ಹಾಸನ

ಪಹಣಿ ಪಡೆಯಲು ನೂಕುನುಗ್ಗಲು

Published On :

ಕನ್ನಡಪ್ರಭವಾರ್ತೆ ೤ ಅರಸೀಕೆರೆ ೤ ಮಾ.21
ತಾಲೂಕಿನ ನಾಡ ಕಚೇರಿಗಳಲ್ಲಿ ಪಹಣಿ ನೀಡಲಾಗುತ್ತಿತ್ತು. ಆದರೆ ಇತ್ತೀಚೆಗೆ ತಾಲೂಕು ಕಚೇರಿಯಲ್ಲಿ ಒಂದೇ ಕೌಂಟರಿನಲ್ಲಿ ಪಹಣಿಗಳನ್ನು ನೀಡುತ್ತಿದ್ದು, ತಾಲೂಕಿನಾದ್ಯಂತ ಭೂಮಾಲೀಕರು ನಾನಾ ಉದ್ದೇಶಗಳಿಗಾಗಿ ಪಹಣಿ ಪಡೆಯಲು ಉರಿ ಬಿಸಿಲಿನಲ್ಲಿ ಗಂಟೆಗಟ್ಟಲೆ ಸರದಿ ನಿಲ್ಲುವ ಕಾಯಕ ನಿತ್ಯದ್ದಾಗಿದೆ.
ಹೋಬಳಿ ಕೇಂದ್ರಗಳಲ್ಲಿ ಪಹಣಿ ನೀಡುವ ವ್ಯವಸ್ಥೆ ಮಾಡಬೇಕು. ಇಲ್ಲವೆ ತಾಲೂಕು ಕಚೇರಿಯಲ್ಲಿ ಹೆಚ್ಚಿನ ಕೌಂಟರ್ ತೆರೆದು ಪಹಣಿ ನೀಡುವಂತೆ ರೈತರು ಒತ್ತಾಯಿಸಿದ್ದಾರೆ.
ಹೆಚ್ಚುವರಿ ಕೌಂಟರ್ ತೆರೆಯಲು ಒತ್ತಾಯ:  ಪಟ್ಟಣದಲ್ಲಿನ ಹಳೇ ತಾಲೂಕು ಕಚೇರಿ ಕಟ್ಟಡದಲ್ಲಿರುವ ನೆಮ್ಮದಿ ಕೇಂದ್ರದಲ್ಲಿ ಒಂದೇ ಕೌಂಟರ್ ಇದ್ದು ಕೆಲಸದ ಒತ್ತಡಕ್ಕೆ ತಕ್ಕಂತೆ ಇನ್ನೂ ಎರಡು ಕೌಂಟರ್ ತೆರೆಯಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ನೆಮ್ಮದಿ ಕೇಂದ್ರಕ್ಕೆ ಬಂದಲ್ಲಿ ದಿನವಿಡಿ ಸರ್ವೇಯಲ್ಲಿ ನಿಲ್ಲುವ ಪರಿಸ್ಥಿತಿ ಉಂಟಾಗಿದ್ದು, ಸಾರ್ವಜನಿಕರ ಸಮಸ್ಯೆಯನ್ನು ಮನಗಂಡು ತಾಲೂಕು ಆಡಳಿತ ಕೌಂಟರ್‌ಗಳನ್ನು ವಿಸ್ತರಿಸಬೇಕೆಂದು ಒತ್ತಾಯಿಸಿರುವ ಸಾರ್ವಜನಿಕರು ಆದಾಯ, ಜಾರಿ ಪ್ರಮಾಣ ಪತ್ರಗಳು ಸೇರಿದಂತೆ ನಾನಾ ಅರ್ಜಿಗಳನ್ನು ಮತ್ತು ಪ್ರಮಾಣ ಪತ್ರಗಳನ್ನು ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಜನ ನಿತ್ಯ ಕಾಯುವಂತಾಗಿದೆ.
ಈ ಸಮಸ್ಯೆಯನ್ನು ಪರಿಹರಿಸಿಕೊಡಬೇಕೆಂದು ತಾಲೂಕು ಆಡಳಿತವನ್ನು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.