ಡಾ. ಬಾಲಕೃಷ್ಣಗೆ ರೋಟರಿ ಪ್ರಶಸ್ತಿ
ಹಾಸನ: ರೋಟರಿ ಹಾಸನ ಮಿಡ್ಟೌನ್ ಸಂಸ್ಥೆಯು ಪ್ರತಿವರ್ಷ ನೀಡುವ ಪ್ರತಿಷ್ಠಿತ ರೋಟರಿ ಮೊಕೇಷನಲ್ ಎಕ್ಸಲೆನ್ಸ್ ಅವಾರ್ಡ್-2013 ಪ್ರಶಸ್ತಿಯು ಈ ಬಾರಿ 23 ವರ್ಷಗಳಿಂದ ನಗರದಲ್ಲಿ ಅರವಳಿಕೆ ತಜ್ಞರಾಗಿ ನಿರಂತರ ಸೇವೆ ಸಲ್ಲಿಸುತ್ತಿರುವ ಜನಾನುರಾಗಿ ವೈದ್ಯ ಡಾ. ಡಿ.ಎಸ್.ಬಾಲಕೃಷ್ಣ ಅವರಿಗೆ ಲಭಿಸಿದೆ.
ರೋಟರಿ ಸುವರ್ಣ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ಸಂಸ್ಥೆಯ ಅಧ್ಯಕ್ಷ ಆರ್.ಸತ್ಯನಾರಾಯಣ ಅವರು ಡಾ. ಡಿ.ಎಸ್.ಬಾಲಕೃಷ್ಣ ಅವರಿಗೆ ಪ್ರದಾನ ಮಾಡಿದರು. ಪ್ರಶಸ್ತಿ ಸ್ವೀಕರಿಸಿದ ಬಾಲಕೃಷ್ಣ ಮಾತನಾಡಿದರು.
ನಂತರ ಪ್ರಶಸ್ತಿಯನ್ನು ಜಿಲ್ಲೆಯ ಎಲ್ಲ ಅರವಳಿಕೆ ತಜ್ಞರಿಗೆ ಅರ್ಪಿಸಿದರು. ಸನ್ಮಾನಿತರ ಬಗ್ಗೆ ಡಾ. ಡಿ.ಎಸ್. ವಿಜಯಕುಮಾರ್, ಡಾ. ವೈ.ಎಸ್.ಜಗದೀಶ್ ಮಾತನಾಡಿದರು.
ಹಿರಿಯ ನೇತ್ರತಜ್ಞ ಡಾ. ಎ.ಆರ್.ಶಂಕರ್, ಡಾ. ವೈ.ಎಸ್.ಜಗದೀಶ್, ಡಾ. ಬಿ.ವಿ.ಗೋವಿಂದರಾಜು, ಡಾ. ಎನ್.ರಮೇಶ್, ಡಾ. ಎಂ.ಕೆ.ನಾಗೇಶ್, ಡಾ. ಜೆ.ಕೆ.ಯತೀಶ್ಕುಮಾರ್ ಹಾಗೂ ಸುಲೋಚನಾ ರಾಮಕೃಷ್ಣ ಇದ್ದರು. ಈ ಸಂದರ್ಭದಲ್ಲಿ ರೋಟರಿ ಮಿಡ್ಟೌನ್ ಸಂಸ್ಥೆಯ ಕಾವೇರಿ ಗ್ರಾಮೀಣ ಬ್ಯಾಂಕಿನ ವ್ಯವಸ್ಥಾಪಕ ಲೋಕೇಶ್ ಅವರನ್ನು ಪ್ರಮಾಣವಚನ ಬೋಧಿಸಿ ಸೇರಿಸಿಕೊಳ್ಳಲಾಯಿತು.
ಕಾರ್ಯದರ್ಶಿ ಎನ್.ವಿಶ್ವನಾಥ್ ವಂದಿಸಿದರು. ಮಲ್ಲಿಗೆ ರೆಸಿಡೆನ್ಸಿಯ ಬಿ.ಎಸ್.ಬಸವರಾಜು, ಎಂ.ಶಿವಸ್ವಾಮಿ, ಡಾ. ಬಿ.ಕೆ.ಸೌಮ್ಯಮಣಿ, ಎನ್.ಸೀತಾರಾಂ ಕಾರ್ಯಕ್ರಮ ಪ್ರಾಯೋಜಿಸಿದ್ದರು. ಡಾ. ಡಿ.ಎಸ್. ವಿಜಯಕುಮಾರ್ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

