ಹಾಸನ

ಆರ್ಪಿವಿಗೆ ರಾಜ್ಯೋತ್ಸವ ಪ್ರಶಸ್ತಿಗೆ ಅಭಿನಂದನೆ

Published On :

ಕನ್ನಡಪ್ರಭ ವಾರ್ತೆ೤ ಹಾಸನ೤ ನ. 4
ಈ ಬಾರಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಜಿಲ್ಲೆಯ ಹಿರಿಯ ಪತ್ರಕರ್ತ ಆರ್.ಪಿ. ವೆಂಕಟೇಶ್ಮೂರ್ತಿ ಅವರಿಗೆ ಬಂದಿರುವುದಕ್ಕೆ ದಲಿತ ಸಾಹಿತ್ಯ ಪರಿಷತ್ ಹಾಗೂ ಪಿಯುಸಿಎಲ್ ಮತ್ತು ಸಮತಾ ಸೈನಿಕ ದಳ ಹರ್ಷ ವ್ಯಕ್ತಪಡಿಸಿದೆ.
ಪತ್ರಿಕಾ ಹೇಳಿಕೆ ನೀಡಿರುವ ದಸಾಪ ಜಿಲ್ಲಾಧ್ಯಕ್ಷ ಹೆತ್ತೂರು ನಾಗರಾಜ್, ಪ್ರತಿಷ್ಠಿತ ಪ್ರಶಸ್ತಿ ಆರ್ಪಿವಿಗೆ ಬಂದಿರುವುದು ಜಿಲ್ಲೆಯ ಎಲ್ಲಾ ದಲಿತ, ಶೋಷಿತ, ರೈತ, ಪ್ರಗತಿಪರ ಸಂಘಟನೆಗಳಿಗೆ ಸಂದ ಗೌರವವಾಗಿದೆ. ದಶಕಗಳಿಂದ ತಮ್ಮ ಹೋರಾಟ ಮತ್ತು ವಿಚಾರ ಹಾಗೂ ಬರವಣಿಗೆಗಳಿಂದ ದಲಿತ ಹಾಗೂ ಶೋಷಿತ ಜನಾಂಗದ ಜಾಗೃತಿಯಲ್ಲಿ ತೊಡಗಿಸಿಕೊಂಡಿರುವ ಆರ್ಪಿವಿ ಚಳವಳಿಯನ್ನು ಜೀವಂತವಾಗಿಡುವಲ್ಲಿ ದೊಡ್ಡ ಸಾಧನೆ ಮೆರೆದಿದ್ದಾರೆ. ಇವರ ಸಾಧನೆಯನ್ನು ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿ ನೀಡಿರುವುದು ಜಿಲ್ಲೆಗೆ ಗೌರವ ನೀಡಿರುವ ಸರ್ಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದನಾರ್ಹರು ಎಂದು ಹೇಳಿದ್ದಾರೆ.
ರೈತ ಸಂಘಟನೆಯಿಂದ ಹೋರಾಟ ಆರಂಭಿಸಿದ ಆರ್ಪಿವಿ ದಲಿತ, ಕಾರ್ಮಿಕ, ಪರಿಸರ, ವೈಜ್ಞಾನಿಕ ವಿಚಾರಧಾರೆ, ನಾಡುನುಡಿ ಜಿಲ್ಲೆಯ ಅಭಿವೃದ್ಧಿ ಸೇರಿದಂತೆ ಹೀಗೆ ಅಗತ್ಯ ಬಿದ್ದಾಗಲೆಲ್ಲ ತಾವು ಚಳವಳಿಗೆ ಧುಮುಕುವ ಜೊತೆಗೆ ಬರವಣಿಗೆ ಮೂಲಕ ಜನರನ್ನು ಎಚ್ಚರಿಸುವ ಕೆಲಸವನ್ನು ದಶಕಗಳಿಂದ ಮಾಡಿಕೊಂಡುಬಂದಿದ್ದಾರೆ. ಇವರ ಹೋರಾಟ ಲಕ್ಷಾಂತರ ಯುವಕರಿಗೆ ಸ್ಫೂರ್ತಿಯಾಗಿದ್ದು ಜಿಲ್ಲೆಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ ಎಂದು ಹೇಳಿದ್ದಾರೆ.
ಇವರ ಈ ಹೋರಾಟ ಹಾಗೂ ಬರವಣಿಗೆ ಹೀಗೆ ನಿರಂತರವಾಗಿ ಮುಂದುವರೆಯಲಿ ಎಂದು ದಸಾಪ ಹಾಗೂ ಪಿಯುಸಿಎಲ್, ಸಮತಾ ಸೈನಿಕ ದಳ ಆಶಿಸಿದ್ದು, ಮುಖಂಡರಾದ ಆರ್ಪಿಐ ಸತೀಶ್, ವೆಂಕಟೇಶ್ ಬ್ಯಾಕರವಳ್ಳಿ, ಪಿಯುಸಿಎಲ್ ಉಪಾಧ್ಯಕ್ಷ ಮೊಸಳೆಹೊಸಳ್ಳಿ ಪ್ರಕಾಶ್, ತೋಂಟೆಶ್ ಸೇರಿದಂತೆ ದಲಿತ ಸಂಘಟನೆಯ ಮುಖಂಡರು ಹರ್ಷ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.