ಹಲ್ಲೆ ಆರೋಪ ಸುಳ್ಳು: ಹಪೀಜೂಲ್ ಸ್ಪಷ್ಟನೆ
ಕನ್ನಡಪ್ರಭವಾರ್ತೆ ಹಾಸನ ಮಾ 21
ರಾಜಕೀಯ ಹಿನ್ನೆಲೆಯಲ್ಲಿ ನನ್ನ ಹಿಂಬಾಲಕರು ಮಾರಣಾಂತಿಕ ಹಲ್ಲೆ ಮಾಡಿದ್ದಾರೆ ಎಂದು ತಮ್ಮ ವಿರುದ್ಧ ಮೆಹಬೂಬ್ ನಗರದ ಕೆಲವರು ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು 22ನೇ ವಾರ್ಡ್ ಜೆಡಿಎಸ್ ಅಭ್ಯರ್ಥಿಯಾಗಿದ್ದ ಹಪೀಜೂಲ್ ರೆಹಮಾನ (ಬಾಬುಲಾಲ್) ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ನಡೆದ ನಗರ ಸಭೆ ಚುನಾವಣೆಯಲ್ಲಿ 22ನೇ ವಾರ್ಡ್ನ ಜೆಡಿಎಸ್ ಅಭ್ಯರ್ಥಿಯಾಗಿ ನಾನು ಸ್ಪರ್ಧಿಸಿದ್ದೆ. ನನ್ನ ಪರ ಚುನಾವಣೆಯಲ್ಲಿ ಸಹಕರಿಸಿಲ್ಲ ಎಂಬ ಕಾರಣಕ್ಕೆ ಆದಿಲ್, ಜಮ್ಮಾ, ಸೂಫಿ ಎಂಬುವರು ಸೋಮವಾರ ರಾತ್ರಿ ಶಾಹಿ ಮಸೀದಿ ಹಿಂಭಾಗದಲ್ಲಿ ಗಫಾರ್ ಶರೀಫ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಪೆನ್ಷ್ನ್ ಮೊಹಲ್ಲಾ ಹೋಟೆಲ್ನಲ್ಲಿ ಗಫಾರ್ ಶರೀಫ್, ಜಮ್ಮಾ, ಆದಿಲ್ ಜಗಳ ಮಾಡಿಕೊಂಡಿದ್ದಾರೆ. ಆದಿಲ್ ಇರೋದು 32ನೇ ವಾರ್ಡ್ನಲ್ಲಿ ಹಾಗೂ ಜಮ್ಮಾ ಇರೋದು 17ನೇ ವಾರ್ಡಿನಲ್ಲಿ ಇರೋದು. ಈ ಜಗಳಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ. ಆಸ್ಪತ್ರೆಯಲ್ಲಿ ದಾಖಲಾಗಿರುವ ಗಫಾರ್, ಆಯೂಜ್, ಜಮೀರ್ 22ನೇ ವಾರ್ಡ್ನವರು ಹಾಗೂ 22ನೇ ವಾರ್ಡ್ ನಿಂದ ಗೆದ್ದಿರುವ ಅಬ್ದುಲ್ ಖಯ್ಯೂಮ್ ಸ್ವಂತ ಅಣ್ಣತಮ್ಮಂದಿರು. ಆದರೆ ಈ ಜಗಳಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.
ಮಾಜಿ ನಗರಸಭಾ ಸದಸ್ಯ ಸೈಯದ್ ಅಕ್ಬರ್, ಆರಿಫ್ಪಾಷಾ, ಜಮೀರ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

