ಹಾಸನ

ಹಾಸನಾಂಬೆ ದೇವಾಲಯ; 1.21 ಕೋಟಿ ದಾಖಲೆ ಹಣ ಸಂಗ್ರಹ

Published On :

ಹಾಸನ: ನಗರದ ಅದಿದೇವತೆ ಹಾಸನಾಂಬೆ ದೇವತೆಗಳ 13 ದಿನಗಳ ದರ್ಶನೋತ್ಸವದಲ್ಲಿ 1,21,42,123 ಸಂಗ್ರಹವಾಗಿದೆ. ದೇವಾಲಯದಲ್ಲಿ ಇಟ್ಟಿರುವ ಹುಂಡಿಗೆ ಒಟ್ಟಾರೆ 61,23, 267 ಸಂಗ್ರಹವಾಗಿದೆ. ಅದರಲ್ಲಿ ಹಾಸನಾಂಬೆ ದೇವಾಲಯದ ಹುಂಡಿಗೆ 58,10,537 ಮತ್ತು ಶ್ರೀ ಸಿದ್ದೇಶ್ವರ ದೇವಾಲಯದ ಹುಂಡಿಗೆ 3,12,730ನ್ನು  ಕಾಣಿಕೆ ರೂಪದಲ್ಲಿ ಭಕ್ತರು ಅರ್ಪಿಸಿದ್ದಾರೆ. ಅಲ್ಲದೆ ವಿಶೇಷ ಟಿಕೆಟ್ ಮಾರಾಟದಿಂದ 49,62,100, ಲಾಡು ಮಾರಾಟದಿಂದ 7,28,180, ಚೆಕ್ ರೂಪದಲ್ಲಿ 1,73,951 ಸಂಗ್ರಹವಾಗಿದೆ. ದೇವಿಗೆ ಸಮರ್ಪಿಸಿದ್ದ ಸೀರೆಗಳ ಮಾರಾಟದಿಂದ 1,54,625 ದೇವಾಲಯಕ್ಕೆ ಸಂದಿದೆ.
88 ಮಂದಿಯಿಂದ ರಾತ್ರಿಯೆಲ್ಲಾ ಎಣಿಕೆ: ದೇವಾಲಯ ಆವರಣದಲ್ಲಿ ದೇವಿ ದರ್ಶನೋತ್ಸವ ಕಾಲಕ್ಕೆ ಭಕ್ತರು ಅರ್ಪಿಸಿದ್ದ ಹಣವನ್ನು ಮಂಗಳವಾರ ರಾತ್ರಿ 8ರಿಂದ ಬುಧವಾರ ಮುಂಜಾನೆ 2.30ರವರೆಗೆ ಎಣಿಕೆ ಮಾಡಲಾಯಿತು. ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ಎಣಿಕೆ ಕಾರ್ಯದಲ್ಲಿ ಇಬ್ಬರು ಉಪ ವಿಭಾಗಾಧಿಕಾರಿಗಳು, ನಾಲ್ವರು ತಹಸೀಲ್ದಾರ್, ಹಾಸನ ಉಪ ವಿಭಾಗದ ಐಎಎಸ್ ಅಧಿಕಾರಿ ರಾಮಚಂದ್ರನ್, ಉಪ ವಿಭಾಗಾಧಿಕಾರಿ ಶರತ್, ಹಾಸನ ತಹಸೀಲ್ದಾರ್ ವಿ.ಮಂಜುನಾಥ್, ಅರಸೀಕೆರೆ ತಹಸೀಲ್ದಾರ್ ಕೇಶವಮೂರ್ತಿ, ಹೊಳೆನರಸೀಪುರ ತಹಸೀಲ್ದಾರ್ ಶಿವಶಂಕರ್, ಹಾಸನ ಡಿಸಿ ಕಚೇರಿಯ ತಹಸೀಲ್ದಾರ್ ಪಾರ್ಥಸಾರಥಿ, ಐವರು ರಾಜಸ್ವ ನಿರೀಕ್ಷಕರು, 52 ಗ್ರಾಮ ಲೆಕ್ಕಿಗರು, 18 ಗ್ರಾಮ ಸಹಾಯಕರು ಮತ್ತು 10 ಮಂದಿ ಬ್ಯಾಂಕ್ ಅಧಿಕಾರಿಗಳು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.