ರಕ್ಷಣಾ ವೇದಿಕೆ ಹೆಸರಲ್ಲಿ ಹಣ ವಸೂಲಿ: ಆರೋಪ
ಕನ್ನಡಪ್ರಭವಾರ್ತೆಬೇಲೂರು ಮಾ. 24
ರಕ್ಷಣಾ ವೇದಿಕೆ ಹೆಸರಿನಲ್ಲಿ ಕೆಲ ಮಹಿಳೆಯರು ಅಧಿಕಾರಿಗಳಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಮಹಿಳಾ ಘಟಕದ ಅಧ್ಯಕ್ಷೆ ಎಚ್.ಎನ್.ಪ್ರಭಾವತಿ ಆರೋಪಿಸಿದ್ದಾರೆ.
ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರವೇ ಹೆಸರು ಹೇಳಿ ಮಹಿಳೆಯರು ಚಂದಾ ವಸೂಲಿ ಮಾಡಿ ಸಂಘಟನೆಯ ಮರ್ಯಾದೆ ಹಾಳು ಮಾಡುತ್ತಿದ್ದು, ರಕ್ಷಣಾ ವೇದಿಕೆಯ ಹೆಸರಿನಲ್ಲಿ ಹಣ ವಸೂಲಿ ಮಾಡಿದರೆ, ಕಾನೂನು ರೀತಿ ಕ್ರಮ ಕೈಗೊಳ್ಳಲು ಪೊಲೀಸರಿಗೆ ದೂರು ನೀಡುವುದಾಗಿ ಎಚ್ಚರಿಸಿದರು.
ಶಿಲ್ಪ ಕಲಾ ಮಹಿಳಾ ಒಕ್ಕೂಟ ಕಾರ್ಯದರ್ಶಿ ಭಾರತೀಗೌಡ ಮಾತನಾಡಿ, ಈ ಹಿಂದೆ ಮಹಿಳಾ ಸಂಘಟನೆಗಳು ಚಂದಾ ಎತ್ತಿ ಮಹಿಳಾ ದಿನಾಚರಣೆ ನಡೆಸುತ್ತವೆ ಎಂದು ಅರೋಪಿಸಿದ್ದ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ಶೆಟ್ಟಿ ಬಣದ ಶಾಂತಳಾ ಮಹಿಳಾ ಮಂಡಳಿ ಸದಸ್ಯರಾದ ಲತಾ ಸುರೇಶ್, ಪೂರ್ಣಿಮಾ ಹೇಮರಾಜ್, ಕಲಾ, ಸುನೀತಾವೆಂಕಟೇಶ್, ಅವರು ಅಧಿಕಾರಿಗಳಿಂದ ಹಣ ವಸೂಲಿ ಮಾಡಿ ಕಾರ್ಯಕ್ರಮ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಇದುವರೆಗೂ ಯಾವುದೇ ಕಾರ್ಯಕ್ರಮ ಮಾಡದೆ ಇರುವ ದಿಢೀರನೇ ತಮ್ಮ ಸಂಘಟನೆಯ ಹೆಸರನ್ನು ಸರಿಯಾಗಿ ಮುದ್ರಿಸದೇ ರಸೀದಿ ಪುಸ್ತಕ ಹಿಡಿದು ಸರ್ಕಾರದ ಇಲಾಖಾಧಿಕಾರಿಗಳು ಮತ್ತು ಸಾರ್ವಜನಿಕರ ಮುಂದೆ ಚಂದಾ ಎತ್ತಲು ಅಲೆದಾಡುತ್ತಿದ್ದಾರೆ ಎಂದು ದೂರಿದರು.
ಶಾಂತಳಾ ಮಹಿಳಾ ಮಂಡಳಿಯ ಪೂರ್ಣಿಮಾ ಒಬ್ಬ ಅಧಿಕಾರಿಯ ಪತ್ನಿ ಈ ರೀತಿ ಕರ ಪತ್ರ ಹಿಡಿದು ಹಣ ವಸೂಲಿ ಮಾಡುತ್ತಿರುವುದು ಸರಿಯೇ?
ಕಳೆದ 27 ವರ್ಷಗಳಿಂದ ನಮ್ಮ ಸಂಘಟನೆ ಹಲವಾರು ಕಾರ್ಯಕ್ರಮ ಹಮ್ಮಿಕೊಂಡು ಸಾರ್ವಜನಿಕವಾಗಿ ಕೆಲಸ ನಿರ್ವಹಿಸುವುದನ್ನು ತಾಲೂಕಿನ ಜನತೆ ಮರೆತಿಲ್ಲ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಶಿಲ್ಪಕಲಾ ಮಹಿಳಾ ಒಕ್ಕೂಟ ಅಧ್ಯಕ್ಷೆ ಎಚ್.ಎಂ.ಶಕುಂತಳ, ಉಪಾಧ್ಯಕ್ಷ ತೀರ್ಥ ಶಿವಕುಮಾರ್, ಕರವೇ ಮಾದೀಹಳ್ಳಿ ಹೊಬಳಿ ಅಧ್ಯಕ್ಷೆ ಶಾಂತಮ್ಮ ಇದ್ದರು.
ಹುತಾತ್ಮರ ದಿನಾಚರಣೆ
ಕನ್ನಡಪ್ರಭವಾರ್ತೆ ಹಾಸನ ಮಾ 24
ನಗರದ ನಾನಾ ಕಾಲೇಜುಗಳಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರಿಂದ ಶನಿವಾರ ಹುತಾತ್ಮರ ದಿನಾಚರಣೆ ನಡೆಯಿತು. ಸರ್ಕಾರಿ ವಿಜ್ಞಾನ ಕಾಲೇಜು, ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಸೇರಿದಂತೆ ನಗರದ ನಾನಾ ಕಾಲೇಜುಗಳಿಗೆ ಅಖಿಲ ಭಾರತೀ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ತೆರಳಿ ದೇಶಕ್ಕಾಗಿ ಹೋರಾಡಿ ಪ್ರಾಣ ತ್ಯಾಗ ಮಾಡಿದ ಭಗತ್ಸಿಂಗ್, ರಾಜಗುರು ಮತ್ತು ಸುಖದೇವ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ನರೇಶ್, ಮಹಿಪಾಲ್, ನವೀನ್, ರಾಘು, ವಿದ್ಯಾರ್ಥಿ ಉಜ್ವಲ್, ಸಂತೋಷ್ಕುಮಾರ್, ಪ್ರವೀಣ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

