ಜಿಲ್ಲಾದ್ಯಂತ ಮಕ್ಕಳ ದಿನಾಚರಣೆ
ಕ.ಪ್ರ.ವಾರ್ತೆ ಹಾಸನ ನ. 14
ಹಾಸನ ನಗರ ಸೇರಿದಂತೆ ಜಿಲ್ಲಾದ್ಯಂತ ಗುರುವಾರ ಮಾಜಿ ಪ್ರಧಾನಿ ದಿ. ಜವಾಹರ್ಲಾಲ್ ನೆಹರೂ ಜನ್ಮ ದಿನಾಚರಣೆ ಅಂಗವಾಗಿ ಗುರುವಾರ ಮಕ್ಕಳ ದಿನಾಚರಣೆಯನ್ನು ಸಡಗರದಿಂದ ಆಚರಿಸಲಾಯಿತು.
ನಗರದ ಸಂಸ್ಕೃತ ಭವನದಲ್ಲಿ ಸುಜಲಾ ಎಜುಕೇಶನ್ ಟ್ರಸ್ಟ್ ಕಿಡ್ಸ್ ವತಿಯಿಂದ ನಡೆದ ಮಕ್ಕಳ ದಿನಾಚರಣೆ ಯನ್ನು ವೈದ್ಯ ಡಾ.ದಿನೇಶ್ ಉದ್ಘಾಟಿಸಿದರು. ನೆಹರೂ ಜನ್ಮ ದಿನವನ್ನು ಮಕ್ಕಳ ದಿನವಾಗಿ ಆಚರಿಸಲಾಗುತ್ತಿದೆ. ಮಕ್ಕಳೆಂದರೆ ನೆಹರೂರವರಿಗೆ ತುಂಬಾ ಪ್ರಿಯವಾಗಿತ್ತು. ಆ ಹಿನ್ನೆಲೆಯಲ್ಲಿ ಮಕ್ಕಳ ದಿನಾಚರಣೆ ಆಚರಿಸಲಾಗುತ್ತಿದೆ ಎಂದು ಹೇಳಿದರು.
ಇಂದಿನ ಮಕ್ಕಳೇ ದೇಶದ ಮುಂದಿನ ಭವಿಷ್ಯ ಎಂದು ನೆಹರು ಹೇಳಿದ್ದರು ಎಂದ ಅವರು, ಆ ನಿಟ್ಟಿನಲ್ಲಿ ಮಕ್ಕಳ ತಂದೆ-ತಾಯಂದಿರು ಭವಿಷ್ಯ ರೂಪಿಸಬೇಕು. ಪ್ರತಿ ಮಗುವಿಗೂ ಶಿಕ್ಷಣ ಅಗತ್ಯವಾಗಿದ್ದು, ಯಾವೊಂದು ಮಗುವು ಶಿಕ್ಷಣದಿಂದ ವಂಚಿತವಾಗ ಬಾರದು ಎಂದರು. ಕಿಡ್ಸ್ ಮಕ್ಕಳಿಂದ ವೇಷ ಭೂಷಣ ಸ್ಪರ್ಧೆ ಏರ್ಪಡಿಸಲಾಗಿತ್ತು. ಜಿಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಮಲ್ಲಿಗೆವಾಳ್ ದೇವಪ್ಪ, ಸುಜಲ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಡಿ.ಸುಬ್ಬೇಗೌಡ, ಲೋಕೇಶ್, ರಂಗನಾಥ್ ಇತರರು ಇದ್ದರು.
ಮಕ್ಕಳಿಂದ ಹೂವಿನ ಅಲಂಕಾರ: ನಗರದ ರಿಂಗ್ ರಸ್ತೆ ಬಳಿ ಇರುವ ಶ್ರೀರಂಗ ವಿದ್ಯಾ ಸಂಸ್ಥೆ ಕಿಡ್ಸ್ ಮಕ್ಕಳಿಂದ ಹೂವಿನ ಅಲಂಕಾರ ಮೂಲಕ ಮಕ್ಕಳ ದಿನಾಚರಣೆ ಆಚರಿಸಲಾಯಿತು. ಶಾಲೆಯ ಶಿಕ್ಷಕರು ಪಾಲ್ಗೊಂಡಿದ್ದರು.
