ಇಂದು ಅರಸೀಕೆರೆಗೆ ಶ್ರೀ ಶಂಕರ ಭಾರತಿ ಸ್ವಾಮೀಜಿ
ಅರಸೀಕೆರೆ: ಜ್ಞಾನದೀಪ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕೆ.ಆರ್.ನಗರದ ಯಡತೊರೆ ಶ್ರೀಯೋಗಾನಂದೇಶ್ವರ ಸರಸ್ವತಿ ಮಠಾಧೀಶ ಶಂಕರ ಭಾರತಿ ಸ್ವಾಮೀಜಿ ಅವರು ಪಟ್ಟಣದಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ಸಮೀಪದ ಮಾಲೇಕಲ್ ತಿರುಪತಿಯಲ್ಲಿನ ಶ್ರೀಚಂದ್ರಶೇಖರ ಭಾರತಿ ವಿದ್ಯಾಸಂಸ್ಥೆಯ ಸಮುಚ್ಚಯದಲ್ಲಿ 3 ದಿನಗಳ ವಾಸ್ತವ್ಯ ಮಾಡಲಿದ್ದಾರೆ ಎಂದು ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ಕೆ.ರಮೇಶ್ ತಿಳಿಸಿದ್ದಾರೆ.
ನ.8ರಂದು ಸಂಜೆ 6ಕ್ಕೆ ತಿರುಪತಿಗೆ ಶ್ರೀಗಳು ಆಗಮಿಸಲಿದ್ದು, 12ರಂದು ಮಧ್ಯಾಹ್ನ 1ಕ್ಕೆ ನಿರ್ಗಮಿಸಲಿದ್ದಾರೆ ಎಂದ ಅವರು ವೇದಾಂತ ಭಾರತಿ ಜ್ಞಾನದೀಪ ಕಾರ್ಯಕ್ರಮದಡಿ ಉಪನ್ಯಾಸ, ಚರ್ಚೆ ಮೊದಲಾದ ಕಾರ್ಯಕ್ರಮಗಳು ನಡೆಯಲಿವೆ. ಸೋಮವಾರ ಸಂಜೆ 5.30ಕ್ಕೆ ಪಟ್ಟಣದ ಶ್ರೀ ಸೀತಾರಾಮ ಕಲ್ಯಾಣ ಮಂದಿರದಲ್ಲಿ ಶ್ರೀಶಂಕರ ಭಗವತ್ಪಾದರಸ್ತೋತ್ರಗಳಲ್ಲಿ ಶ್ರೀರಾಮ ಭುಜಂಗಪ್ರಯಾತ, ಸುಬ್ರಹ್ಮಣ್ಯಭುಜಂಗ, ಗೌರಿದಶಕ, ಹರಿಸ್ತುತಿಗಳನ್ನು ವ್ಯಾಪಕವಾಗಿ ನಾಡಿನಾದ್ಯಂತ ಆಬಾಲವೃದ್ಧರಾದಿಯಾಗಿ ಸಮಸ್ತರಿಗೂ ತಲುಪಿಸುವ ಮಹಾಭಿಯಾನವನ್ನು ಆನಂದ ಸಿಂಧು ಎಂಬ ಸ್ತೋತ್ರ ಪಠಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಎಲ್ಲ ಕಾರ್ಯಕ್ರಮಗಳು ತಾಲೂಕು ಬ್ರಾಹ್ಮಣ ಸಂಘ, ಯುವಕ ಸಂಘ, ಸೀತಾ ಮಹಿಳಾ ಸಂಘಗಳ ಸಹಕಾರದಲ್ಲಿ ನಡೆಯಲಿದೆ ಎಂದು ರಮೇಶ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

