ಹಾಸನ

ಸೂಕ್ತ ಸ್ಥಳ ನಿಗದಿಗೆ ತಿಂಡಿ, ಗಾಡಿ ವ್ಯಾಪಾರಿಗಳ ಆಗ್ರಹ

Published On :

ಬೇಲೂರು: ಪಟ್ಟಣ ಪುರಸಭೆಯವರು ಏಕಾಏಕಿ ತಿಂಡಿ ಗಾಡಿಗಳ ಸ್ಥಳವನ್ನು ತೆರವುಗೊಳಿಸಿದ್ದರಿಂದ ತಮ್ಮ ಬದುಕು ದುಸ್ತರವಾಗಿದ್ದು, ಕೂಡಲೇ ಶಾಸಕರು ಹಾಗೂ ಜಿಲ್ಲಾಧಿಕಾರಿ ಮಧ್ಯೆ ಪ್ರವೇಶಿಸಿ ಸೂಕ್ತ ಜಾಗವನ್ನು ನಿಗದಿಪಡಿಸಿ ಕೊಡುವಂತೆ ಚನ್ನಕೇಶವ ತಿಂಡಿಗಾಡಿಗಳ ಸಂಘದವರು ಮನವಿ ಮಾಡಿದ್ದಾರೆ.
ಚನ್ನಕೇಶವ ತಿಂಡಿಗಾಡಿ ಸಂಘದ ಸದಸ್ಯರಾದ ನಾವು  ತಿಂಡಿಗಾಡಿಯಿಂದ ಜೀವನ ನಡೆಸುತ್ತಿದ್ದು, ಇದರಿಂದಲೇ ನಮ್ಮ ಮಕ್ಕಳ ವಿದ್ಯಾಭ್ಯಾಸ ಸೇರಿದಂತೆ ಪ್ರತಿಯೊಂದು ನಡೆಯಬೇಕಿದೆ. ಕಳೆದ 10 ವರ್ಷದಿಂದ ದೇವಸ್ಥಾನ ರಸ್ತೆಯ ಹೊಯ್ಸಳ ಆಟೋ ನಿಲ್ದಾಣ  ಹಿಂಭಾಗ ಫುಟ್‌ಪಾತ್‌ನಿಂದ 6 ಅಡಿ ದೂರದಲ್ಲಿರುವ ಪಿಡಬ್ಲೂಡಿ ಕಾಂಪೌಂಡ್ ಪಕ್ಕದ ಜಾಗದಲ್ಲಿ ಸಂಜೆ 5 ರಿಂದ ರಾತ್ರಿ 10 ರ ವರೆಗೆ ತಿಂಡಿಗಾಡಿ ವ್ಯಾಪಾರವನ್ನು ಮಾಡಿಕೊಂಡು ಬರುತ್ತಿದ್ದೇವೆ.
ತಿಂಡಿಗಾಡಿ ವ್ಯಾಪಾರದ ಸಂದರ್ಭದಲ್ಲಿ ಯಾರಿಗೂ ತೊಂದರೆಯಾಗದಂತೆ ಶುಚಿತ್ವ ಕಾಪಾಡಿಕೊಂಡು ವಾಹನ ಸವಾರರಿಗೆ, ಪಟ್ಟಣದ ಸೌಂದರ್ಯಕ್ಕೆ ಧಕ್ಕೆಯಾಗದಂತೆ ಸಂಜೆ 5 ಗಂಟೆಯಿಂದ 10 ಗಂಟೆ ವರೆಗೆ ನಿತ್ಯ 15 ರು. ಸುಂಕವನ್ನು ಕಟ್ಟಿ ವ್ಯಾಪಾರ ನಡೆಸಿಕೊಂಡು ಬಂದಿದ್ದೇವೆ.    ತಿಂಡಿಗಾಡಿ ವ್ಯಾಪಾರ ಮಾಡುತ್ತಿರುವ ನಾವು ನಿರ್ಗತಿಕರಾಗಿದ್ದು ಈ ವ್ಯಾಪಾರ ಬಿಟ್ಟರೆ ನಮಗೆ ಜೀವನ ಸಾಗಿಸಲು ಬೇರೆ ದಾರಿ ಗೊತ್ತಿಲ್ಲ. ನಮ್ಮಂತಹ ನಿರ್ಗತಿಕರ ಸಂಸಾರವನ್ನು ಬೀದಿ ಪಾಲಾಗದಂತೆ ಮಾಡಲು ಶಾಸಕರು, ಜಿಲ್ಲಾಧಿಕಾರಿ ಮಧ್ಯ ಪ್ರವೇಶಿಸಿ ಸೂಕ್ತ ಸ್ಥಳ ನಿಗದಿ ಮಾಡಿಕೊಡುವಂತೆ ವಿನಂತಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.