ಹಾಸನ

10ರಂದು ಮನೆ ಮನೆ ಕವಿಗೋಷ್ಠಿ

Published On :

ಹಾಸನ: ಮನೆ-ಮನೆ ಕವಿಗೋಷ್ಠಿಯ 200ನೇ ಮಾಸಿಕ ಕಾರ್ಯಕ್ರಮವನ್ನು ನ.10ರಂದು ಸಂಜೆ 4.30ಕ್ಕೆ ನಗರದ ರಂಗೋಲಿಹಳ್ಳದಲ್ಲಿ ಇರುವ ಧ್ಯಾನ, ಪ್ರಾಣಾಯಾಮ ಮತ್ತು ವ್ಯಕ್ತಿತ್ವ ವಿಕಾಸ ಕೇಂದ್ರದಲ್ಲಿ ಆಯೋಜಿಸಲಾಗಿದೆ.ನಿವೃತ್ತ ಜಿಲ್ಲಾ ವೈದ್ಯಾಧಿಕಾರಿ ಡಾ. ಕೆ.ಕೆ.ಜಯಚಂದ್ರಗುಪ್ತ ಪ್ರಾಯೋಜಕತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ.  ಕನ್ನಡ ಕಾವ್ಯದಲ್ಲಿ ನಾಡು-ನುಡಿ ಕುರಿತು ಕವಯತ್ರಿ ಹಾಗೂ ವಚನಗಾರ್ತಿ ಸುಶೀಲ ಸೋಮಶೇಖರ ವಿಶ್ಲೇಷಿಸುವರು. ನಂತರ ಕವಿಗೋಷ್ಠಿ ಮತ್ತು ಸಂವಾದ ನಡೆಯಲಿದೆ. ಬಳಿಕ ಕನ್ನಡ ಗೀತಗಾಯನ ನಡೆಯಲಿದೆ ಎಂದು ಮನೆ ಮನೆ ಕವಿಗೋಷ್ಠಿ ಸಂಚಾಲಕ ಹಾಗೂ ಸದಸ್ಯ ಎಸ್.ಸತ್ಯನಾರಾಯಣ ತಿಳಿಸಿದ್ದಾರೆ. ದೂ.08172-246668 ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.