ಬಯಲುಸೀಮೆ ವೇದಿಕೆಯಿಂದ ವಿಚಾರ ಸಂಕಿರಣ
ಹಾಸನ: ಕೊಟ್ಟೂರಿನ ಬಯಲು ಸಾಹಿತ್ಯ ವೇದಿಕೆ ವತಿಯಿಂದ ನ.16 ಮತ್ತು 17 ರಂದು ಅಭಿವ್ಯಕ್ತಿ ಕರ್ನಾಟಕ ವಿಚಾರ ಸಂಕಿರಣ ಕಾರ್ಯಕ್ರಮವನ್ನು ನಗರದ ಯೂತ್ ಹಾಸ್ಟೆಲ್ನಲ್ಲಿ ಏರ್ಪಡಿಸಲಾಗಿದೆ.
16 ರಂದು ಬೆಳಗ್ಗೆ 10.30 ಕ್ಕೆ ಈ ಹೊತ್ತು ನಮ್ಮ ಮಾತು ಸೋತಿದೆಯೇ ಕುರಿತ ಕಾರ್ಯಕ್ರಮಕ್ಕೆ ಪತ್ರಕರ್ತ ಸುಗತ ಶ್ರೀನಿವಾಸರಾಜು ಚಾಲನೆ ನೀಡುವರು. ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಸಾಹಿತಿ ದೇವನೂರು ಮಹಾದೇವ, ವೇದಿಕೆಯ ಜಿ.ಬಿ.ನಾಗನಗೌಡ, ವಿಮರ್ಶಕ ಬೆಂಗಳೂರಿನ ಸಿ.ಎನ್.ರಾಮಚಂದ್ರನ್ ಭಾಗವಹಿಸುವರು.
ಮಧ್ಯಾಹ್ನ 2 ಕ್ಕೆ ನಡೆಯುವ ಅಭಿವ್ಯಕ್ತಿ ಸ್ವಾತಂತ್ರ್ಯದ ಸವಾಲುಗಳು - ನನ್ನ ಅನುಭವ ಕುರಿತು ಲೇಖಕಿ ಭಾನುಮುಷ್ತಾಕ್, ಪತ್ರಕರ್ತ ನವೀನ್ ಸೂರಿಂಜೆ, ಲೇಖಕರಾದ ಎಚ್.ನಾಗವೇಣಿ, ಮಹಾಂತೇಶ ನವಲಕಲ್
ಮಾತನಾಡುವರು.
ಸಂಜೆ 4.30 ಕ್ಕೆ ಹೋರಾಟಗಾರ, ಚಿಂತಕ ಹರ್ಷ ಮಂದರ್ ಅವರ ಅಮಾನತೆಯ ಬಣ್ಣಗಳು ಪುಸ್ತಕ ಬಿಡುಗಡೆ ಸಮಾರಂಭ ಏರ್ಪಡಿಸಲಾಗಿದೆ. ಪತ್ರಕರ್ತ ಭಾನುತೇಜ್ ಪುಸ್ತಕ ಬಿಡುಗಡೆ ಮಾಡುವರು.
ಚಿಂತಕ ಬೆಂಗಳೂರಿನ ವಿ.ಎಸ್. ಶ್ರೀಧರ್, ಲೇಖಕ ಸಂವರ್ಥ ಸಾಹಿಲ್ ಭಾಗವಹಿಸುವರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