ಕಾಂಗ್ರೆಸ್ ಭವನದಲ್ಲಿ: ನಗರದ ಕಾಂಗ್ರೆಸ್ ಭವನದಲ್ಲಿ ಗುರುವಾರ ನೆಹರು ಜನ್ಮದಿನಾಚರಣೆ ನಡೆಯಿತು. ಜವಾಹರಲಾಲ್ ನೆಹರೂ ಭಾವಚಿತ್ರಕ್ಕೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ. ಶಿವರಾಂ ಪುಷ್ಪ ಅರ್ಪಿಸಿ ಗೌರವ ಸಲ್ಲಿಸಿದರು. ನೆಹರು ತತ್ವ ಸಿದ್ದಾಂತ ನೆನೆದರು. ಉಪಾಧ್ಯಕ್ಷ ನಾರಾಯಣಗೌಡ, ಬಾಲಶಂಕರ್, ಪರ್ವೀಶ್ಪಾಷ, ಮಲ್ಲೇಶ್, ಅಮೀರ್ಜಾನ್ ಇತರರು ಇದ್ದರು.
ಮಕ್ಕಳ ನೇತೃತ್ವದಲ್ಲಿಯೇ ಮಕ್ಕಳ ದಿನಾಚರಣೆ, ಪುರಸ್ಕಾರ ಸಮಾರಂಭ
ಕ.ಪ್ರ.ವಾರ್ತೆ ಹೊಳೆನರಸೀಪುರ ನ. 14
ವಾಸವಿ ವಿದ್ಯಾಸಂಸ್ಥೆ ಮಕ್ಕಳ ನೇತೃತ್ವದಲ್ಲಿಯೆ ಗುರುವಾರ ಮಕ್ಕಳ ದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ವಿಶೇಷವಾಗಿ ನಡೆಯಿತು. ಪಟ್ಟಣದ ವಾಸವಿ ಮಹಲ್ನಲ್ಲಿ ಶ್ರೀವಾಸವಿ ವಿದ್ಯಾಸಂಸ್ಥೆ ಆಯೋಜಿಸಿದ್ದ ಮಕ್ಕಳ ದಿನಾಚರಣೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದ ವಿದ್ಯಾಸಂಸ್ಥೆ ಅಧ್ಯಕ್ಷ ಎ.ಆರ್.ರವಿಕುಮಾರ್ ಮಕ್ಕಳ ನೇತೃತ್ವದಲ್ಲಿ ಕಾರ್ಯಕ್ರಮ ಅತ್ಯುತ್ತಮವಾಗಿ ನಡೆಸಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇಂದಿನ ಮಕ್ಕಳೆ ಮುಂದಿನ ಭವ್ಯ ಭಾರತದ ಪ್ರಜೆಗಳಾಗಿ ನಾಡಿನ ಕೀರ್ತಿಯನ್ನು ಎತ್ತಿ ಹಿಡಿಯಲು ಕಾರಣವಾಗಲಿದೆ. ಜತೆಗೆ ಮಕ್ಕಳು ಕಳೆದ ವರ್ಷ ಅತೀ ಹೆಚ್ಚು ಅಂಕಗಳನ್ನು ಪಡೆದಿರುವರಿಗೆ ಪುರಸ್ಕಾರಿಸುತ್ತಿರುವುದರಿಂದ ಇದನ್ನು ಪಡೆದ ವಿದ್ಯಾರ್ಥಿಗಳ ಸಾಧನೆಯನ್ನು ಕಂಡ ಅನ್ಯ ವಿದ್ಯಾರ್ಥಿಗಳು ಸಹ ಉತ್ತಮ ಅಂಕಗಳನ್ನು ಪಡೆಯಲು ಪ್ರೇರಣೆ ಆಗಲಿ ಎಂಬ ದೃಷ್ಟಿಯಿಂದ ಇಂತಹ ಕಾರ್ಯಕ್ರಮಗಳು ಅವಶ್ಯಕವಾಗಿದೆ ಎಂದರು.
ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಜೊತೆಗೆ ತಮಗೆ ವಿದ್ಯೆ ಬೋದಿಸಿದ ಗುರು, ತಂದೆ ತಾಯಿಗಳನ್ನು ಗೌರವಿಸುವುದನ್ನು ಕಲಿತರೆ ಅಂತಹ ವಿದ್ಯಾರ್ಥಿ ಸಮಾಜದಲ್ಲಿ ಉನ್ನತ ಸ್ಥಾನಕ್ಕೆರಲು ಸಾದ್ಯವಾಗಲಿದೆ ಎಂದರು.
