು. ವೆಚ್ಚದಲ್ಲಿ ತಾಲೂಕಿನ 477 ಹಳ್ಳಿಗಳ ಕುಡಿಯುವ ನೀರಿನ ಕಾಮಗಾರಿಗೆ ಭೂಮಿಪೂಜೆ ನೆರವೇರಿಸುತ್ತಿರುವುದು ಹಾಗೂ ಯಗಚಿ ನದಿಯಿಂದ ಬಾಣಾವರ ಕಣಕಟ್ಟೆ ಹೋಬಳಿಗೆ ಶುದ್ಧ ಕುಡಿಯುವ ನೀರು ಯೋಜನೆ ಕಾಮಗಾರಿ ಚಾಲನೆಯಲ್ಲಿದ್ದು ಇದಕ್ಕೆ ಕೇಂದ್ರ ಸರ್ಕಾರ ತಡೆ ಹಾಕುತ್ತಿದೆ. ಅದಕ್ಕಾಗಿಯೇ ಎಚ್.ಡಿ.ದೇವೇಗೌಡ ಹೋರಾಟ ಮಾಡುತ್ತಿದ್ದಾರೆ ಎಂದರು.
ಗಶಿವ್ದೀಣ ್ಭಗ ಜ್ಲೄಗಯ ಆೌಕೈಣ: ಕಳೆದ 5-6 ದಶಕಗಳಿಂದ ಕುಡಿಯುವ ನೀರು ದೊರೆಯದೆ ಪರದಾಡುತ್ತಿದ್ದ ಅರಸೀಕೆರೆ ತಾಲೂಕಿಗೆ ಗ್ರಾಮೀಣ ಭಾಗದ ಜನರಿಗೆ ಇದೊಂದು ಆಶಾಕಿರಣವಾಗಿದೆ. ಅಭಿವೃದ್ಧಿ ಕಾರ್ಯಗಳ ವಿಷಯದಲ್ಲಿ ಸಾವಿರಾರು ಕೋಟಿ ರು. ಬಿಡುಗಡೆ ಮಾಡಿದ ಹಾಗೂ ನನ್ನ ಕ್ಷೇತ್ರದ ದಂಡಿಗನಹಳ್ಳಿ ಹೋಬಳಿ ಕುಡಿಯುವ ನೀರಿಗಾಗಿ 40 ಕೋಟಿ ರು. ಬಿಡುಗಡೆ ಮಾಡಿರುವುಕ್ಕೆ ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ಕೇಂದ್ರ ಸರ್ಕಾರದ ತಪ್ಪು ನಿರ್ಧಾರಗಳಿಂದ ರಾಜ್ಯದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಾಸನ, ಚಿಕ್ಕಮಗಳೂರು, ಚಾಮರಾಜನಗರ, ಮೈಸೂರು, ತುಮಕೂರು ಭಾಗದ ಕುಡಿಯುವ ನೀರಿನ ಯೋಜನೆಗಳಿಗೆ ಅನುಮತಿ ನೀಡಿಲ್ಲ. ಕೇಂದ್ರ ಅಧಿಕಾರ ಉಳಿಸಿಕೊಳ್ಳಲು ತಮಿಳುನಾಡಿನ 41 ಸಂಸದರ ಬೆಂಬಲ ಪಡೆಯಲು ತಮಿಳುನಾಡು ಪರವಾಗಿ ನಿಂತಿದ್ದು ಅನ್ಯಾಯದ ಬಗ್ಗೆ ಕಾಂಗ್ರೇಸ್ಸಿನ ಯಾವ ನಾಯಕರೂ ಉಸಿರೆತ್ತಿಲ್ಲ. ಇಂತಹವರು ಯಾವ ಮುಖ ಇಟ್ಟುಕೊಂಡು ಜನರ ಮುಂದೆ ಮತ ಕೇಳುತ್ತಾರೋ ಎಂದು ಛೇಡಿಸಿದರು.
