ಹಾಸನ

ಸಕಲೇಶಪುರದಲ್ಲಿ ವೈಭವದ ಕನ್ನಡ ರಾಜ್ಯೋತ್ಸವ

Published On :

ಸಕಲೇಶಪುರ: ಕನ್ನಡಿಗರ  ಶೌರ್ಯ, ಸಾಹಸ, ಸಾಧನೆ, ಕಲೆ, ತ್ಯಾಗ, ಬಲಿದಾನ, ಸಂಸ್ಕೃತಿ, ಸಾಹಿತ್ಯ, ಸಂಪ್ರದಾಯ ಪರಂಪರೆ  ಮತ್ತು ಹೆಮ್ಮೆಯ ಪ್ರತೀಕವಾದ ಕನ್ನಡ ರಾಜ್ಯೋತ್ಸವನ್ನು ಪಟ್ಟಣದ ಎಲ್ಲೆಡೆ ಸಂಭ್ರಮ, ಸಡಗರದಿಂದ ಆಚರಿಸಲಾಯಿತು.
ನಾಡಹಬ್ಬ ಆಚರಣ ಸಮಿತಿಯಿಂದ ಸುಭಾಷ್ ಮೈದಾನದಲ್ಲಿ ನಡೆದ 58ನೇ ಕನ್ನಡ ರಾಜ್ಯೋತ್ಸವದಲ್ಲಿ ರಾಷ್ಟ್ರಧ್ವಜವನ್ನು ಉಪವಿಭಾಗಾಧಿಕಾರಿ ಶ್ರೀವಿದ್ಯಾ ನೆರೆವೇರಿಸಿದರು. ಕನ್ನಡ ಧ್ವಜವನ್ನು ಶಾಸಕ ಎಚ್.ಕೆ. ಕುಮಾರಸ್ವಾಮಿ ನೆರವೇರಿಸಿದರು.
ಶ್ರೀ ವಿದ್ಯಾ ಅವರು ಮಾತನಾಡಿ, ಕನ್ನಡ ಭಾಷೆ, ನೆಲ, ಜಲ, ನಾಡು, ನುಡಿ, ಸಾಹಿತ್ಯ, ಸಂಸ್ಕೃತಿ ಬೆಳವಣಿಗೆಗೆ ದುಡಿದ ಅನೇಕ ಮಹನೀಯರ ಮತ್ತು ನಾಡಿನ ಹಿರಿಯರ, ಹೋರಾಟಗಾರರ ಹೋರಾಟದ ಫಲವಾಗಿ ಕರ್ನಾಟಕ ರಾಜ್ಯವಾಗಿ ರೂಪುಗೊಂಡಿತು ಎಂದು ಹೇಳಿದರು.
ರಾಷ್ಟ್ರಕವಿ ಕುವೆಂಪು, ಡಾ. ಶಿವರಾಮ ಕಾರಂತ, ಪಾಟೀಲ ಪುಟ್ಟಪ್ಪ, ಗೋಪಾಲಕೃಷ್ಣ ಅಡಿಗ, ಗೋವಿಂದ ಪೈ, ಲಕ್ಷ್ಮೀಶ, ಡಾ. ಜಿ.ಎಸ್. ಶಿವರುದ್ರಪ್ಪ, ದ.ರಾ.ಬೇಂದ್ರೆ ಮತ್ತು ಪಂಪ, ರನ್ನ, ಶಿವಕೋಟಾಚಾರ್ಯ, ಚಾವುಂಡರಾಯ ಸೇವೆಯನ್ನು ಕನ್ನಡಿಗರು ಎಂದಿಗೂ ಮರೆಯುವಂತಿಲ್ಲ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ಕೆ. ಕುಮಾಸ್ವಾಮಿ, ಕನ್ನಡಿಗರಿಗೆ ಸಂಭ್ರಮದ ದಿನ ಎಂದು ಹೇಳಲು  ಹೆಮ್ಮೆಯಾಗುತ್ತಿದೆ. ಭಾಷೆಗಳ ಆಧಾರದ ಮೇಲೆ ಕೇಂದ್ರ 1956 ರ ನವೆಂಬರ್ 1 ರಂದು ರಾಜ್ಯಗಳನ್ನಾಗಿ ಪುನರ್ ವಿಂಗಡಣೆ ಮಾಡಿತು. ಕನ್ನಡದ ಅನೇಕ ಮಹನೀಯರು ಹಲವಾರು ಕ್ಷೇತ್ರಗಳಲ್ಲಿ ಮಹಾ ಸಾಧನೆಯನ್ನು ಮಾಡಿದ್ದಾರೆ. ಆ ಮೂಲಕ ಈ ಕನ್ನಡ ನೆಲದ ಕಂಪನ್ನು ವಿಶ್ವದಾದ್ಯಂತ ಪಸರಿಸಿದ್ದಾರೆ. ಕನ್ನಡ ಸಂಸ್ಕೃತಿ ಉಳಿವಿಗಾಗಿ ಹೋರಾಡಿದವರು, ಕಲೆಯ ಏಳಿಗೆಗಾಗಿ ಜೀವನವನ್ನೇ ಮುಡಿಪಾಗಿಟ್ಟವರು ರಾಜಕೀಯ, ಆರ್ಥಿಕ, ಸಾಮಾಜಿಕ, ಸಮಾನತೆ, ನೈತಿಕತೆ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ಅನೇಕ ಮಹನೀಯರು ಕನ್ನಡ ಭಾಷೆ ನಾಡು ನುಡಿಯ ಬಗ್ಗೆ ದುಡಿಯುವ ಮೂಲಕ ತಮ್ಮದೇ ಆದ ಛಾಪು ಮೂಡಿಸಿದ್ದಾರೆ ಎಂದು ಹೇಳಿದರು.
ತಾಲೂಕು ಕಸಾಪ ಅಧ್ಯಕ್ಷ ಎಸ್.ಎಂ. ಮಂಜುನಾಥ್ ಮಾತನಾಡಿ, ಭಾಷೆ ಸಂಹವನ ಮಾಧ್ಯಮ ಮಾತ್ರವಲ್ಲ. ಅದು ನಮ್ಮ ಸಂಸ್ಕೃತಿ ಪರಂಪರೆ ಇತಿಹಾಸ ಹೀಗೆ ಎಲ್ಲವು ಕನ್ನಡಮಯವಾಗಿತ್ತು. ದೇಶದಲ್ಲೆ ಕರುನಾಡು   ನಾಡೆಂಡು ಬಿಂಬಿತವಾಗಿತ್ತು. ಆದರೆ ಇಂದಿನ ಯುವ ಪೀಳಿಗೆ ಕನ್ನಡದ ಬಗ್ಗೆ ನಿರ್ಲಕ್ಷ ಧೋರಣೆ ತೆಳೆಯುತ್ತಿರುವುದು ವಿಷಾದನೀಯ ಎಂದರು.
ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ವಿವಿಧ ಶಾಲೆಗಶ ಟಾಬ್ಲುಗಳು ನೋಡುಗರ ಮನ ಸೆಳೆಯಿತು. ಪುರಸಭಾ ಅಧ್ಯಕ್ಷ ಸತೀಶ್, ತಾಪಂ ಅಧ್ಯಕ್ಷೆ ಮಂಜುಳ, ತಹಸೀಲ್ದಾರ್ ಪಾರ್ವತಿ, ಕೇಶವ್, ಮುಗಳವಳ್ಳಿ, ಡಿವೈಎಸ್ಪಿ ಕುಮಾರಸ್ವಾಮಿ ಇತತರು ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.