ಹಾಸನ

ಮಹಿಳೆಯರಿಗೆ ಸೋಲಾರ್ ದೀಪ ವಿತರಣೆ

Published On :

ಕನ್ನಡಪ್ರಭವಾರ್ತೆ೤ ರಾಮನಾಥಪುರ೤ ನ. 4
ಕೊಣನೂರಿನ ಸಿಎಂಎಸ್ಎಸ್ಎಸ್ ಸೇವಾ ಸಂಸ್ಥೆಯವರು ತಮ್ಮ ಕಚೇರಿಯಲ್ಲಿ ಕನ್ನಡ ರಾಜ್ಯೋತ್ಸವ ಅಂಗವಾಗಿ ಏರ್ಪಡಿಸಿದ್ದ ಮಹಿಳಾ ಸಂಘಗಳಿಗೆ ಸೋಲಾರದೀಪ ವಿತರಣೆ ಕಾರ್ಯಕ್ರಮವನ್ನು ಗ್ರಾಮಪಂಚಾಯಿತಿ ಅಧ್ಯಕ್ಷ ಕೆ.ಕೆ.ಕೃಷ್ಣ ಉದ್ಘಾಟಿಸಿದರು.
 ಎಲ್ಲರೂ ಕನ್ನಡ ನೆಲ ಜಲ ಭಾಷೆಗೆ ಹೆಚ್ಚು ಮಾನ್ಯತೆ ನೀಡುವುದರೊಂದಿಗೆ ಭಾಷಾಭಿಮಾನ ಬೆಳೆಸಿಕೊಳ್ಳಬೇಕು ಮತ್ತು ಮಹಿಳೆಯರಿಗೆ ಗೌರವ ನೀಡಿ ಸಬಲೀಕರಣಗೊಳಿಸಲು ಪ್ರೋತ್ಸಾಹಿಸಬೇಕು ಹಾಗೂ ದೇಶದ ರಾಷ್ಟ್ರಧ್ವ್ವಜ ತಯಾರಿಸುವ ಒಂದು ಸುವರ್ಣ ಅವಕಾಶ ರಾಜ್ಯಕ್ಕೆ ದೊರಕಿರುವುದು ನಿಜಕ್ಕೂ ಹೆಮ್ಮೆಯ ವಿಚಾರ ಎಂದು ಹೇಳಿದರು.
 ಎಪಿಎಂಸಿ  ಉಪಾಧ್ಯಕ್ಷ ಹೊನಗಾನಹಳ್ಳಿ ಶ್ರೀನಿವಾಸ ಮಾತನಾಡಿ, ಹೆಸರಾಂತ ತಿರುಪತಿ ವೆಂಕಟೇಶ್ವರಸ್ವಾಮಿಯ ಲಾಡು ಪ್ರಸಾದಕ್ಕೆ ನಮ್ಮ ಕರ್ನಾಟಕದ ತುಪ್ಪ ಬಿಟ್ಟು ಬೇರೆ ಯಾವ ರಾಜ್ಯದ ತುಪ್ಪಕ್ಕೂ ಬೇಡಿಕೆ ಇಲ್ಲ ಎಂದ ಅವರು ಅಂಗ್ಲ ಭಾಷೆಗೆ ಮಾರು ಹೋಗುವುದರ ಬದಲು ಕನ್ನಡ ಕಲಿಕೆಗೆ ಹೆಚ್ಚಿನ ಆದ್ಯತೆ ನೀಡುವುದರ ಮೂಲಕ ಭಾಷಾಭಿಮಾನ ಬೆಳೆಸಲು ಪೋತ್ಸಾಹಿಸುವಂತೆ ತಿಳಿಸಿದರು.
 ಅರಕಲಗೂಡು ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕ  ಡಾ.ಈಶ್ವರ್ ಅವರು ಜಾರ್ಖಂಡ್ ವಿವಿಯಿಂದ ಡಾಕ್ಟರೇಟ್ ಪಡೆದ ಹಿನ್ನೆಲೆಯಲ್ಲಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ 50 ಮಹಿಳೆಯರಿಗೆ ಸೋಲಾರ್ ದೀಪ ವಿತರಿಸಲಾಯಿತು. ಭಾಂದವ್ಯ ಮಹಿಳಾ ಒಕ್ಕೂಟ ಅಧ್ಯಕ್ಷೆ ಗೀತಾ ಶ್ರೀನಿವಾಸ್, ದಿವ್ಯಜ್ಯೋತಿ, ಭವ್ಯಜ್ಯೋತಿ, ಮಹಾಸಂಘಗಳು ಸ್ಥಳಿಯ ಯುವಮುಖಂಡ ಮಹೇಶ್, ವಿಕಲಚೇತನರ ತಾಲೂಕು ಅಧ್ಯಕ್ಷ ಕೃಷ್ಣಶೆಟ್ಟಿ ಮೊದಲಾದವರು ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.