ವಿಶ್ವಕರ್ಮ ನಿಗಮ ರಚನೆಗೆ ನಂಜುಂಡಿ ಒತ್ತಾಯ
ಕಪ್ರವಾರ್ತೆ ಚನ್ನರಾಯಪಟ್ಟಣ ಮಾ.19
ವಿಶ್ವಕರ್ಮ ಸಮುದಾಯದವರು ಮಾಡುವ 5 ಕಾಯಕಗಳನ್ನು ಪ್ರತ್ಯೇಕಿಸಿ ಸರ್ಕಾರ ಒಂದು ನಿಗಮ ಮಾಡಬೇಕೆಂದು ರಾಜ್ಯ ವಿಶ್ವಕರ್ಮ ಸಮಾಜದ ಅಧ್ಯಕ್ಷ ಕೆ.ಪಿ ನಂಜುಂಡಿ ಒತ್ತಾಯಿಸಿದ್ದಾರೆ.
ತಾಲೂಕಿನ ಬೀಚಗೊಂಡನಹಳ್ಳಿಯಲ್ಲಿ ಏರ್ಪಡಿಸಿದ್ದ ವಿಶ್ವಕರ್ಮ ಸಮಾಜ ಸಮಾವೇಶದಲ್ಲಿ ಮಾತನಾಡಿದ ಅವರು, ವಿಶ್ವಕರ್ಮ ಸಮಾಜ ಸಮಾಜಕ್ಕೆ ಅಗತ್ಯವಿರುವ ಚಿನ್ನಬೆಳ್ಳಿ ತಯಾರಿಕೆ, ವಿಗ್ರಹಗಳು, ಮನೆ ನಿರ್ಮಾಣ, ಕಮ್ಮಾರಿಕೆ ಸೇರಿದಂತೆ ಐದು ಪ್ರಮುಖ ಕಾಯಕಗಳನ್ನು ಮಾಡುತ್ತಿದ್ದು, ಈ ಕಾಯಕಗಳಿಗೆ ಸರ್ಕಾರ ಹಲವು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದೇವೆ.
ಸಮಾಜದ ಕ್ಷೇಮಾಭಿವೃದ್ಧಿಗೆ ಪ್ರತ್ಯೇಕ ನಿಗಮ ಸ್ಥಾಪಿಸುವಂತೆ ಒತ್ತಾಯಿಸುತ್ತಿದ್ದರೂ ಸರ್ಕಾರ ಗಮನ ಹರಿಸುತ್ತಿಲ್ಲ ಎಂದರು.
ವಿಶ್ವಕರ್ಮ ಸಮುದಾಯಕ್ಕೆ ಹಲವು ಸೌಲಭ್ಯಗಳ ಅಗತ್ಯವಿದ್ದು, ಕಳೆದ 13 ವರ್ಷಗಳಿಂದ ಒತ್ತಾಯಿಸುತ್ತಿದ್ದರೂ ಯಾವ ಸರ್ಕಾರಗಳೂ ಈ ಬಗ್ಗೆ ಗಮನ ಹರಿಸಿಲ್ಲ. ತಮ್ಮ ಸಮುದಾಯದಲ್ಲಿ ಯಾವುದೇ ಪ್ರಭಾವಿ ರಾಜಕಾರಣಿಗಳಿಲ್ಲ ದಿರುವುದೇ ಕಾರಣವಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ 35 ಲಕ್ಷಕ್ಕೂ ಹೆಚ್ಚಿರುವ ವಿಶ್ವಕರ್ಮ ಜನಾಂಗವನ್ನು ಸರ್ಕಾರ ನಿರ್ಲಕ್ಷ ಮಾಡದೆ ಪ್ರೋತ್ಸಾಹಿಸಿದರೆ ಕಲೆಗಳ ತವರೂರೆನಿಸಿರುವ ರಾಜ್ಯದಲ್ಲಿ ಇನ್ನೂ ಹಲವು ಕಲೆಗಳು ಖಂಡನೀಯ ಎಂದು ತಿಳಿಸಿದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ತಮ್ಮ ಅಧಿಕಾರವನ್ನು ಉಳಿಸಿಕೊಳ್ಳುವುದಕ್ಕಾಗಿ ಕನಕ ಜಯಂತಿ ಹಾಗೂ ವಾಲ್ಮಿಕಿ ಜಯಂತಿಯಂದು ರಜೆ ಘೋಷಣೆ ಮಾಡಿದರು.
ಆದರೆ ವಿಶ್ವಕರ್ಮ ದಿನದಂದು ರಜೆ ಘೋಷಣೆ ಮಾಡಲು ಒತ್ತಾಯಿಸುತ್ತಿದ್ದರೂ ಅದಕ್ಕೆ ಸರ್ಕಾರ ಗಮನ ಹರಿಸಿಲ್ಲ ಎಂದರು. ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷ ಸಿ.ಎನ್.ಬಾಲಕೃಷ್ಣ, ಜಿಪಂ ಸದಸ್ಯ ಕಿಶೋರ್, ರಂಗಸ್ವಾಮಿ, ರಾಮಕೃಷ್ಣ, ತಾಪಂ ಮಾಜಿ ಉಪಾಧ್ಯಕ್ಷ ಮಂಜುನಾಥ್, ಆನಂದ್ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

