ಮಳವಳ್ಳಿಯಲ್ಲಿ ಮರೀಚಿಕೆಯಾದ ಅಭಿವೃದ್ಧಿ
ಮಳವಳ್ಳಿ: ಅಭಿವೃದ್ಧಿಗೆ ಹಣ ಕೋಟಿಗಟ್ಟಲೆ ಹರಿದು ಬಂದರೂ ಜನನಿಬಿಡ ಪ್ರದೇಶಗಳಲ್ಲಿ ಸಾರ್ವಜನಿಕ ಶೌಚಾಲಯಗಳಿಲ್ಲದೆ ಪರದಾಡುವಂತಾಗಿದೆ. ಪಟ್ಟಣದ ಸಾರಿಗೆ ಬಸ್ ನಿಲ್ದಾಣ ಹೊರತು ಪಡಿಸಿ ಬೇರೆಲ್ಲೂ ಶೌಚಾಲಯಗಳಿಲ್ಲ. ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಸುತ್ತಲು ನಾಗರಿಕರು ನಿತ್ಯಕರ್ಮಗಳಿಗಾಗಿ ಪರದಾಡುವಂತಾಗಿದೆ.
ಮನೆಗೊಂದು ಶೌಚಾಲಯ ನಿರ್ಮಿಸಿಕೊಳ್ಳಿ ಎನ್ನುವ ಸರ್ಕಾರದ ಯೋಜನೆ ಎಷ್ಟರ ಮಟ್ಟಕ್ಕೆ ಅನುಷ್ಠಾನವಾಗಿದೆ ಎಂಬುವುದಕ್ಕೆ ಪಟ್ಟಣದ ದೊಡ್ಡಕೆರೆ ಕೊಡಿ,ದೊಣ್ಣೇಹಳ್ಳ ಸಾಕ್ಷಿಯಾಗಿದ್ದು ಈ ಭಾಗದಲ್ಲಿ ಸಂಚರಿಸುವ ಸಾರ್ವಜನಿಕರು ಮೂಗುಮುಚ್ಚಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ನಗರದಲ್ಲಿ ಸಾರ್ವಜನಿಕ ಮೂತ್ರಾಲಯಗಳು ಇಲ್ಲದೆ ಸಾರ್ವಜನಿಕರು ಪುರಸಭೆಗೆ ಹಿಡಿಶಾಪ ಹಾಕುತ್ತಿದ್ದಾರೆ. ರಾಜ್ಯ ಸಾರಿಗೆ ಬಸ್ ನಿಲ್ದಾಣದ ಶೌಚಾಲಯ ಹೊರತು ಪಡಿಸಿದರೆ ಎಲ್ಲೂ ಶೌಚಾಲಗಳಿಲ್ಲದ ಕಾರಣ ಬಾಲಕೀಯರ ಸರ್ಕಾರಿ ಹೈಸ್ಕೂಲ್ಮೈದಾನ ಮತ್ತು ಇದಕ್ಕೆ ಹೊಂದಿಕೊಂಡಿರುವ ಬಾಲಕೀಯರ ಕಾಲೇಜು ಕಾಂಪೌಡ್ಗಳನ್ನು ನಾಗರಿಕರು ಶೌಚಾಲಯಗಳನ್ನಾಗಿಸಿಕೊಂಡಿದ್ದಾರೆ.
ಮೂತ್ರಾಲಯಗಳು ಎಲ್ಲೆಲ್ಲಿ ಅಗತ್ಯವಿದೆ?
ಸಾರಿಗೆ ಬಸ್ ನಿಲ್ದಾಣದ ಮುಂಭಾಗ ಆಸುಪಾಸಿನ ರಸ್ತೆಗಳಿಗೆ ಹೊಂದಿಕೊಂಡಂತೆ ಮೂತ್ರಲಯ ಆಗತ್ಯವಿದೆ. ನ್ಯಾಯಾಲಯದ ಆವರಣಕ್ಕೆ ಸೇರಿದ ಐಟಿಐ ಕಾಲೇಜು, ಅರಣ್ಯ ಇಲಾಖೆ, ಕ್ರೀಡಾಂಗಣ ಭಾಗಕ್ಕೆ ಸಾರ್ವಜನಿಕ ಶೌಚಾಲಯ ಆಗತ್ಯವಿದೆ. ಸಾರ್ವಜನಿಕ ಆಸ್ಪತ್ರೆ, ಪುರ ಪೊಲೀಸ್ ಠಾಣೆ, ತಾಲ್ಲೂಕು ಕಚೇರಿ ಸಂಕಿರಣಕ್ಕೆ ಹೊಂದಿಕೊಂಡಂತೆ, ಬಾಲಕೀಯರ ಸರ್ಕಾರಿ ಹೈಸ್ಕೂಲ್ ಮೈದಾನ, ಪಟ್ಟಣದ ದೊಡ್ಡಕೆರೆ ಕೋಡಿಯ ಸಮೀಪ ಶೌಚಾಲಯದ ಅಗತ್ಯವಿದೆ.
