ಹಾಸನ

ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯ ವೀಕ್ಷಣೆ

Published On :

ಕ.ಪ್ರ.ವಾರ್ತೆ    ಜಾವಗಲ್    ನ.9
ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವೇದಿಕೆ ಮತ್ತು ಶಾಂತಲಾ ವೇದಿಕೆ ವಿದ್ಯಾರ್ಥಿಗಳಿಂದ ಜಾವಗಲ್ನ ಇತಿಹಾಸ ಪ್ರಸಿದ್ಧ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯ ವೀಕ್ಷಣಾ ಕಾರ್ಯ  ಆಯೋಜಿಸಲಾಗಿತ್ತು.
ದೇವಾಲಯದ ಶಾಸನ, ಸ್ಮಾರಕಗಳು ಮತ್ತು ಶಿಲ್ಪ ಕಲೆಯನ್ನು ವೀಕ್ಷಣೆ ಮಾಡಿ ಕಾಲೇಜಿನ ಇತಿಹಾಸ ವಿಭಾಗದ ಸಹ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಶಿವಶಂಕರ ಮೂರ್ತಿ ಮಾತನಾಡಿ ನರಸಿಂಹಸ್ವಾಮಿ ದೇಗುಲ ಹೊಯ್ಸಳರ ವಾಸ್ತುಶಿಲ್ಪಗಳಲ್ಲಿ ಒಂದಾಗಿದ್ದು, 12ನೇ ಶತಮಾನದಲ್ಲಿ ಜಕಣಾಚಾರಿ ಮತ್ತು ಚಿಕ್ಕ ಮಲಿತಮ್ಮ ಎಂಬ ಶಿಲ್ಪಿಗಳು ನಿರ್ಮಿಸಿದ ಅಪರೂಪದ ಶಿಲ್ಪ ಕಲೆಯಿಂದ ಕೂಡಿದೆ ಎಂದು ಹೇಳಿದರು. ಆ ಕಾಲದ ಸಾಮಾಜಿಕ, ಧಾರ್ಮಿಕ ಚಿತ್ರಗಳನ್ನು ಅತ್ಯುತ್ತಮ ಶೈಲಿಯಲ್ಲಿ ಕೆತ್ತನೆ ಮಾಡಲಾಗಿದೆ ಎಂದ ಅವರು, ದೇಗುಲದಲ್ಲಿನ ವಿವಿಧ ವಿಗ್ರಹಗಳು, ಮಹಾದ್ವಾರ, ಮುಖಮಂಟಪ, ಗರ್ಭಾಂಕಣ, ನವರಂಗ, ಗರ್ಭಗುಡಿಗಳಲ್ಲಿನ ಕೆತ್ತನೆ ತುಂಬಾ ವಿಶಿಷ್ಠವಾಗಿದೆ ಎಂದು ತಿಳಿಸಿದರು. ಜಿಲ್ಲೆಯ ಎಲ್ಲಾ ಪುರಾತನ ಪರಂಪರಾ ದೇವಾಲಯಗಳ ವೀಕ್ಷಣೆ ಹಾಗೂ ಇತಿಹಾಸದ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮವನ್ನು ಶಾಂತಲಾ ವೇದಿಕೆ ಮೂಲಕ ಹಮ್ಮಿಕೊಂಡಿದ್ದು, ವಿದ್ಯಾರ್ಥಿಗಳಲ್ಲಿ ಐತಿಹಾಸಿಕ ದೇಗುಲಗಳ ಬಗ್ಗೆ ಪರಿಚಯಿಸುವ ಕಾರ್ಯವನ್ನು ರೂಪಿಸಲಾಗಿದೆ ಎಂದರು.
ಪತ್ರಕರ್ತ ಜೆ.ಎಸ್.ರವಿಶಂಕರ್ ಮಾತನಾಡಿ, ಜಾವಗಲ್ನಲ್ಲಿ ಪ್ರಾಚೀನ ಕಾಲದ ಕೋಟೆ ಕೊತ್ತಲುಗಳು, ಸ್ಮಾರಕಗಳು ಹಾಗೂ ಜೈನ ಬಸದಿ ಬನಶಂಕರಿ ದೇಗುಲ, ಗಂಗಾಧರೇಶ್ವರ ದೇಗುಲಗಳನ್ನು ಕಾಣಬಹುದಾಗಿದೆ ಎಂದು ವಿವರಿಸಿದರು.
ಜಾವಗಲ್ನ ಇತಿಹಾಸದ ಬಗ್ಗೆ ಮಾಹಿತಿ ನೀಡಿ ಯವಶಿಲಾಪುರಿ ಜಾವಗಲ್ನ ಮೂಲ ಹೆಸರಾಗಿತ್ತೆಂದು ತಿಳಿಸಿದರು. ವಿದ್ಯಾರ್ಥಿಗಳು ಐತಿಹಾಸಿಕ ಸ್ಮಾರಕಗಳನ್ನು ಸಂರಕ್ಷಿಸುವ ಕಾರ್ಯದ ಬಗ್ಗೆ ಕಾಳಜಿ ವಹಿಸಬೇಕೆಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.