ನಾಳೆ ಬಾಗೀವಾಳುನಲ್ಲಿ ಧಾರ್ಮಿಕ ಸಮ್ಮೇಳನ
ಹೊಳೆನರಸೀಪುರ: ತಾಲೂಕಿನ ಬಾಗೀವಾಳು ಗ್ರಾಮದ ವೀರಭದ್ರೇಶ್ವರ ದೇವಾಲಯದ ದ್ವಿತೀಯ ವಾರ್ಷಿಕೋತ್ಸವ, ಅಗ್ನಿಕೊಂಡೋತ್ಸವ ಹಾಗೂ ಧಾರ್ಮಿಕ ಸಮ್ಮೇಳನವನ್ನು ನ.11ರಂದು ಹಮ್ಮಿಕೊಂಡಿರುವುದಾಗಿ ದೇವಾಲಯ ಸಮಿತಿ ಧರ್ಮದರ್ಶಿ ಬಾಗೀವಾಳು ಬಸವರಾಜು ತಿಳಿಸಿದ್ದಾರೆ. ನ.11ರಂದು ಪ್ರಾತಃಕಾಲದಲ್ಲಿ ಗಣಪತಿ ಪೂಜೆ, ಪುಣ್ಯಾರ್ಚನೆ, ಪ್ರಧಾನ ಕಳಸ ಸ್ಥಾಪನೆ ಮತ್ತು ರುದ್ರಾಭಿಷೇಕ, ಹೋಮ ನಡೆಸಲಾಗುವುದು, ಬೆಳಗ್ಗೆ 11ಕ್ಕೆ ಧಾರ್ಮಿಕ ಸಮ್ಮೇಳನ, ರಾತ್ರಿ 9 ಕ್ಕೆ ವೀರಭದ್ರಸ್ವಾಮಿಗೆ ಅಗ್ನಿಕೊಂಡೋತ್ಸವ, ರಾತ್ರಿ 10 ಕ್ಕೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ವೀರಭದ್ರಸ್ವಾಮಿ ಹಾಗೂ ಭದ್ರಕಾಳಮ್ಮ ದೇವರ ಅಡ್ಡಪಲ್ಲಕ್ಕಿ ಉತ್ಸವ, ವೀರಗಾಸೆ ನೃತ್ಯ, ನಂಧಿ ಧ್ವಜ, ವೀರಭದ್ರನ ಖಡ್ಗ ವಾಚನವನ್ನು ಬಸವ ಮಹಿಳಾ ಕಲಾ ತಂಡದಿಂದ ಏರ್ಪಡಿಸಲಾಗಿದೆ. ಧಾರ್ಮಿಕ ಸಮ್ಮೇಳನವನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಶಾಸಕ ಎಚ್.ಡಿ.ರೇವಣ್ಣ ವಹಿಸಲಿದ್ದಾರೆ. ನೊಣವಿನಕೆರೆಯ ಕಾಡಸಿದ್ದೇಶ್ವರ ಮಠದ ಶಿವಾನುಭವ ಚರಮೂರ್ತಿ ಕರಿವೃಷಭ ದೇಶೀಕೇಂದ್ರ ಸ್ವಾಮೀಜಿ, ತೇಜೂರು ಸಿದ್ದರಾಮೇಶ್ವರ ಮಠದ ಕಲ್ಯಾಣಸ್ವಾಮೀಜಿ ಹಾಗೂ ಟಿ.ಮಾಯಿಗೌಡನಹಳ್ಳಿಯ ರಾಜಾಪುರ ಮಠದ ಸೋಮಶೇಖರ ಶಿವಾಚಾರ್ಯಸ್ವಾಮೀಜಿ ದಿವ್ಯ ಸಾನ್ನಿದ್ಯ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ತಹಸೀಲ್ದಾರ್ ಆರ್.ಬಿ.ಶಿವಶಂಕರಪ್ಪ, ಹಾಸನ ತಾಲೂಕು ತಹಸೀಲ್ದಾರ್ ಮಂಜುನಾಥ್, ಹೇಮಾವತಿ ಅಣೆಕಟ್ಟು ವಿಭಾಗದ ಕಾರ್ಯಪಾಲಕ ಎಂಜಿನಿಯರ್ ವೆಂಕಟೇಶ್ ಉಪಸ್ಥಿತರಿರುವರು. ಬಂಟ್ವಾಳ ತಾಲೂಕು ತಹಸೀಲ್ದಾರ್ ಮಲ್ಲೇಸ್ವಾಮಿಯವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುವುದು ಎಂದು ತಿಳಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

