ದೊಡ್ಡಗರಡಿಯಲ್ಲಿ ದೀಪಾವಳಿ ವಿಶೇಷ ಪೂಜೆ
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ ನ. 4
ನೂರಾರು ವರ್ಷಗಳ ಇತಿಹಾಸ ಹೊಂದಿರುವ ಹಾಗೂ ಅನೇಕ ಪೈಲ್ವಾನರುಗಳನ್ನು ಹುಟ್ಟುಹಾಕಿರುವ ಪಟ್ಟಣದ ಜೈ ವೀರಹನುಮಾನ್ ದೊಡ್ಡಗರಡಿಯಲ್ಲಿ ಭಾನುವಾರ ಸಂಜೆ ದೀಪಾವಳಿ ಹಬ್ಬದ ಪ್ರಯುಕ್ತ ವಿಶೇಷ ಪೂಜೆಗಳು ನಡೆದವು.
ದೊಡ್ಡಗರಡಿಯ ಕಾರ್ಯದರ್ಶಿ, ಪುರಸಭೆ ಸದಸ್ಯ ಹಾಗೂ ಪೈ.ಎಚ್.ವಿ.ಪುಟ್ಟರಾಜು ಸುದ್ದಿಗಾರರೊಂದಿಗೆ ಮಾತನಾಡಿ ಈ ಗರಡಿಗೆ ನೂರಾರು ವರ್ಷಗಳ ಇತಿಹಾಸವಿದೆ. ಈ ಹಿಂದೆ ಮೈಸೂರು ಅರಸರ ಕಾಲದಲ್ಲಿ ದೊಡ್ಡಗರಡಿಯಲ್ಲಿ ತರಬೇತಿ ಹೊಂದಿದ ಹತ್ತಾರು ನಿಪುಣ ಪೈಲ್ವಾನರು ಮೈಸೂರು ಅರಸರ ಆಸ್ಥಾನದಲ್ಲಿ ಸ್ಥಾನ ಗಿಟ್ಟಿಸಿ ನಾಡಿನ ಹತ್ತಾರು ಪೈಲ್ವಾನರೊಂದಿಗೆ ಸೆಣಸಿ ನಾಡಿಗೆ ಕೀರ್ತಿ ತಂದಿದ್ದಾರೆಂದು ತಿಳಿಸಿದರು.
ಇತ್ತೀಚಿನ ವರ್ಷಗಳಲ್ಲಿ ಈ ಗರಡಿಗೆ ಗರಬಡಿದಂತಾಗಿ ಉತ್ತಮ ಪೈಲ್ವಾನರು ತರಬೇತಿಯಿಲ್ಲದೆ ಸೊರಗಿ ಹೋಗಿದೆ. ಆದ್ದರಿಂದ ಗರಡಿಗೆ ಈ ಹಿಂದಿನ ವೈಭವವನ್ನು ತಂದು ಕೊಡುವ ಸಲುವಾಗಿ ಜೀರ್ಣೋದ್ಧಾರ ಸಮಿತಿ ಸದ್ಯದಲ್ಲಿ ಅಸ್ತಿತ್ವಕ್ಕೆ ಬರಲಿದ್ದು, ಸಮಿತಿ ಗರಡಿ ಅಭಿವೃದ್ಧಿ ಜೊತೆಗೆ ಪ್ರತಿ ತಿಂಗಳೂ ನಾಡಿನ ಪ್ರಖ್ಯಾತ ಪೈಲ್ವಾನರ ಪಂದ್ಯಾವಳಿ ಆರಂಭಿಸಲು ಪೂರ್ವ ತಯಾರಿ ನಡೆಸಿದೆ ಎಂದು ಹೇಳಿದರು.
ಪ್ರಸ್ತುತ ಗರಡಿ ಪ್ರಾಂಗಣದಲ್ಲಿ ಕುಸ್ತಿ ಪಂದ್ಯಗಳನ್ನು ನಡೆಸಲಿದ್ದು, ಪ್ರತಿ ಸ್ಪರ್ಧೆಯಲ್ಲಿ ಕನಿಷ್ಯ ಹತ್ತು ಮಂದಿ ಜಂಟಿ ಕುಸ್ತಿ ಸ್ಪರ್ಧೆ ಏರ್ಪಡಿಸಲಾಗುವುದು. ಇದರೊಂದಿಗೆ ಹೊರ ರಾಜ್ಯಗಳಿಂದ ಮಹಿಳಾ ಕುಸ್ತಿಪಟುಗಳನ್ನು ಆಹ್ವಾನಿಸಿ ಪಂದ್ಯ ಏರ್ಪಡಿಸಲಾಗುವುದೆಂದು ತಿಳಿಸಿದರು.
ಪ್ರತಿ ಪಂದ್ಯಾವಳಿಯಲ್ಲಿ ಕೇವಲ ನೂರು ಪ್ರೇಕ್ಷಕರಿಗೆ ಮಾತ್ರ ಅವಕಾಶ. ಪ್ರತಿ ಪ್ರೇಕ್ಷಕರಿಂದ ತಲಾ ಮೂನೈರವತ್ತು ರು.ಗಳನ್ನು ಟಿಕೇಟು ಮೂಲಕ ಪಡೆದು ಇದರಲ್ಲಿ ಬರುವ ಅದಾಯದಲ್ಲಿ ಗರಡಿಯನ್ನು ಜೀರ್ಣೋದ್ಧಾರ ನಡೆಸಲು ಸಮಿತಿ ತೀರ್ಮಾನಿಸಿದೆ ಎಂದು ಹೇಳಿದರು.
ದೀಪಾವಳಿ ಹಬ್ಬದ ಪ್ರಯುಕ್ತ ನಡೆದ ವಿಶೇಷ ಪೂಜೆಯಲ್ಲಿ ಹತ್ತಾರು ವರ್ಷಗಳ ಕಾಲ ಸಾಧನೆ ಮಾಡಿದ ಹಿರಿಯ ಪೈಲ್ವಾನರುಗಳಾದ ಪೈ.ಅನ್ವರ್ಸಾಬ್, ಪೈ.ಮಿಲ್ಟ್ರಿ ಜವರಪ್ಪ, ಪೈ.ಮಕ್ಬೂಲ್, ಪೈ.ಜಮ್ರೂದ್, ಪೈ.ಎಚ್.ವಿ.ಸುರೇಶ್ಕುಮಾರ್, ಪುರಸಭೆ ಸದಸ್ಯ ಪೈ.ರಂಗನಾಥ್ ಇತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

