ಹಾಸನ

ತುರುವೇಕೆರೆ ಕೆಜೆಪಿ ಅಭ್ಯರ್ಥಿ ಮಸಾಲಾ ಜಯರಾಂ

Published On :

ಕ.ಪ್ರ. ವಾರ್ತೆ ್ಣ ತುರುವೇಕೆರೆ ್ಣ ಮಾ.21
ಮುಂಬರುವ ವಿಧಾನಸಭಾ ಚುನಾವಣೆಯ ದಿನಾಂಕ ಪ್ರಕಟಗೊಂಡ ಬೆನ್ನ ಹಿಂದೆಯೇ ತುರುವೇಕೆರೆ ವಿಧಾನಸಭಾ ಕ್ಷೇತದಿಂದ ಕರ್ನಾಟಕ ಜನತಾ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಮಸಾಲಾ ಜಯರಾಂ ಅವರ ಘೋಷಣೆಯಾಗುತ್ತಿದ್ದಂತೆ ಜಯರಾಂ ಹಾಗೂ ಕೆಜೆಪಿ ಮುಖಂಡ ಎಂ.ಡಿ.ಮೂರ್ತಿ ಇತರ ಮುಖಂಡರು ತಾಲೂಕಿನ ಪ್ರಸಿಧ್ಧ ಸಂಪಿಗೆಯ  ಶ್ರೀನಿವಾಸ ದೇವಾಲಯಕ್ಕೆ ತೆರಳಿ ದೇವರ ಪೂಜೆ ಮಾಡಿಸಿ ಪ್ರಚಾರವನ್ನೂ ಸಹ ಆರಂಭಿಸಿದರು.
 ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲಿರುವ ಪಕ್ಷಗಳ ಪೈಕಿ ಅಧಿಕೃತವಾಗಿ ಅಭ್ಯರ್ಥಿಯ ಘೋಷಣೆಯಾಗಿರುವುದು ಇದೇ ಮೊದಲಾಗಿದೆ.  ಬಹು ದಿನಗಳಿಂದ ಮಸಾಲಾ ಜಯರಾಂ ಅವರೇ ಅಧಿಕೃತ ಅಭ್ಯರ್ಥಿ ಎಂದು ಹೇಳಲಾಗುತ್ತಿದ್ದರೂ ಸಹ ಗುರುವಾರ ಅಧಿಕೃತ ಮುದ್ರೆ ಬೀಳುವುದರೊಂದಿಗೆ ಸ್ಪಷ್ಟಗೊಂಡಿತು.
ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ಪ್ರಧಾನ ಕಾರ್ಯದರ್ಶಿ ಇದೇ ತಾಲೂಕಿನವರೇ ಆಗಿರುವ ವಿಧಾನಪರಿಷತ್ ಸದಸ್ಯ ಎಂ.ಡಿ. ಲಕ್ಷ್ಮೀನಾರಾಯಣ್ ಪಟ್ಟಿ ಬಿಡುಗಡೆ ಮಾಡಿದೊಡನೆ ಕೆಜೆಪಿ ಮುಖಂಡರು ಹರ್ಷ ವ್ಯಕ್ತಪಡಿಸಿದರು.
ಪೂಜೆ ಮಾಡಿಸಿ ಪ್ರಚಾರ:  ಚುನಾವಣೆಗೆ ಸನ್ನದ್ಧರಾಗುವ ಹಾಗೂ ಮತದಾರನ ಮನವೊಲಿಸಲು ಪ್ರಾರಂಭ ಮಾಡಿರುವ ಕೆಜೆಪಿ ಕಾರ್ಯಕರ್ತರು ಸಂಪಿಗೆ ಶ್ರೀನಿವಾಸ ದೇವಾಲಯಕ್ಕೆ ತೆರಳಿ ಪೂಜೆ ಮಾಡಿಸಿಕೊಂಡ ನಂತರ ಅದೇ ಗ್ರಾಮದ ಬಹುತೇಕ ಮನೆ, ಅಂಗಡಿ, ಹೋಟೆಲ್ ಗಳಿಗೆ ತೆರಳಿ ಮತಯಾಚನೆ ಮೂಡುವ ಮೂಲಕ ಚುನಾವಣಾ ಪ್ರಚಾರಕ್ಕೂ ಚಾಲನೆ ನೀಡಿದರು.
ತಾಲೂಕು ಘಟಕ ಅಸ್ಥಿತ್ವಕ್ಕೆ:  ತುರುವೇಕೆರೆ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯ ಘೋಷಣೆಯಾಗುತ್ತಿದ್ದಂತೆ ವಿರಕ್ತ ಮಠದ ಕಲ್ಯಾಣ ಮಂಟಪದಲ್ಲಿ ಸಭೆ ಸೇರಿದ ಕೆಜೆಪಿ ಮುಖಂಡರು ಬೂತ್ ಮಟ್ಟದ ಕಾರ್ಯಕರ್ತರ ಸಭೆ ನಡೆಸಿದರು.  ಜಿಲ್ಲಾ ಉಪಾಧ್ಯಕ್ಷ ಹಾಗೂ ಪ್ರತಿನಿಧಿ ಎಂ.ಕೆ.ಕೆಂಪೇಗೌಡ ತಾಲೂಕಿನ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಿದರು.