ಶುದ್ಧ ಕುಡಿವ ನೀರಿನ ಕೇಂದ್ರ ನಿರ್ಮಿಸಿ
ಗ್ರಾಮೀಣ ಭಾಗದ ಸಣ್ಣ ಹಳ್ಳಿಯ ಮುಂಭಾಗದಲ್ಲಿ ತಂಗುದಾಣಗಳನ್ನ ನಿರ್ಮಿಸಿದ್ದರು ಪಟ್ಟಣದ ಶಾಂತಿ ಕಾಲೇಜು ಮುಂಭಾಗದ ತಂಗುದಾಣ ಹೊರತು ಪಡಿಸಿದರೆ ಬೇರೆಲ್ಲೂ ತಂಗುದಾಣ ಇಲ್ಲದಿರುವುದು ಅಭಿವೃದ್ಧಿಗೆ ಸಾಕ್ಷಿಯಾಗಿದೆ. ತಂಗುದಾಣದ ಜೊತೆಗೆ ಶುದ್ಧ ಕುಡುಯುವ ನೀರಿನ ಕೇಂದ್ರ ನಿರ್ಮಿಸಿದರೆ ಜನರು ದಣಿವಾರಿಸಿಕೊಳ್ಳಲು ಸಾಧ್ಯವಾಗುತ್ತದೆ.
ಮಾರ್ಕೆಟ್ ನಿರ್ಮಿಸಿ
ಪಟ್ಟಣದಲ್ಲಿ ತಾಲೂಕು ಆಡಳಿತ ಈಗಾಗಲೇ ಪುಟ್ ಪಾತ್ವ್ಯಾಪಾರಿಗಳನ್ನು ತೆರವುಗೊಳಿಸಿದೆ. ಆದರೆ ಇವರಿಗೆ ಸೂಕ್ತ ಮಾರುಕಟ್ಟೆ ನಿರ್ಮಿಸಿಲ್ಲ. ಪಟ್ಟಣದ ಪೇಟೆ ಬೀದಿ ಉದ್ದಕ್ಕೂ ಚರಂಡಿಯ ಮೇಲೆ ವರ್ತಕರು ಒತ್ತುವರಿ ಮಾಡಿಕೊಂಡು ವ್ಯಾಪಾರ ನಡೆಸುತ್ತಿದ್ದಾರೆ ಇದರಿಂದ ಈ ಭಾಗದಲ್ಲಿ ಸಂಚರಿಸುವವರಿಗೆ ತಲೆ ನೋವಾಗಿದೆ. ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಸಮಗ್ರ ಅಭಿವೃದ್ಧಿ ಯೋಜನೆಯಡಿ ನಿರ್ಮಿಸಿರುವ ವಾಣಿಜ್ಯ ಸಕಿರಣ ಕಳೆದ 15 ವರ್ಷಗಳಿಂದ ಪ್ರಯೋಜನಕ್ಕೆ ಬಾರದೆ ಅನೈತಿಕ ವ್ಯಾವಹಾರಗಳ ತಾಣವಾಗಿ ಮಾರ್ಪಟ್ಟಿದೆ. ಆದ್ದರಿಂದ ಸಣ್ಣ ವ್ಯಾಪಾರಸ್ಥರಿಗೆ ಮಾರುಕಟ್ಟೆ ನಿರ್ಮಿಸಿಕೊಟ್ಟು ಬೀದಿ ಬದಿ ವ್ಯಾಪಾರಸ್ಥರಿಗೆ ಅನುಕೂಲ ಮಾಡಿಕೊಡಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

