ಉರುಳಿ ಬಿದ್ದ ವ್ಯಾನ್: 7 ಮಂದಿಗೆ ಗಾಯ
ಬೇಲೂರು: ಕೆರೆ ಏರಿ ಮೇಲೆ ತೆರಳುತ್ತಿದ್ದ ಕಾರೊಂದು ಆಯತಪ್ಪಿ ಉರುಳಿ ಬಿದ್ದು 7 ಮಂದಿ ತೀವ್ರ ಗಾಯಗೊಂಡಿರುವ ಘಟನೆ ಭಾನುವಾರ ಸಂಜೆ ನಡೆದಿದೆ. ಪಟ್ಟಣದ ನೆಹರು ನಗರದ ಪೊಲೀಸ್ ಠಾಣೆ ಸಮೀಪದ ಚಿಕ್ಕಮಗಳೂರು ರಸ್ತೆಯ ಕೆರೆ ಏರಿಯಲ್ಲಿ ಈ ಘಟನೆ ನಡೆದಿದೆ. ಮಾರುತಿ ವ್ಯಾನಿನಲ್ಲಿ ಐವರು ನಂಜನಗೂಡು ಸಮೀಪದ ಕಡಕೊಳದಿಂದ ಹೊರನಾಡು, ಧರ್ಮಸ್ಥಳಕ್ಕೆ ತೆರಳುತ್ತಿದ್ದರು. ಕೆರೆ ಏರಿ ಮೇಲೆ ಹೋಗುವಾಗ ಆಯತಪ್ಪಿದ ವ್ಯಾನ್ 15 ಅಡಿ ಏರಿಯಿಂದ 3 ಪಲ್ಟಿಯಾಗಿ ಕೆಳಗೆ ಉರುಳಿ ಬಿದ್ದಿದೆ. ವ್ಯಾನ್ ಬಿದ್ದ ರಭಸಕ್ಕೆ ಮೇಲ್ಬಾಗ ಸಂಪೂರ್ಣ ಜಖಂಗೊಂಡಿದ್ದು ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ. ಅಪಘಾತದಲ್ಲಿ ಮಮತ, ಅನು, ಮನು, ರತ್ಮಮ್ಮ, ಸಿದ್ದನಾಯಕ ಸೇರಿ ಇನ್ನಿಬ್ಬರು ಗಾಯಗೊಂಡಿದ್ದಾರೆ. ಸಾರ್ವಜನಿಕರು ವ್ಯಾನ್ ಒಳಗಿದ್ದ ಗಾಯಾಳುಗಳನ್ನು ಕೂಡಲೇ ಹೊರಗೆಳೆದು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

