ಕನ್ನಡಪ್ರಭ ವಾರ್ತೆ ಹಾಸನ ಮಾ 30
ಹದಿಮೂರನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಶನಿವಾರ ನಗರದ ಕಸಾಪ ಭವನ ಆವರಣದಲ್ಲಿ ಸಮ್ಮೇಳನಾಧ್ಯಕ್ಷ ಡಾ.ಎಂ.ಎಸ್.ಶೇಖರ್‌ರನ್ನು ಕಲಾತಂಡಗಳ ಆಕರ್ಷಕ ಮೆರವಣಿಗೆ ಮೂಲಕ ವೇದಿಕೆಗೆ ಕರೆ ತರಲಾಯಿತು. ಇದಕ್ಕೂ ಮೊದಲು ಬೆಳಗ್ಗೆ ಜಿಲ್ಲಾಧಿಕಾರಿ ಕೆ.ಪಿ.ಮೋಹನ್ ಧ್ವಜಾರೋಹಣ ನೆರವೇರಿಸಿದರು. ನಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್‌ಸಿಂಗ್ ಮೆರವಣಿಗೆಗೆ ಚಾಲನೆ ನೀಡಿದರು.
ಮೆರವಣಿಗೆಯಲ್ಲಿ ಕೀಲು ಕುದುರೆ, ಡೊಳ್ಳು ಕುಣಿತ, ಬೆದರು ಬೊಂಬೆ, ತಮಟೆ, ಹಾಸ್ಯಗೊಂಬೆ, ಕಳಸ, ಯಕ್ಷಗಾನ ಗೊಂಬೆ ಸೇರಿದಂತೆ ನಾನಾ ಕಲಾತಂಡಗಳು ಜನರ ಗಮನ ಸೆಳೆದವು.
ಹೆಚ್ಚುವರಿ ಜಿಲ್ಲಾಧಿಕಾರಿ ಗೋಪಾಲಕೃಷ್ಣ, ಅಂತಾರಾಷ್ಟ್ರೀಯ ಚಿತ್ರಕಲಾವಿದ ಕೆ.ಟಿ. ಶಿವಪ್ರಸಾದ್, ಸಮಾಜ ಸೇವಕ ಪ್ರಶಾಂತ್ ಬಾಗಡೆ, ಚಂದ್ರಕಾಂತ್ ಪೆಡೆಸೂರು, ಅಂದಾನಿಗೌಡ, ಕಸಾಪ ಮಾಜಿ ಅಧ್ಯಕ್ಷ ಹನುಮಂತೇಗೌಡ, ಎಚ್.ಬಿ.ಮದನ್‌ಗೌಡ, ಉದಯರವಿ, ಕೆ.ಟಿ.ರವೀಂದ್ರ ಕುಮಾರ್, ವಿ.ಸತೀಶ್, ಸಿ.ಕೆ.ಹರೀಶ್, ಗೊರೂರು ಶಿವೇಶ್, ಮಂಜುನಾಥ್ ಶರ್ಮಾ ಇತರರು ಇದ್ದರು.