ವೆಂಕಟೇಶ್ಮೂರ್ತಿ ರಾಜ್ಯಾಧ್ಯಕ್ಷರಾಗಿ ಆಯ್ಕೆ
ಹಾಸನ: ಅಖಿಲ ಕರ್ನಾಟಕ ಹೊಯ್ಸಳ ಕರ್ನಾಟಕ ಸಂಘಗಳ ಒಕ್ಕೂಟದ ರಾಜ್ಯಾಧ್ಯಕ್ಷರಾಗಿ ಹಾಸನ ಜಿಲ್ಲಾಧ್ಯಕ್ಷರಾಗಿರುವ ಡಿ.ಎನ್. ವೆಂಕಟೇಶಮೂರ್ತಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಇತ್ತೀಚೆಗೆ ಮೈಸೂರು ಹೊಯ್ಸಳ ಕರ್ನಾಟಕ ಸಂಘದ ಭವನದಲ್ಲಿ ನಡೆದ ಅಖಿಲ ಕರ್ನಾಟಕ ಹೊಯ್ಸಳ ಕರ್ನಾಟಕ ಸಂಘಗಳ ಒಕ್ಕೂಟದ ಸಭೆಯಲ್ಲಿ ಈ ಆಯ್ಕೆ ಮಾಡಲಾಗಿದೆ. ನಾನಾ ಜಿಲ್ಲೆಗಳಿಂದ 75ಕ್ಕೂ ಹೆಚ್ಚು ಕಾರ್ಯಕಾರಿ ಮಂಡಳಿಗಳ ಸದಸ್ಯರು ಆಗಮಿಸಿದ್ದರು. ಅಖಿಲ ಕರ್ನಾಟಕ ಹೊಯ್ಸಳ ಕರ್ನಾಟಕ ಸಂಘಗಳ ಒಕ್ಕೂಟಕ್ಕೆ ಸಂಬಂಧಿಸಿದಂತೆ ಚರ್ಚಿಸಲಾಯಿತು. ಒಕ್ಕೂಟದ ರಚನೆಗೆ ಸರ್ವಾನುಮತದಿಂದ ಒಪ್ಪಿಗೆ ಪಡೆಯಲಾಯಿತು. ರಾಜ್ಯಾಧ್ಯಕ್ಷರ ಆಯ್ಕೆ ಕುರಿತು ಮೈಸೂರು ಸಂಘದ ಅಧ್ಯಕ್ಷ ಪಿ.ವಿ.ಭಾರದ್ವಾಜ ವಿಷಯ ಪ್ರಸ್ತಾಪಿಸಿದರು. ನಂತರ ಹಾಸನ ಜಿಲ್ಲಾ ಹೊಯ್ಸಳ ಕರ್ನಾಟಕದ ಅಧ್ಯಕ್ಷ ಡಿ.ಎನ್. ವೆಂಕಟೇಶಮೂರ್ತಿ ಅವರನ್ನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸೂಚಿಸಿದರು. ಸಭೆಯಲ್ಲಿದ್ದ ಸದಸ್ಯರು ಸರ್ವಾನುಮತದಿಂದ ಆಯ್ಕೆ ಮಾಡಿದರು.
ಮಳೆ ನೀರಿನಲ್ಲಿ ಕೊಚ್ಚಿ ಹೋಗಿ ಮೃತಪಟ್ಟ ಕುಟುಂಬಕ್ಕೆ ಪರಿಹಾರ
ಸಕಲೇಶಪುರ: ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ ಒಂದು ಲಕ್ಷದ ಐವತ್ತು ಸಾವಿರ ರು. ಪರಿಹಾರದ ಚೆಕ್ನ್ನು ಮೃತರ ಕುಟುಂಬಕ್ಕೆ ತಹಸೀಲ್ದಾರ್ ಪಾರ್ವತಿ ವಿತರಿಸಿದರು. ಅಗಸ್ಟ್ನಲ್ಲಿ ತಾಲೂಕಿನ ಯಸಳೂರು ಹೋಬಳಿ ಅತಿಗಿನಹಳ್ಳಿ ಗ್ರಾಮದ ಹೊನ್ನರಾಜು ಹಸು ಮೇಯಿಸಲು ಹಳ್ಳ ದಾಟುವಾ ಸಂದರ್ಭದಲ್ಲಿ ಮಳೆ ನೀರಿನಲ್ಲಿ ಕೊಚ್ಚಿಹೋಗಿ ಸಾವನ್ನಪ್ಪಿದರು. ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ 1.50 ಲಕ್ಷ ರು. ಪರಿಹಾರದ ಚೆಕನ್ನು ಮೃತರ ಪತ್ನಿ ಶಶಿಕಲಾ ಅವರಿಗೆ ತಹಸೀಲ್ದಾರ್ ನೀಡಿದರು. ಐಗೂರು ಗ್ರಾಮ ಲೆಕ್ಕಿಗ ಸಿದ್ದಲಿಂಗೇಶ್, ದಲಿತ ಮುಖಂಡ ಲಕ್ಷ್ಮಣ್ ಕೀರ್ತಿ ಇತರರು ಇದ್ದರು.
ದಿಢೀರ್ ದಾಳಿ; 105 ಲೀ. ಬೆಲ್ಲದ ಕೊಳೆ, ಸಾರಾಯಿ ವಶ
ಬೇಲೂರು: ತಾಲೂಕಿನ ಆಡವಳ್ಳಿ ಗ್ರಾಮದಲ್ಲಿ ಅಬಕಾರಿ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ 105 ಲೀಟರ್ ಬೆಲ್ಲದ ಕೊಳೆ, 6 ಲೀಟರ್ ಸಾರಾಯಿ ವಶ ಪಡಿಸಿಕೊಂಡಿದ್ದಾರೆ. ಆಡುವಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ಕಳ್ಳಬಟ್ಟಿ ತಯಾರಿಸಿ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಹಾಸನ ಉಪ ವಿಭಾಗ ಅಬಕಾರಿ ಉಪ ಅಧೀಕ್ಷಕ ಸುನಿಲ್, ಅಬಕಾರಿ ನಿರೀಕ್ಷಕ ಸಂತೋಷ್, ಅಬಕಾರಿ ಉಪ ನಿರೀಕ್ಷಕ ನೂರ್ಜಹಾನ್ ಹಾಗೂ ಸಿಬ್ಬಂದಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

