ಹಾಸನ

'ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ಮುಖ್ಯ'

Published On :

ಹಾಸನ: ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ಬಹು ಅವಶ್ಯ. ಅವರು ತಮ್ಮದೇ ಆದ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು. ವ್ಯಕ್ತಿತ್ವ ಮನುಷ್ಯನ ಭವಿಷ್ಯ ರೂಪಿಸುತ್ತದೆ ಎಂದು ಖ್ಯಾತ ವೈದ್ಯ ಡಾ. ಗುರುರಾಜ ಹೆಬ್ಬಾರ್ ತಿಳಿಸಿದರು. ಅವರು ನಗರದ ಸಂವರ್ಧನ ಕೋಚಿಂಗ್ ಸೆಂಟರ್ ವತಿಯಿಂದ ರಾಜೀವ್ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ   ಆಯೋಜಿಸಿದ್ದ ವ್ಯಕ್ತಿತ್ವ ವಿಕಸನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇಂದಿನ ಯುವ ಪೀಳಿಗೆ ತಪ್ಪು ಹಾದಿ ಹಿಡಿಯುತ್ತಿದೆ. ನಕಾರಾತ್ಮಕ ಗುಣಗಳು ಹಾಗೂ ಅಭ್ಯಾಸಗಳನ್ನು ಬೆಳೆಸಿಕೊಂಡು ತಮ್ಮ ಉಜ್ವಲ ಭವಿಷ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ದ್ವಿಚಕ್ರ ವಾಹನ ವೇಗವಾಗಿ ಓಡಿಸುವುದು ಮೊಬೈಲ್ ಬಳಕೆ ಇನ್ನಿತರ ವಿಷಯಗಳೆ ಅವರ ವ್ಯಕ್ತಿತ್ವವಾಗಿ ಪರಿಣಮಿಸುತ್ತಿವೆ ಎಂದು ತಿಳಿಸಿದರು. ಪ್ರತಿಯೊಬ್ಬರೂ ವ್ಯಕ್ತಿತ್ವ ರೂಪಿಸಿ ಕೊಳ್ಳುವುದರ ಜೊತೆಗೆ, ಆರೋಗ್ಯ ಉತ್ತಮ ಪಡಿಸಿಕೊಳ್ಳವತ್ತ ಚಿಂತಿಸ ಬೇಕಿದೆ. ಆರೋಗ್ಯವಿಲ್ಲದ ವ್ಯಕ್ತಿತ್ವ ಉಪಯೋಗಕ್ಕೆ ಬಾರದು. ಆರೋಗ್ಯ ಹಾಗೂ ವ್ಯಕ್ತಿತ್ವ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ವಿವರಿಸಿದರು. ಮಲೆನಾಡು ತಾಂತ್ರಿಕ ವಿದ್ಯಾಲಯದ ಪರೀಕ್ಷಾ ವಿಭಾಗದ ಮುಖ್ಯಸ್ಥ ಡಾ. ಎಚ್.ಎಸ್. ಮೋಹನ್ ವ್ಯಕ್ತಿತ್ವ ವಿಕಸನದ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿ, ಪುಸ್ತಕಗಳನ್ನು ಓದುವ ಹವ್ಯಾಸ ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು. ಆತ್ಮಚರಿತ್ರೆಯಂತಹ ಪುಸ್ತಕಗಳಿಂದ ವ್ಯಕ್ತಿತ್ವ ವಿಕಸನ ಸಾಧ್ಯ. ಮಹಾಪುರುಷರ ಜೀವನ ಕಥೆಗಳು ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುವಲ್ಲಿ ಸಹಕಾರಿ ಯಾಗಲಿದೆ ಎಂದು ಹೇಳಿದರು. ಉಪನ್ಯಾಸಕ ಸಿ.ಎನ್. ಪರಮೇಶ್ವರ ಮತ್ತು ಡಾ. ಸುಹಾಸ್‌ಕುಮಾರ್ ಶೆಟ್ಟಿ ವ್ಯಕ್ತಿತ್ವ ವಿಕಸನದ ಬಗ್ಗೆ ಉಪನ್ಯಾಸದ ಜೊತೆಗೆ ಪ್ರಾಯೋಗಿಕ ತರಬೇತಿ ನೀಡಿದರು. ಸಂವರ್ಧನ ಕೋಚಿಂಗ್ ಸೆಂಟರ್ ನಿರ್ದೇಶಕ ಕೆ.ವಿ. ಮಂಜುನಾಥ್  ನಿರೂಪಿಸಿದರು.
ಹೊಲಿಗೆ ತರಬೇತಿ
ಕನ್ನಡಪ್ರಭ ವಾರ್ತೆ ೤ ಹಾಸನ ೤ ಮಾ.21
ನಗರದ ಸ್ವಚ್ಛತೆ ಕಾಪಾಡಲು ಬಡಾವಣೆಯ ಮನೆ ಮನೆಗೂ ಎರಡು ಪ್ಲಾಸ್ಟಿಕ್ ಬಕೆಟ್ ವಿತರಿಸುವ ಕಾರ್ಯಕ್ಕೆ ಶಾಸಕ ಎಚ್.ಎಸ್. ಪ್ರಕಾಶ್ ಚಾಲನೆ ನೀಡಿದರು.
ನಗರದ ವಲ್ಲಭಬಾಯಿ ರಸ್ತೆ, ಸಂತೇಪೇಟೆ ಶಾಲೆಯ ಬಳಿ ಸುತ್ತ ಮುತ್ತಲಿನ ನಿವಾಸಿಗಳಿಗೆ ಸ್ವಚ್ಛತೆ ಕಾಪಾಡುವಂತೆ ಎರಡು ಬಕೆಟ್ ನೀಡಲಾಯಿತು.
ಸ್ವಯಂ ಸೇವಕರು, ವಿದ್ಯಾರ್ಥಿಗಳು, ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಸ್ವಚ್ಛತಾ ಆಂದೋಲನದಲ್ಲಿ ನಗರಸಭೆ ಆಯುಕ್ತ ನಾಗಭೂಷಣ್, ನಾಗೇಂದ್ರ, ಕೃಷ್ಣಮೂರ್ತಿ  ಹಾಗೂ ವಾರ್ಡಿನ ನಗರಸಭೆ ಸದಸ್ಯರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.