'ವಿಧೇಯಕ ಮಂಡನೆ ಮೊದಲು ಸಾಧಕ ಬಾಧಕ ಚಿಂತಿಸಿ'
ಚನರಾಯಪಟ್ಟಣ: ಸರ್ಕಾರ ಮೂಢ ನಂಬಿಕೆಗಳನು ನಿಷೇಧ ಮಾಡುವ ಮುನಾ ಅದರ ಸಾಧಕ ಬಾಧಕಗಳನು ಯೋಚಿಸಬೇಕು ಎಂದು ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಾಲಾನಂದ ಸ್ವಾಮೀಜಿ ಹೇಳಿದ್ದಾರೆ. ಕಬ್ಬಳಿ ಜಾತ್ರಾ ಮಹೋತ್ಸವಕ್ಕೆ ಬುಧವಾರ ಆಗಮಿಸಿದ್ದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ವಿಧೇಯಕ ಈಗ ಚರ್ಚೆಯ ಹಂತದಲ್ಲಿ ಇರುವುದರಿಂದ ಎಲ್ಲರ ಅಭಿಪ್ರಾಯವನು ಸಂಗ್ರಹಿಸಿ ನಿರ್ಣಯ ಕೈಗೊಳ್ಳುವುದು ಸೂಕ್ತ ಎಂದು ಸಲಹೆ ನೀಡಿದರು.
ಭೂ ವಿವಾದ: ವ್ಯಕ್ತಿ ಕೊಲೆ
ಸಕಲೇಶಪುರ: ಭೂ ವಿವಾದ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ತಾಲೂಕಿನ ಮಾಗಡಿ ಗ್ರಾಮದಲ್ಲಿ ಬುಧವಾರ ನಡೆದಿದೆ. ಗಿರೀಶ್(33)ಕೊಲೆಯಾದ ವ್ಯಕ್ತಿ. ಜಮೀನು ವಿಚಾರವಾಗಿ ರಘು ಎಂಬಾತ ಕೊಲೆಮಾಡಿದ್ದಾನೆ ಎಂದು ಆರೋಪಿಸಲಾಗಿದ್ದು ಬುಧವಾರ ಮುಂಜಾನೆ ಜಮೀನಿನ ಸಮೀಪಕ್ಕೆ ತೆರಳಿದ್ದ ಸಂದರ್ಭದಲ್ಲಿ ಕತ್ತಿಯಿಂದ ಕುತ್ತಿಗೆ ಕಡಿದು ಕೊಲೆಮಾಡಲಾಗಿದೆ. ಪಟ್ಟಣ ಠಾಣೆಯಲ್ಲಿ ದೂರು ದಾಖಲಾಗಿದೆ.
ಅರಸೀಕೆರೆ: ಆಹಾರ, ಸರ್ವೆ ಇಲಾಖೆ ಪರಿಶೀಲಿಸಿದ ಜಿಲ್ಲಾಧಿಕಾರಿ
ಅರಸೀಕೆರೆ: ಜಿಲ್ಲಾಧಿಕಾರಿ ಅನ್ಬುಕುಮಾರ್ ತಾಲೂಕು ಕಚೇರಿಗೆ ಭೇಟಿ ನೀಡಿ ಆಹಾರ ಇಲಾಖೆ, ಚುನಾವಣಾ ಶಾಖೆ ಹಾಗೂ ಸರ್ವೇ ಇಲಾಖೆಗಳಲ್ಲಿ ಪರಿಶೀಲನೆ ನಡೆಸಿದರು. ಸರ್ವೇ ಇಲಾಖೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸರ್ವೇಗಾಗಿ ಅರ್ಜಿ ಸಲ್ಲಿಸಿರುವ ರೈತರ ಜಮೀನನು ಕೂಡಲೇ ಸರ್ವೇ ಮಾಡಿಕೊಡುವಂತೆ ಸೂಚಿಸಿದರು.