ಮುಖ್ಯ ಅತಿಥಿ, ಪುರಸಭೆ ಅಧ್ಯಕ್ಷೆ ಎಚ್.ಆರ್.ಕಲಾವತಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಿಸಿ ಮಾತನಾಡಿ ಮಕ್ಕಳು ತಮ್ಮ ಜೀವನದಲ್ಲಿ ಉತ್ತಮವಾಗಿ ಓದು ಬರಹ ಕಲಿತು ನಾಡಿಗೆ ಕೀರ್ತಿ ತರುವಂತೆ ನಡೆದು ಕೊಳ್ಳಬೇಕೆಂದು ಸಲಹೆ ನೀಡಿದರು.
ಮಕ್ಕಳ ದಿನಾಚರಣೆ ಸಮಾರಂಭದ ಅಧ್ಯಕ್ಷತೆಯನ್ನು ವಿದ್ಯಾರ್ಥಿನಿ ಕೃತ್ತಿಕಾ ವಹಿಸಿದ್ದರು. ವೇದಿಕೆ ಸಮಾರಂಭವನ್ನು ವಿದ್ಯಾರ್ಥಿಗಳೆ ನಡೆಸಿಕೊಟ್ಟು ಉತ್ತಮ ಅಡಿಪಾಯ ಹಾಕಿದರು. ವಿದ್ಯಾರ್ಥಿನಿ ವರ್ಷಾ ಸ್ವಾಗತಿಸಿದರು.
ರಸಪ್ರಶ್ನೆ, ಪ್ರಬಂಧ ಸ್ಪರ್ಧೆ
ಹಾಸನ: ನಗರದ ಉತ್ತರ ಬಡಾವಣೆಯ ಎಸ್.ಜಿ.ಆರ್. ಶಾಲಾ ಆವರಣದಲ್ಲಿ ಗುರುವಾರ ಭಾರತ ಜ್ಞಾನ ವಿಜ್ಞಾನ ಸಮಿತಿ ವತಿಯಿಂದ ಮಕ್ಕಳ ದಿನಾಚರಣೆ ಪ್ರಯುಕ್ತ ವಿದ್ಯಾರ್ಥಿಳಿಗೆ ರಸ ಪ್ರಶ್ನೆ ಮತ್ತು ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು.
ರಸಪ್ರಶ್ನೆಯಲ್ಲಿ ನಗರದ 20 ಶಾಲೆಗಳಿಂದ 60 ವಿದ್ಯಾರ್ಥಿಗಳು ಭಾಗವಹಿಸಿದ್ದರು. ರಸಪ್ರಶ್ನೆಯು ಮೊದಲು ಗುಂಪು ಲಿಖಿತ ನಂತರ ಮೌಖಿಕವಾಗಿ ನಡೆಸಲಾಯಿತು. ಅಖಿಲ್ಬಾಬು ಪವನ್ಕಾಡೇಕರ್, ಅಮಿತ್ಜಾಯ್, ವಿಠಲ್ ಪಿ ತಂಡವು ಮೊದಲ ಸ್ಥಾನ ಪಡೆದುಕೊಂಡಿತು. ಎಸ್.ಎಫ್.ಐನ ಮಂಜುನಾಥ್, ಅನ್ಶಾದ್ ಹಾಗೂ ವೇಣುಗೋಪಾಲ್ ರಸಪ್ರಶ್ನೆ ನಡೆಸಿಕೊಟ್ಟರು. ಘಟಕ ಖಜಾಂಚಿ ರೇಖಾ ಹಾಗೂ ಸಹಕಾರ್ಯದರ್ಶಿ ಸಭಾ ಪ್ರಬಂಧ ಸ್ಪರ್ಧೆ ನಿರ್ವಹಿಸಿದರು. ಬಿಜಿವಿಎಸ್ ಜಿಲ್ಲಾ ಖಜಾಂಚಿ ಗೋಪಾಲಕೃಷ್ಣ ಕಾರ್ಯಕ್ರಮ ಉದ್ಘಾಟಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

