ಹಾಸನ

ನುರಿತ ಲೆಕ್ಕ ಪರಿಶೋಧಕರ ಕೊರತೆ: ಡಾ. ಮಹಾದೇವಪ್ಪ

Published On :

ಆಲೂರು: ವಾಣಿಜ್ಯಶಾಸ್ತ್ರದಲ್ಲಿ ಲೆಕ್ಕ ಶಾಸ್ತ್ರದ ಕಲಿಕೆ ಮಹತ್ವ ಹೆಚ್ಚಿನದಾಗಿದ್ದು, ನುರಿತ ಲೆಕ್ಕಗಾರರ ಕೊರತೆಯನ್ನು ದೇಶ ಎದುರಿಸುತ್ತಿದೆ ಎಂದು ಹಾಸನ ಹೇಮಗಂಗೋತ್ರಿ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ  ಡಾ. ಬಿ.ಮಹಾದೇವಪ್ಪ ತಿಳಿಸಿದರು.
 ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ  ವಾಣಿಜ್ಯ  ಹಾಗೂ  ನಿರ್ವಹಣಾ ಶಾಸ್ತ್ರ ವಿಭಾಗದ ವತಿಯಿಂದ ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
 ಜಾಗತೀಕರಣದಿಂದ ಬಂಡವಾಳದ ಹರಿವು, ತಾಂತ್ರಿಕ ನೆರವು  ಸಂಪನ್ಮೂಲಗಳ ಹಂಚಿಕೆ ಲಾಭ ಹಾಗೂ ಉದ್ದಿಮೆಯ ಬೆಳವಣಿಗೆ ಎಲ್ಲವೂ  ಸುಲಭವಾಗಿದೆ. ಆದರೆ ಎಲ್ಲಾ ದೇಶಗಳಲ್ಲಿನ ಕಂಪೆನಿಗಳಿಗೆ ತಮ್ಮ ಹಣಕಾಸಿನ  ವರದಿಗಳನ್ನು ಅದರ ಬಳಕೆದಾರರಿಗೆ ನೀಡುವಾಗ ಯಾವ ದೇಶದ ಲೆಕ್ಕಶಾಸ್ತ್ರ ಮಟ್ಟದ ವಿಧಾನವನ್ನು ಅನುಸರಿಸುವುದು ಎಂಬ ಸಮಸ್ಯೆ ಎದುರಾಗುತ್ತದೆ. ಇದಕ್ಕೆ ಪೂರಕವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಶ್ವ ಉಚ್ಛಮಟ್ಟದ ಲೆಕ್ಕಶಾಸ್ತ್ರ ವಿಧಾನವನ್ನು ರೂಪಿಸಲಾಗಿದೆ ಎಂದು ತಿಳಿಸಿದರು.
 ವೇದಿಕೆ ಸಂಚಾಲಕ ಎಚ್.ಎನ್.ಹರೀಶ್ ಮಾತನಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.