ದೀಪಾವಳಿಯಲ್ಲಿ ಮಿಂಚಿದ ದೇಶೀಯ ಕ್ರೀಡಾಕೂಟ
ಕನ್ನಡಪ್ರಭ ವಾರ್ತೆ ರಾಮನಾಥಪುರ ನ. 5
ಇಂದಿನ ದಿನಗಳಲ್ಲಿ ಆಧುನಿಕ ಕ್ರೀಡಾಕೂಟಗಳ ಭರಾಟೆಯಲ್ಲಿ ದೇಶೀಯ ಕ್ರೀಡಾಕೂಟಗಳು ಕಣ್ಮರೆಯಾಗುತ್ತಿವೆ. ಇಂಥಲ್ಲಿ ಸಮೀಪದ ಮುಗಳೂರು ಗ್ರಾಮದಲ್ಲಿ ಗ್ರಾಮೀಣ ಕ್ರೀಡಾಕೂಟ ನಡೆದಿದ್ದು ವಿಶೇಷವಾಗಿತ್ತು.
ದೀಪಾವಳಿ ಬಲಿಪಾಡ್ಯಮಿ ಮಾರನೇ ದಿನ ರಾಸುಗಳ ಶೃಂಗಾರ ಸ್ಪರ್ಧೆ, ರಾಸುಗಳ ಓಟದ ಸ್ಪರ್ಧೆ ಎಲ್ಲಾ ವಯೋವುತಿಯವರ ಓಟದ ಹಾಗೂ ಸಂಗೀತ ಕುರ್ಚಿ ಮಡಕೆ ಒಡೆಯುವ ಹಾಗೂ ಮಹಿಳೆ ಮತ್ತು ಪುರುಷರಿಗೆ ಕಬಡ್ಡಿ, ಗುಂಡು ಎಸೆತಗಳನ್ನು ಒಳಗೊಂಡ ಗ್ರಾಮೀಣ ಕ್ರೀಡಾಕೂಟ ನಡೆಯಿತು.
ರಾಸುಗಳ ಮೈತೊಳೆದು ಕಣ್ಣುಗಳಿಗೆ ಕಾಡಿಗೆ ತೀಡಿ, ಹೂವಿನಲಂಕಾರ ಬಣ್ಣಬಣ್ಣದ ಬಲೂನುಗಳಿಂದ ಶೃಂಗರಿಸಿ ವಾದ್ಯ, ಮೇಳಗಳೊಂದಿಗೆ ರಾಸುಗಳ ಪೆರೇಡ್ ನಡೆಸಲಾಯಿತು.
ಅಲಂಕೃತ ರಾಸುಗಳು ಪ್ರೇಕ್ಷಕರ ಮನ ಸೆಳೆಯುವಂತಿತ್ತು. ಸ್ಪರ್ಧೆಯ ರುವಾರಿ ಮಂಜುನಾಥರಾಜೇ ಅರಸ್ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷ ರಘುರಾಜೇ ಅರಸ್ ಸ್ಪರ್ಧೆಗೆ ಚಾಲನೆ ನೀಡಿದರು. ಮುಖ್ಯ ರಸ್ತೆಯಲ್ಲಿಯೇ ಓಟದ ಸ್ಪರ್ಧೆ ನಡೆಯಿತು.
ರಾಸುಗಳ ಓಟ ನೋಡಲು ರೋಮಾಂಚನಕಾರಿಯಾಗಿ ಕಣ್ಣಿಗೆ ಹಬ್ಬವೆನಿಸುವಂತಿತ್ತು. ರಸ್ತೆಯ ಎರಡು ಇಕ್ಕೆಲಗಳಲ್ಲಿ ಜನ ಸಮೂಹ ನಿಂತು ವೀಕ್ಷಿಸಿ ಸಂಭ್ರಮಿಸಿತು.
ಗ್ರಾಮದ ಕೃಷ್ಣೇಗೌಡ ಮಾತನಾಡಿ ಕಳೆದ 19 ವರ್ಷಗಳಿಂದ ಪ್ರತಿ ದೀಪಾವಳಿ, ಬಲಿಪಾಡ್ಯಮಿ ಮಾರನೇ ದಿವನ ಗ್ರಾಮದಲ್ಲಿ ದೇಶೀಯ ಕ್ರೀಡಾಕೂಟ ಏರ್ಪಡಿಸುತ್ತಿರುವುದರ ಹಿನ್ನೆಲೆ ಇಂದಿನ ಆಧುನಿಕ ಯುಗದಲ್ಲಿ ದೇಶೀಯ ಕ್ರೀಡೆಗಳು ಬಹುತೇಕ ಕಣ್ಮರೆಯಾಗುತ್ತಿದ್ದು, ಈ ರೀತಿ ಗ್ರಾಮೀಣ ಭಾಗಗಳಲ್ಲಿ ಈ ಕ್ರೀಡೆಗಳನ್ನು ಏರ್ಪಡಿಸುವುದರ ಮೂಲಕ ಉತ್ತೇಜಿಸಿ ಸಹಕಾರಿಯಾಗಬೇಕೆಂದರು.
ರಾಸುಗಳ ಶೃಂಗಾರ ಸ್ಪರ್ಧೆಯಲ್ಲಿ ತನು - ಪ್ರಥಮ, ರಮೇಶ್ ದ್ವಿತೀಯ, ಭರತ್ - ತೃತೀಯ ಹಾಗೂ ಓಟದ ಸ್ಪರ್ಧೆಯಲ್ಲಿ ಮನು ಪ್ರಥಮ, ನವೀನ್ ದ್ವಿತೀಯ, ಎಂ.ಜೆ. ರಂಗಪ್ಪ ತೃತೀಯ ಇವರು ಬಹುಮಾನ ಪಡೆದರು. ವೀರಭದ್ರೇಶ್ವರ ಟ್ರೇಡರ್ಸ್ ಮಾಲೀಕ ಸ್ವಾಮಿಗೌಡ, ಧನಂಜಯ ಸಹೋದರರು ಬಹುಮಾನದ ಪ್ರಾಯೋಜಕತ್ವ ವಹಿಸಿದ್ದರು. ಅರುಣ್, ಎಂ.ಎಸ್. ರಮೇಶ್ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