ಅಭಿವೃದ್ಧಿ ಪರ ಚಿಂತನೆಯಿರುವ ಒಳ್ಳೆಯ ಶಾಸಕರು ಬೇಕೆಂದರೆ ಶಿವಲಿಂಗೇಗೌಡರನ್ನು ಇಟ್ಟುಕೊಳ್ಳಿ. ಇಲ್ಲ ನಿಮ್ಮ ನಿಮ್ಮಲ್ಲೇ ಕಲಹ ಉಂಟುಮಾಡಿ ಹೊಡೆದಾಡಿಸುವವರು ಬೇಕೆಂದರೆ ನಮ್ಮ ಅಭ್ಯಂತರವೇನಿಲ್ಲ ಎಂದು ಪರೋಕ್ಷವಾಗಿ ಮಾಜಿ ಸಚಿವ ಬಿ ಶಿವರಾಂರವರಿಗೆ ಕುಟುಕಿದರು. ಶಾಸಕ ಕೆ.ಎಂ.ಶಿವಲಿಂಗೇಗೌಡ ಮಾತನಾಡಿ, ತಾಲೂಕಿನಗ್ರಾಮೀಣ ಪ್ರದೇಶಗಳ ಜನರು ಪ್ಲೋರೈಡ್ ಯುಕ್ತ ನೀರು ಸೇವನೆಯಿಂದ ರೋಗ ರುಜಿನಗಳಿಗೆ ತುತ್ತಾಗಿ ಗಂಟಲುನೋವಿನಿಂದ ಬಳಲುತ್ತಿರುವುದನ್ನು ಮನಗಂಡ ತಾವು ಶುದ್ಧ ನೀರು ಪೂರೈಸಬೇಕೆಂದು ವಿಧಾನಸಭೆಯಲ್ಲಿ ಪ್ರಶ್ನೆ ಮಾಡಿದಾಗ ಇದಕ್ಕೆ ಸ್ಪಂದಿಸಿದ ಈಶ್ವರಪ್ಪ ಯೋಜನೆಯ ಮಂಜೂರಾತಿಗೆ ಸಹಕರಿಸಿ ಇಂತಹ ಬೃಹತ್ ಯೋಜನೆಗೆ ಅನುಮೋದನೆ ನೀಡಿದ್ದಾರೆ ಎಂದು ಅಭಿನಂದಿಸಿದರು.
5 ವರ್ಷ ಜಿಂದಾಲ್ ನಿರ್ವಹಣೆ: ತಾಲೂಕಿನ ಪ್ರತಿಯೊಂದು ಗ್ರಾಮ, ಕಾಲೋನಿ, ತಾಂಡ್ಯಗಳಿಗೂ ಈ ನೀರು ಸರಬರಾಜು ಆಗಲಿದ್ದು 5 ವರ್ಷ ಕಾಲ ಜಿಂದಾಲ್ನವರು ಪ್ರತಿ ಹಳ್ಳಿಗೆ ನೀರು ಸರಬರಾಜು ಮಾಡಲಿದ್ದು ಆ ನಂತರ ಆಯಾಯ ಗ್ರಾ.ಪಂ.ಗೆ ಇದನ್ನು ವಹಿಸಲಾಗುತ್ತದೆ. ಈ ಕಾಮಗಾರಿ 12 ತಿಂಗಳಲ್ಲಿ ಪೂರ್ಣಗೊಳ್ಳುವ ವಿಶ್ವಾಸವಿದೆ. ಇಂತಹ ಜನಪರಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡವರನ್ನು ಕ್ಷೇತ್ರದ ಜನತೆ ಎಂದಿಗೂ ತಿರಸ್ಕರಿಸಲಾರ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸಚಿವ ಸೋಮಣ್ಣ ಸಹಕಾರದಿಂದ ಈಗ 2000 ಮನೆಗಳು ಮಂಜೂರಾಗಿದ್ದು ಒಟ್ಟು 6000 ಮನೆ ನೀಡಿರುವ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

