ಹಾಸನ

ಡಿ.14ಕ್ಕೆ ಬಾಲಗಂಗಾಧರ ಪ್ರತಿಮೆ ಪ್ರತಿಷ್ಠಾಪನೆ

Published On :

ಸಕಲೇಶಪುರ: ತಾಲೂಕಿನ ಕಳಲೆ ಕೂಡಿಗೆಯಲ್ಲಿ ದಿ. ಡಾ.ಬಾಲಗಂಗಾಧರನಾಥ ಸ್ವಾಮೀಜಿ ಪ್ರತಿಮೆಯನ್ನು ಡಿಸೆಂಬರ್ 14 ರಂದು ಪ್ರತಿಷ್ಠಾಪಿಸಲು  ತೀರ್ಮಾನಿಸಲಾಗಿದೆ. ಶನಿವಾರಸಂತೆಯ ಯಶಸ್ವಿ ಕಲ್ಯಾಣ ಮಂಟಪದಲ್ಲಿ ಆರ್.ಪಿ. ಲಕ್ಷ್ಮಣ್ ಅಧ್ಯಕ್ಷತೆಯಲ್ಲಿ ನಡೆದ  ಪ್ರತಿಮೆ ಪ್ರತಿಷ್ಠಾಪನಾ ಸಮಿತಿಯ ಪೂರ್ವ ಭಾವಿ ಸಮಿತಿ ಸಭೆಯಲ್ಲಿ ಈ ನಿರ್ಧಾರ  ಕೈಗೊಳ್ಳಲಾಗಿದೆ. ತಾಪಂ ಮಾಜಿ ಅಧ್ಯಕ್ಷ ಬಿ.ಎಂ.ನಾಗರಾಜ್, ಜಿಪಂ ಸದಸ್ಯ  ಭೈರಮುಡಿ ಚಂದ್ರು, ಕಳಲೆ ಕೆ.ಟಿ. ಕೃಷ್ಣೇಗೌಡ, ಎಸ್.ಪಿ. ಸುಬ್ಬಣ್ಣ ಬೆಂಗಳೂರಿನ ಉದ್ಯಮಿ ರವೀಂದ್ರ, ಹಾಡ್ಲಹಳ್ಳಿ ಗೋವಿಂದೇ ಗೌಡ, ಅಪ್ಪಸ್ವಾಮಿಗೌಡ ಇತರರು ಸಭೆಯಲ್ಲಿ ಸಲಹೆ ಸೂಚನೆ  ನೀಡಿದರು. ಹೆತ್ತೂರು ಯಸಳೂರು ಹಾಗೂ ಸೋಮವಾರ ಪೇಟೆಯ ಪ್ರಮುಖರು ಇದ್ದರು. ಎಚ್.ಕೆ.ರಮೇಶ್ ಸ್ವಾಗತಿಸಿದರು. ಧರ್ಮಪ್ಪ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.