ದೇವೇಗೌಡರನ್ನು ಅವಿರೋಧ ಆಯ್ಕೆ ಮಾಡಲು ಆಗ್ರಹ
ಹಾಸನ: ಮುಂದಿನ ಲೋಕಸಭೆ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಅವಿರೋಧವಾಗಿ ಆಯ್ಕೆ ಮಾಡುವುದು ಸೂಕ್ತವಾಗಿದ್ದು, ಇದರಿಂದ ರಾಜ್ಯದ ಸಮಸ್ತ ಕನ್ನಡಿಗರಿಗೆ ಗೌರವ ಬಂದಂತಾಗುತ್ತದೆ ಎಂದು ನಗರಸಭೆ ಮಾಜಿ ಅಧ್ಯಕ್ಷ ಚನ್ನವೀರಪ್ಪ ಆಗ್ರಹಿಸಿದ್ದಾರೆ.
ದೇಶಕ್ಕೆ ಪ್ರಧಾನಿ ಆಗುವ ಮೂಲಕ ಹಾಸನ ಮತ್ತು ಕರ್ನಾಟಕ ವಿಶ್ವದ ಭೂಪಟದಲ್ಲಿ ಸೇರುವಂತೆ ಮಾಡಿದ ದೇವೇಗೌಡರು, ಪ್ರಧಾನಿಯಾಗಿ ಕಾಶ್ಮೀರ, ಪಂಜಾಬಬ್ನಲ್ಲಿ ಚುನಾವಣೆ ನಡೆಸುವ ಮೂಲಕ ಪ್ರಜಾಪ್ರಭುತ್ವ ಮರು ಸ್ಥಾಪನೆ ಮಾಡಿದರಲ್ಲದೇ, ತಮ್ಮ ಅಧಿಕಾರಿದ ಅವಧಿಯಲ್ಲಿ ಎಳ್ಳಷ್ಟು ಭ್ರಷ್ಟಾಚಾರ ನಡೆಸದೇ ಮಾದರಿ ಪ್ರಧಾನಿಯಾಗಿ ಹೊರ ಬಂದರು. ಈ ಮೂಲಕ ಕನ್ನಡಿಗರ ಗೌರವವನ್ನು ಹಿಮಾಲಯದೆತ್ತರಕ್ಕೆ ಹಾರಿಸಿದರು ಎಂದು ಅವರು ಹೇಳಿದ್ದಾರೆ.
ಗೌಡರೆಂದೂ ಹವಾನಿಯಂತ್ರಿತ ಕೊಠಡಿಯಲ್ಲಿ ಇದ್ದು ರಾಜಕೀಯ ಮಾಡಿದವರಲ್ಲ. ಜನರೊಡನೆ ಬೆಳೆದವರು. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸುತ್ತಿರುವ ಗೌಡರಿಗೆ ಬಹುಶ ಬರುವ 2014ರ ಲೋಕಸಭೆ ಚುನಾವಣೆ ಕಡೆಯ ಚುನಾವಣೆ. ಗೌಡರೇ 2019ರ ಚುನಾವಣೆಯಲ್ಲಿ ನಿಲ್ಲಬೇಕೆಂದು ಜನರೇ ಬಯಸಿದರೂ ಅವರ ದೇಹ ಒಪ್ಪುವುದಿಲ್ಲ.
ಆದ್ದರಿಂದ ಲೋಕಸಭೆ ಚುನಾವಣೆಯಲ್ಲಿ ಗೌಡರನ್ನು ಅವಿರೋಧವಾಗಿ ಗೆಲ್ಲಿಸುವ ಮೂಲಕ ತವರೂರಿನ ಜನ ಪ್ರೀತಿ ಪೂರ್ವಕ ಗೌರವ ಸಲ್ಲಿಸಬೇಕು. ಇಲ್ಲದಿದ್ದರೇ ರಾಜ್ಯಾದ್ಯಂತ ಕೆಟ್ಟ ಹೆಸರು ಬರುವುದನ್ನು ತಳ್ಳಿ ಹಾಕುವಂತಿಲ್ಲ ಎಂದು ಅವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