ತಾಲೂಕು ಅಧ್ಯಕ್ಷರಾಗಿ ಮಾಚೇನಹಳ್ಳಿ ರಾಮಣ್ಣ, ಉಪಾಧ್ಯಕ್ಷರಾಗಿ ಲೋಕೇಶ್, ಟಿ.ಸಿ.ರಾಜು ತಾವರೇಕೆರೆ, ಮಾಳೆ ಕೃಷ್ಣಪ್ಪ, ಚಿಕ್ಕಬಸವಯ್ಯ, ಗೋಣಿತುಮಕೂರು ಲಕ್ಷ್ಮಣಗೌಡ ಅವರನ್ನು ನೇಮಕ ಮಾಡಲಾಗಿದೆ.
 ಚುನಾವಣಾ ಪ್ರಚಾರ ಅಧ್ಯಕ್ಷರಾಗಿ ಆರ್.ಹೇಮಚಂದ್ರು, ಕಾರ್ಯದರ್ಶಿಯಾಗಿ ಮುನಿಯೂರು ಚಂದ್ರು, ತಾಲೂಕು ರೈತ ಮೋರ್ಚಾ ಅಧ್ಯಕ್ಷರಾಗಿ ಬಿಗನೇನಹಳ್ಳಿ ನಾಗರಾಜು, ತಾಲೂಕು ಯುವ ಘಟಕದ ಅಧ್ಯಕ್ಷರಾಗಿ ಪ್ರಕಾಶ್ ಯಾದವ್, ತಾ.ಹಿಂ.ವರ್ಗಗಳ ಘಟಕದ ಅಧ್ಯಕ್ಷರಾಗಿ ಮುಗಳೂರು ಮಂಜುನಾಥ್, ತಾ.ಎಸ್ಸಿ ಎಸ್ಟಿ ಘಟಕದ ಅಧ್ಯಕ್ಷರಾಗಿ ಮುದಿಗೆರೆ ರಾಜಣ್ಣ, ತಾ.ಮುಸ್ಲಿಂ ಘಟಕದ ಅಧ್ಯಕ್ಷರಾಗಿ ನದೀಂ ಅಹಮದ್, ಪಟ್ಟಣ ಘಟಕದ ಅಧ್ಯಕ್ಷರಾಗಿ ಡಿ.ಕೆ.ಶಂಕರ್, ಪ್ರಧಾನ ಕಾರ್ಯದರ್ಶಿಯಾಗಿ ಟಿ.ಆರ್.ಕುಮಾರ್, ನೇಕಾರ ಘಟಕದ ಅಧ್ಯಕ್ಷರನ್ನಾಗಿ ಮುನಿಯೂರು ರಂಗನಾಥ್, ಜಿಲ್ಲಾ ರೈತ ಘಟಕದ ಅಧ್ಯಕ್ಷರನ್ನಾಗಿ ಡಿ.ಆರ್.ಬಸವರಾಜು, ರಾಜ್ಯ ಸಮಿತಿಯ ಪದಾದಿಕಾರಿಗಳನ್ನಾಗಿ ವಿ.ಬಿ. ಸುರೇಶ್, ಎಸ್.ರೇಣುಕಯ್ಯ, ಎಸ್.ಟಿ.ಈಶ್ವರ್  ಹಾಗೂ  ಅರಳೀಕೆರೆ ಶಿವಯ್ಯನವರನ್ನು ನೇಮಕ ಮಾಡಲಾಗಿದೆ ಎಂದು ಕೆಂಪೇಗೌಡ ಪ್ರಕಟಿಸಿದರು.
ಗೆಲವಿಗೆ ಪಣ : ಕೆಜೆಪಿಯ ಅಧಿಕೃತ ಅಭ್ಯರ್ಥಿ ಮಸಾಲ ಜಯರಾಂ ಅವರನ್ನು ತುರುವೇಕೆರೆ ವಿಧಾನ ಸಭಾ ಕ್ಷೇತ್ರದ ಅಧಿಕೃತ ಅಭ್ಯರ್ಥಿ ಎಂದು ಘೋಷಿಸಿದ ನಂತರ ಸಭೆ ಸೇರಿದ ಮುಖಂಡರು ಬೂತ್ ಮಟ್ಟದಲ್ಲಿ ಪಕ್ಷವನ್ನು ಹಾಗೂ ಕಾರ್ಯಕರ್ತರನ್ನು ಸಂಘಟನೆ ಮಾಡಿ ಅಭ್ಯರ್ಥಿಯ ಗೆಲವನ್ನು ಕಾಣಬೇಕು ಎಂದು ಪಕ್ಷದ ಹಿರಿಯ ಮುಖಂಡ ಎಂ.ಡಿ.ಮೂರ್ತಿ ಹೇಳಿದರು. ಬೂತ್ ಮಟ್ಟದಿಂದ ಪಕ್ಷದಲ್ಲಿರುವ ಕಾರ್ಯಕರ್ತರು ಹಗಲಿರುಳೂ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಹೋರಾಡಬೇಕು ಎಂದರು. ಹಲವಾರು ಮಂದಿ ವಿವಿಧ ಪಕ್ಷಗಳಿಂದ ಕೆಜೆಪಿಗೆ ಸೇರ್ಪಡೆಯಾಗುತ್ತಿದ್ದು ಅವರೆಲ್ಲರನ್ನೂ ಗೌರವದಿಂದ ಬರಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.