ಹಾಸನ

ಟಿಪ್ಪು ದೇಶ ಕಂಡ ಅಪ್ರತಿಮ ಸ್ವಾತಂತ್ರ್ಯ ಸೇನಾನಿ

Published On :

ಆಲೂರು: ಟಿಪ್ಪು ಸುಲ್ತಾನ್ ದೇಶ ಕಂಡ ಅಪ್ರತಿಮ ಸ್ವಾತಂತ್ರ್ಯ ಸೇನಾನಿ ಎಂದು ಟಿಪ್ಪು ಸಂಘದ ತಾಲೂಕು ಅಧ್ಯಕ್ಷ ಕಬೀರ್ ಅಹಮದ್ ತಿಳಿಸಿದರು.
ಪಟ್ಟಣದಲ್ಲಿ ವೀರ ಕನ್ನಡಿಗ ಟಿಪ್ಪು ಸೇನೆ ವತಿಯಿಂದ ಟಿಪ್ಪು ಜನ್ಮದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಮಂಜ್ರಾಬಾದ್ ಚಲೋ ಬೈಕ್ ರ್ಯಾಲಿ ಸ್ವಾಗತಿಸಿ ಮಾತನಾಡಿದರು.
ರ್ಯಾಲಿಯೊಂದಿಗೆ ಆಗಮಿಸಿದ ಎಸ್.ಎಂ.ಆನಂದ್ ಮಾತನಾಡಿ, ರಾಜ್ಯದಲ್ಲೇ ಪ್ರಥಮ ಬಾರಿಗೆ ಹಾಸನದ ಕಾಂಗ್ರೆಸ್ ಕಚೇರಿಯಲ್ಲಿ ಟಿಪ್ಪು ಜನ್ಮ ದಿನಾಚರಣೆ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ 3 ಬೇಡಿಕೆಗಳನ್ನು ಸರ್ಕಾರದ ಮುಂದಿಡಲು ತೀರ್ಮಾನಿಸಿದ್ದು, ಪ್ರಥಮವಾಗಿ ಸರ್ಕಾರದ ವತಿಯಿಂದ ಟಿಪ್ಪು ಜನ್ಮದಿನಾಚರಣೆ, ಟಿಪ್ಪು ವಿವಿ ಹಾಗು ಟಿಪ್ಪು ಹೆಸರಿನಲ್ಲಿ ಕೆಲ ಯೋಜನೆಗಳನ್ನು ಜಾರಿಗೊಳಿಸಲು ಒತ್ತಾಯಿಸುತ್ತೇವೆ ಎಂದರು.
ಎಚ್.ಕೆ.ಜವರೇಗೌಡ ಮಾತನಾಡಿ, ಟಿಪ್ಪು ಅಪ್ಪಟ ರಾಷ್ಟ್ರ ಪ್ರೇಮಿ. ಮೈಸೂರನ್ನು  ಭಾರತದಲ್ಲೇ ಮಾದರಿ ರಾಜ್ಯವನ್ನಾಗಿ ಮಾಡಿದ ಈತ ಕೈಗಾರಿಕೆ, ನೀರಾವರಿ ಮುಂತಾದ ಅಭಿವೃದ್ಧಿ ಕಾರ್ಯಗಳನ್ನು  ಮಾಡಿದ ದೂರ ದೃಷ್ಟಿಗಾರ ಎದು ಹೇಳಿದರು. ತಾ. ನಾಗರಿಕ ಹೋರಾಟ ಸಮಿತಿ ಅಧ್ಯಕ್ಷ ಕೆ.ಎಸ್.ಮಂಜೇಗೌಡ ಮಾತನಾಡಿ, ಎಲ್ಲಾ ಧರ್ಮಗಳನ್ನು ಸಮಾನವಾಗಿ ಕಂಡ ಅಪರೂಪದ ವ್ಯಕ್ತಿತ್ವದ ಟಿಪ್ಪು ಎಂದರು. ಎಚ್.ವಿ.ಶಿವರಾಮೇಗೌಡ ಮಾತನಾಡಿದರು.
ಕೆಜೆಪಿ ಅಧ್ಯಕ್ಷ ಎ.ಬಿ.ನಾಗರಾಜ್ ಮಾತನಾಡಿ, ಟಿಪ್ಪು ಜನ್ಮದಿನಾಚರಣೆ ಸ್ವಾಗತಾರ್ಹ ಎಂದು ತಿಳಿಸಿದರು.
ತಾ. ಕಾಂಗ್ರೆಸ್ ಅಧ್ಯಕ್ಷ ಜಿ.ಆರ್.ರಂಗನಾಜ್, ಪರಿಸರವಾದಿ ಎಚ್.ಪಿ.ಮೋಹನ್, ಮಹಮ್ಮದ್ ಇಸಾಕ್, ಟಿಪಿಸಿಎಂಎಸ್ ಅಧ್ಯಕ್ಷ ತೌಫಿಕ್, ಎಂ.ಬಿ.ವಿಜಯಕಾಂತ್, ವೈ.ಬಿ.ಟೀಕರಾಜ್, ಸುಹೀಲ್, ಎ.ಜೆ.ಸಂದೇಶ್, ಡಿಎಸ್‌ಎಸ್ಮುಖಂಡ ರಂಗಯ್ಯ ಮುಂತಾದವರಿದ್ದರು. ರ್ಯಾಲಿಯಲ್ಲಿ ನೂರಾರು ಬೈಕ್ ಹಾಗೂ ಕಾರುಗಳಲ್ಲಿ ಬಂದಿದ್ದ ಟಿಪ್ಪು ಅಭಿಮಾನಿಗಳು ಹಾಗು ವಿವಿಧ  ವೇಶ ಭೂಷಣಗಳು ಹಾಗೂ ಬೃಹತ್ ಟಿಪ್ಪುವಿನ ಚಿತ್ರ ಗಮನ ಸೆಳೆಯುವಂತಿತ್ತು.

