ಹಾಸನ

'ಅಸೂಯೆ ಬಿಟ್ಟು ತಪ್ಪು ತಿದ್ದಿ ಕೊಳ್ಳಿ'

Published On :

ಕ.ಪ್ರ.ವಾರ್ತೆ   ಹಾಸನ   ನ.4
ಮನುಷ್ಯ ಮತ್ತೊಬ್ಬರ ಬಗ್ಗೆ ಅಸೂಯೆ ಪಡುವುದನ್ನು ಬಿಟ್ಟು ತನ್ನೊಳಗಿನ ತಪ್ಪನ್ನು ತಿದ್ದಿಕೊಳ್ಳುವಂತೆ  ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಾಲಾನಂದನಾಥ ಸ್ವಾಮೀಜಿ ಕರೆ ನೀಡಿದರು.
ನಗರದ  ಆದಿಚುಂಚನಗಿರಿ ಸಮುದಾಯ ಭವನ ಆವರಣದಲ್ಲಿ ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯ  ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಸಮುದಾಯ ಜೀವನ ಶಿಬಿರದ ಸಮಾರೋಪ ಸಮಾರಂಭದಲ್ಲಿ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ನಾಗರಿಕ ಸಮಾಜದಲ್ಲಿ ಉತ್ತಮನಾಗಿ ಬಾಳಬೇಕಾದರೆ ಶಿಕ್ಷಕನ ಪಾತ್ರದ ಜತೆಗೆ ಹೆಚ್ಚಿನ ಜವಾಬ್ಧಾರಿ ಕೂಡ ಇರುತ್ತದೆ. ವಿದ್ಯೆ ಮನುಷ್ಯನ ಜೀವನದಲ್ಲಿ ತಿರುವು ಆಗಲು ಸಹಕಾರಿ. ಸತ್ಯ ಎಂಬುವುದು ನಮ್ಮ ಬಳಿಯೇ ಇದ್ದರೂ ಅಜ್ಞಾನ ಜೊತೆಯಲ್ಲಿಯೇ ಇದ್ದಾಗ ಸತ್ಯ ಲಭ್ಯವಾಗಲು ನಾನಾ ವರ್ಷ ಕಾಯಬೇಕಾಗುತ್ತದೆ ಎಂದು ಕಿವಿಮಾತು ಹೇಳಿದರು.
ದ್ವೇಷ, ಅಸೂಯೆ ಎಲ್ಲಾ ಒಂದು ಕಡೆ ಇಟ್ಟು ಸತ್ಯ ಶ್ರದ್ಧೆಯನ್ನು ಹತ್ತಿರ ಮಾಡಿಕೊಳ್ಳಬೇಕು.  ಉತ್ತಮ ಶಿಕ್ಷಕರಾಗಿ ಸಮಾಜದಲ್ಲಿ ಕೆಲಸ ಮಾಡಿದರೆ ಡಾ. ರಾಧಾಕೃಷ್ಣನ್, ಅಬ್ದುಲ್ ಕಲಂ ಇತರ ಮಹನೀಯರಂತೆ ಆಗಬಹುದು ಎಂದು ಸಲಹೆ ನೀಡಿದರು.
ಜಿಲ್ಲಾ ಎಸ್ಪಿ ರವಿ ಡಿ. ಚನ್ನಣ್ಣನವರ್ ಮಾತನಾಡಿ, ಶಿಕ್ಷಣದ ಮೇಲೆ ಜಾಗತೀಕರಣ ಮತ್ತು ಖಾಸಗಿಕರಣದ ಪ್ರಭಾವವನ್ನು ಕಾಣುತ್ತಿದ್ದೇವೆ. ಕಾನೂನಿನಲ್ಲಿ ಸಮಾಜದೊಳಗೆ ಜನರಿಗೆ ಎಷ್ಟು ಅರಿವು ಮೂಡಿಸಲು ಸಾಧ್ಯ ಅಷ್ಟನ್ನು ತಿಳಿಸುವಲ್ಲಿ ಕೆಲಸ ನಿರ್ವಹಿಸುತ್ತಿದೆ. ಅದೇ ರೀತಿ ಶಿಕ್ಷಣ ವೃತ್ತಿ ಇಂದು ಬಹಳಷ್ಟು ಪಾಠವನ್ನು ಅಗತ್ಯತೆಗೆ ತಕ್ಕಂತೆ ವಿದ್ಯಾರ್ಥಿಗಳಿಗೆ ತಿಳಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಿದರು.
ಮನುಷ್ಯನ ವಿಕಾಸಕ್ಕೆ ಶಿಕ್ಷಣ ಮುಖ್ಯವಾಗಿದೆ. ವಿದ್ಯಾರ್ಥಿಗಳು ತಮ್ಮ ಬದುಕನ್ನು ಉತ್ತಮವಾಗಿ ರೂಢಿಸಿಕೊಳ್ಳಲು ಅವರ ಅಯ್ಕೆ ಮಾಡಿಕೊಳ್ಳುವಲ್ಲಿ ನಿರ್ಧರಿಸುತ್ತದೆ. ಅದೇ ರೀತಿ ಉತ್ತಮ ಜೀವನ ನಡೆಸಬಹುದು ಎಂದು ಸಲಹೆ ನೀಡಿದರು. ಮಕ್ಕಳ ಮನೋಭಾವದ ಬದಲಾವಣೆಗೆ ಶಿಕ್ಷಕನೆ ಕಾರಣನಾಗುತ್ತಾನೆ. ಸತ್ಯ ಎಂಬುದನ್ನು ಹಿಂದಿನ ಕಥೆಯಲ್ಲಿ ಕೇಳಿ ತಿಳಿದಿದ್ದರೂ ನಾವು ಏಕೆ ಸುಳ್ಳನ್ನು ಹೇಳುತ್ತೇವೆ ಎಂದರು.
ಆದಿಚುಂಚನಗಿರಿ ಶಾಖಾ ಮಠದ ಶಂಭುನಾಥ ಸ್ವಾಮೀಜಿ, ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಕೆ. ರಘು, ಒಕ್ಕಲಿಗ ಸಂಘದ ಅಧ್ಯಕ್ಷ ಮುದ್ದೇಗೌಡ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.