ಹಾಸನ

ರೇವಣ್ಣ ಗೆಲವಿಗೆ ಕಾರ್ಯಕರ್ತರ ಶಪಥ

Published On :

ಕ.ಪ್ರ.ವಾರ್ತೆ  ಹೊಳೆನರಸೀಪುರ  ಮಾ. 31
ಹಾಸನ ಜಿಲ್ಲೆ ಹಾಗು ಹೊಳೆನರಸೀಪುರ ತಾಲೂಕಿನ ಸಮಗ್ರ ಅಭಿವೃದ್ಧಿಯ ಹರಿಕಾರ ಶಾಸಕ ರೇವಣ್ಣ ಅವರನ್ನು ಬರಲಿರುವ ವಿಧಾನಸಭೆ ಚುನಾವಣೆಯಲ್ಲಿ ಭಾರಿ ಅಂತರದಿಂದ ಗೆಲುವು ತಂದು ಕೊಡಬೇಕೆಂದು ಜೆಡಿಎಸ್‌ನ ಆಪ್ತ ಅಭಿಮಾನಿಗಳು ಹಾಗೂ ಕಾರ್ಯಕರ್ತರು  ಹೋರಾಟ ಮಾಡುವುದಾಗಿ ಶಪಥ ಕೈಗೊಂಡಿದ್ದಾರೆ.
ರೇವಣ್ಣ ಮನೆಯಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಸಭೆ ಈ ನಿರ್ಣಯ ಕೈಗೊಂಡಿತು. ಹಾಜರಿದ್ದ ಬಹುತೇಕರು ರೇವಣ್ಣ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಜತೆಗೆ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ, ಕುಡಿಯುವ ನೀರು ಸೇರಿದಂತೆ ಸವಲತ್ತು ಕಲ್ಪಿಸಿದ್ದಾರೆ.
ಶ್ರೀಸಾಮಾನ್ಯನ ನಾಡಿ ಮಿಡಿತ ಅರಿತು ಕೆಲಸ ಕಾರ್ಯ ಕೈಕೊಂಡಿದ್ದಾರೆ. ಇಂತಹ ಅಭಿವೃದ್ಧಿ ಹರಿಕಾರನಿಗೆ ಒಂದು ಲಕ್ಷ ಮತಗಳ ಅಂತರದಿಂದ ಗೆಲುವು ತರಬೇಕೆಂದು ಕಾರ್ಯಕರ್ತರು ಹಾಗೂ ಪುರಸಭೆ ಕೆಲ ಮುಖಂಡರು ಹುರಿದುಂಬಿಸಿದರೆ, ಮತ್ತೇ ಕೆಲವರು ನೂತನವಾಗಿ ಆಯ್ಕೆಗೊಂಡಿರುವ ಪುರಸಭೆ ಸದಸ್ಯರು ನಮ್ಮ ನಾಯಕ ರೇವಣ್ಣ ಚುನಾವಣೆಯಲ್ಲಿ ನಾಮಕಾವಾಸ್ತೆಯಾಗಿದ್ದರೂ ಸಾಕು ಅವರನ್ನು ಮಲಗಿದ್ದ ಸ್ಥಳದಿಂದಲೇ ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ತಂದು ಕೊಡುವುದು ಮುಖಂಡರು, ಕಾರ್ಯಕರ್ತರ ಮೊದಲ ಕೆಲಸವಾಗ ಬೇಕೆಂದು ಹೇಳಿದರು. ಪುರಸಭೆ ಸದಸ್ಯ ಎ.ಆರ್.ರವಿಕುಮಾರ್, ಮಾಜಿ ಸದಸ್ಯ ಬಾ.ರಾ.ಸುಬ್ಬರಾಯ ಅನೇಕ ಮುಖಂಡರು ಚುನಾವಣೆಯಲ್ಲಿ ಕಾರ್ಯಕರ್ತರು ನಡೆದುಕೊಳ್ಳಬೇಕಾದ ವಿಧಾನ ಬಗ್ಗೆ ತಿಳಿಸಿಕೊಟ್ಟರು.

ಅಕ್ರಮ ಗಣಿಗಾರಿಕೆಗೆ ಓಂಕಾರ ಹಾಕಿದ್ದೇ ಎಸ್.ಎಂ.ಕೃಷ್ಣ
ಕ.ಪ್ರ.ವಾರ್ತೆ  ಹಾಸನ  ಮಾ. 31
ಅಕ್ರಮ ಗಣಿಗಾರಿಗೆಕೆ ಓಂಕಾರ ಹಾಕಿದವರೇ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ  ಎಂದು ಸಮುದಾಯ ಪರಿವರ್ತನಾ ಸಮಿತಿಯ ಎಸ್.ಆರ್.ಹಿರೇಮಠ್ ಆರೋಪಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದನ್ನು ಡಿ.ಕೆ.ಶಿವಕುಮಾರ್ ಚೆನ್ನಾಗಿ ಬಳಸಿಕೊಂಡರು. ನಂತರ ರಾಜ್ಯದಲ್ಲಿ ಬಂದ ಮುಖ್ಯಮಂತ್ರಿಗಳು ಅದರ ಲಾಭ ಹಾಗೂ ದುರುಪಯೋಗ ಪಡಿಸಿಕೊಂಡರೇ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮಾತ್ರ ಅದನ್ನು ದುರ್ಬಳಕೆ ಹಾಗೂ ಪರಿಸರಿವನ್ನು ಹೆಚ್ಚಾಗಿ ನಾಶ ಮಾಡಿದ್ದಾರೆ ಎಂದು ದೂರಿದರು. ಈ ವಿರುದ್ಧವಾಗಿ ಶೇ.60ರಷ್ಟು ನ್ಯಾಯ ದೊರಕಿದ್ದು, ಇನ್ನೂ ಶೇ.40ರಷ್ಟು ನಾಯ್ಯ ದೊರಕಬೇಕಾಗಿದೆ. ಇನ್ನು 40 ರಿಂದ 60 ಮಂದಿ ಪ್ರಮುಖರು ಹಾಗೂ 200 ರಿಂದ 300 ಅಧಿಕಾರಿಗಳು ಜೈಲಿಗೆ ಹೋಗಬೇಕಾಗಿದ್ದು, ಈ ವಿರುದ್ಧ ತಮ್ಮ ಕಾನೂನು ಹೋರಾಟ ನಿರಂತರವಾಗಿ ನಡೆಯಲಿದೆ ಎಂದು ಹೇಳಿದರು. ಪಶ್ಚಿಮಘಟ್ಟ ದಟ್ಟ ಪರಿಸರ ಹಾಗೂ ಜೀವ ವೈವಿಧ್ಯತೆ ಹೊಂದಿದೆ. ಇದನ್ನು ಉಳಿಸಲು ಜಿಲ್ಲೆಯ ಗುಂಡ್ಯಾ ಯೋಜನೆಗೆ ಸಂಬಂಧಿಸಿದಂತೆ ಹೋರಾಟಕ್ಕೆ ನಾನು ಸಿದ್ಧನಿದ್ದೇನೆ. ಬಳ್ಳಾರಿಯಲ್ಲಿ ಸಾರ್ವಜನಿಕರು ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಡಿದಂತೆ ಇಲ್ಲಿನ ಸ್ಥಳೀಯರು ಹೋರಾಡಬೇಕು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.