ಶಾಸಕ ಶಿವಲಿಂಗೇಗೌಡರ ವಿರುದ್ಧದ ಕೇಸ್ ವಜಾ
ಕ.ಪ್ರ. ವಾರ್ತೆ ಹಾಸನ ನ. 11
ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡರ ವಿರುದ್ಧ ಹೂಡಲಾಗಿದ್ದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪವನ್ನು ಇಲ್ಲಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಸೋಮವಾರ ವಜಾಗೊಳಿಸಿದೆ.
2009ರ ಲೋಕಸಭೆ ಚುನಾವಣೆಯಲ್ಲಿ ಬಾಡೂಟ ಹಂಚಿ ಮತದಾರರಿಗೆ ಆಮಿಷವೊಡ್ಡಿದ ಆರೋಪದ ಹಿನ್ನೆಲೆಯಲ್ಲಿ ಶಿವಲಿಂಗೇಗೌಡರ ವಿರುದ್ಧ ಬಾಣಾವರ ಠಾಣೆಯಲ್ಲಿ ಚುನಾವಣೆ ವೀಕ್ಷಕರು ದೂರು ದಾಖಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಅರಸೀಕೆರೆ ಜೆಎಂಎಫ್‌ಸಿ ನ್ಯಾಯಾಲಯ, 2012 ಡಿಸೆಂಬರ್ 31ರಲ್ಲಿ ಒಂದು ವರ್ಷ ಜೈಲು ಶಿಕ್ಷೆ ಜೊತೆಗೆ ದಂಡ ಸಹ ವಿಧಿಸಿತ್ತು.  ಇದನ್ನು ಪ್ರಶ್ನಿಸಿ ಶಾಸಕ ಶಿವಲಿಂಗೇಗೌಡ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು, ಈ ಆರೋಪವನ್ನು ಖುಲಾಸೆಗೊಳಿಸಿ ಶಿವಲಿಂಗೇಗೌಡರು ದೋಷ ಮುಕ್ತರು ಎಂದು ತೀರ್ಪು ನೀಡಿದೆ.
ತಾವು ದೋಷಮುಕ್ತ ಎಂದು ಹೇಳಿರುವ ನ್ಯಾಯಾಲಯದ ಆದೇಶಕ್ಕೆ ಸಂತಸ ವ್ಯಕ್ತಪಡಿಸಿರುವ ಶಾಸಕರು, ಇದು ಸತ್ಯಕ್ಕೆ ಸಂದ ಜಯ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಜಿಲ್ಲಾ ನ್ಯಾಯಾಲಯ ನೀಡಿರುವ ತೀರ್ಪು ತಮಗೆ ಸಂತಸ ತಂದಿದೆ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.