ಜಿಲ್ಲಾ ಕಸಾಪದಿಂದ ಪದಬಂಧ ಸ್ಪರ್ಧೆ
ಹಾಸನ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಲ್ಲಿ ಪದಸಂಪತ್ತನ್ನು ಬೆಳೆಸಲು ಕನ್ನಡ ಪದಬಂಧ ಸ್ಪರ್ಧೆಯನ್ನು ಏರ್ಪಡಿಸಿದೆ. ನ. 12 ಮಂಗಳವಾರ ಸಂಜೆ 5 ಕ್ಕೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ನಡೆಯಲಿದೆ. ಸ್ಪರ್ಧೆ ಸಾರ್ವಜನಿಕ ಮತ್ತು ವಿದ್ಯಾರ್ಥಿ ವಿಭಾಗಕ್ಕೆ ಪ್ರತ್ಯೇಕವಾಗಿದ್ದು ವಿಜೇತರಿಗೆ ಬಹುಮಾನಗಳನ್ನು ಅದೇ ಸಂಜೆ ನಡೆಯುವ ನವೋದಯ ಕವಿ-ಕಾವ್ಯ ಗಾಯನ ಚಿಂತನ ಮಾಲೆ, ಕನ್ನಡ ರಾಜ್ಯೋತ್ಸವ ಆಚರಣಾ ಕಾರ್ಯಕ್ರಮದಲ್ಲಿ ವಿತರಿಸಲಾಗುವುದು. ಆಸಕ್ತರು ನ 11 ರೊಳಗೆ ತಮ್ಮ ಹೆಸರನ್ನು ವೈಯಕ್ತಿಕವಾಗಿ ಆಗಲಿ ಅಥವಾ ಶಾಲಾಕಾಲೇಜುಗಳ ಮೂಲಕವಾಗಲಿ ಜಿಲ್ಲಾ ಕಸಾಪದಲ್ಲಿ ನೊಂದಾಯಿಸಿಕೊಳ್ಳಲು ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ಗೌರವ ಕಾರ್ಯದರ್ಶಿ ಗೊರೂರು ಶಿವೇಶ್ರನ್ನು ಮೊ ಸಂ. 9480798674 ಸಂಪರ್ಕಿಸಲು ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಎಚ್. ಎಲ್. ಜನಾರ್ದನ್ ಕೋರಿದ್ದಾರೆ.
ಪ್ರಾಂಶುಪಾಲರ ಸಭೆ ಇಂದು
ಹಾಸನ: ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದ ಶತಮಾನೋತ್ಸವ ಭವನದಲ್ಲಿ ಪದವಿ ಪೂರ್ವ ಕಾಲೇಜು ಉಪನಿರ್ದೇಶಕರಾದ ಎನ್.ರಾಜಮ್ಮ ಅಧ್ಯಕ್ಷತೆಯಲ್ಲಿ ನವೆಂಬರ್ 11ರಂದು ಬೆಳಗ್ಗೆ 11 ಕ್ಕೆ ಸರ್ಕಾರಿ ಅನುದಾನಿತ ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಭೆಯನ್ನು ಕರೆಯಲಾಗಿದ್ದು , ಜಿಲ್ಲೆಯ ಎಲ್ಲ ಕಾಲೇಜುಗಳ ಪ್ರಾಂಶುಪಾಲರು ತಪ್ಪದೇ ಹಾಜರಾಗುವಂತೆ ಪ್ರಕಟಣೆತಿಳಿಸಿದೆ.
ಕನಕ ಜಯಂತಿ: ಪೂರ್ವಭಾವಿ ಸಭೆ
ಹೊಳೆನರಸೀಪುರ: ಪಟ್ಟಣದಲ್ಲಿ ನವೆಂಬರ್ 20ರಂದು ಆಚರಿಸುವ ಕನಕದಾಸರ ಜಯಂತಿಯ ಆಚರಣೆಯ ಸಿದ್ದತೆಗಾಗಿ ನವೆಂಬರ್ 11ರಂದು ಮಧ್ಯಾಹ್ನ 12.30ಕ್ಕೆ ತಾಲೂಕು ಕಚೇರಿ ಸಭಾಂಗಣದಲ್ಲಿ ಶಾಸಕರ ಆಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆಯನ್ನು ಕರೆಯಲಾಗಿದೆ. ಕನಕದಾಸರ ಜಯಂತಿ ಆಚರಣಾ ಸಂಘದ ಆಧ್ಯಕ್ಷರು ಮತ್ತು ಪದಾದಿಕಾರಿಗಳು ಸದರಿ ಸಭೆಗೆ ತಾವು ತಪ್ಪದೇ ಆಗಮಿಸಿ ತಮ್ಮ ಅಮೂಲ್ಯ ಸಲಹೆಗಳನ್ನು ನೀಡಬೇಕೆಂದು ಹೊಳೆನರಸೀಪುರ ತಹಸೀಲ್ದಾರ್ ಹಾಗೂ ಅಧ್ಯಕ್ಷರು, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಇವರು ಕೋರಿದ್ದಾರೆ.
ಇಂದು ತಾಪಂ ಸಾಮಾನ್ಯ ಸಭೆ
ಸಕಲೇಶಪುರ: ತಾಲೂಕು ಪಂಚಾಯ್ತಿ ಅಧ್ಯಕ್ಷೆ ಮಂಜುಳ ಅವರ ಅಧ್ಯಕ್ಷತೆಯಲ್ಲಿ ನವೆಂಬರ್ 11ರಂದು ಬೆಳಿಗ್ಗೆ 11 ಕ್ಕೆ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಸಾಮಾನ್ಯ ಸಭೆ ನಡೆಯಲಿದೆ ಎಂದು ಕಾರ್ಯನಿರ್ವಾಹಕ ಅಧಿಕಾರಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