ನಂತರ ಆಹಾರ ಇಲಾಖೆಯಲ್ಲಿ ಗ್ರಾಮಾಂತರ ಪ್ರದೇಶದ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿರುವ ಫಲಾನುಭವಿಗಳ ಪಟ್ಟಿ ಇನೂ ತಯಾರಾಗಿರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು ತ್ವರಿತಗತಿಯಲ್ಲಿ ಪಟ್ಟಿ ತಯಾರಿಸಿ ಈ ತಿಂಗಳ ಅಂತ್ಯದೊಳಗೆ ಕಾರ್ಡ್ ವಿತರಿಸುವಂತೆ ತಾಕೀತು ಮಾಡಿದರು.ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲಾಖೆಗಳ ಕಾರ್ಯವೈಖರಿ ತೃಪ್ತಿದಾಯಕವಾಗಿದ್ದು ಆಹಾರ ಇಲಾಖೆಯಲ್ಲಿ ಬಿಪಿಎಲ್ ಕಾರ್ಡ್ಗಾಗಿ 16,630 ಮಂದಿ ಅರ್ಜಿ ಸಲ್ಲಿಸಿದ್ದು ಆ ಪೈಕಿ ನಗರ ಪ್ರದೇಶದ 2,830 ಅರ್ಜಿ ಪರಿಶೀಲನೆ ನಡೆಸಲಾಗಿದೆ. ಗ್ರಾಮಾಂತರ ಪ್ರದೇಶದ 13,246 ಕಾರ್ಡ್ದಾರರನು ಶೀಘ್ರವೇ ಪರಿಶೀಲಿಸಿ ಗ್ರಾಮ ಪಂಚಾಯತಿಯ ಮೂಲಕ ಕಾರ್ಡ್ ವಿತರಣೆ ಮಾಡುವಂತೆ ಸೂಚಿಸಲಾಗಿದೆ ಎಂದರು.
ಸರ್ಕಾರ ಅರಕಲಗೂಡು ಹಾಗೂ ಬೇಲೂರನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಿದೆ. ಅರಸೀಕೆರೆ ತಾಲೂಕಿನ ಬರ ಪರಿಸ್ಥಿತಿಯ ಬಗ್ಗೆ ಅಧಿಕಾರಿಗಳಿಂದ ಬಂದ ಸಮಗ್ರ ಮಾಹಿತಿಯನು ಸರ್ಕಾರಕ್ಕೆ ಕಳುಹಿಸಲಾಗಿದೆ ಎಂದು ಸುದ್ದಿಗಾರರ ಪ್ರಶೆಗೆ ಉತ್ತರಿಸಿದರು.
ಗ್ರಾಮಗಳ ಅಭಿವೃದ್ಧಿಗೆ ಪಣ: ಶಾಸಕ ಎ. ಮಂಜು
ರಾಮನಾಥಪುರ: ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ತ್ಯಾಗ ಮಾಡಿದ ಮಹನೀಯರನು ಸ್ಮರಿಸುವ ಮೂಲಕ ನಾವು ಅವರು ಮಾಡಿಹೋದ ಉಳಿದ ಕೆಲಸಗಳನು ಮುಂದುವರಿಸಿಕೊಂಡು ಗ್ರಾಮಗಳನು ಅಭಿವೃದ್ಧಿಯತ್ತ ಕೊಂಡೊಯ್ಯಲಾಗುವುದು ಎಂದು ಕ್ಷೇತ್ರದ ಶಾಸಕ ಎ. ಮಂಜು ಹೇಳಿದರು.
ರಾಮನಾಥಪುರ ಹತ್ತಿರವಿರುವ ತಾತನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಟಿ. ಮಾಯಿಗೌಡನಹಳ್ಳಿ ಗ್ರಾಮದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಹಿಂದಿನ ಮುಖ್ಯಮಂತ್ರಿಗಳಾದ ವೀರೇಂದ್ರ ಪಾಟೀಲ್ರ ಅವಧಿಯಲ್ಲಿ ಸರ್ಕಾರದಲ್ಲಿ ಹಣ ಇಲ್ಲದ ವೇಳೆಯಲ್ಲಿ ಲಾಟರಿ ಮೂಲಕ ಚೀಟಿ ಮಾಡಿ ಹಾರಂಗಿ, ಹೇಮಾವತಿ ಕಟ್ಟೆ ಹಾಗೂ ಎಡ ಹಾಗೂ ಬಲದಂಡೆಯ ಸೀಳು ನಾಲೆಗಳನು ನಿರ್ಮಿಸಿ ನೀರು ಹರಿಸಿದರು ಎಂದು ಸ್ಮರಿಸಿದ ಅವರು ನನ ಅಧಿಕಾರದ ಅವಧಿಯಲ್ಲಿ ಉಳಿದ ಸೀಳು ನಾಲೆಗಳ ಅಭಿವೃದ್ಧಿ ಕಡೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಅವಳಿ ಟಿ. ಮಾಯಿಗೌಡನಹಳ್ಳಿ ಹಾಗೂ ತೇಜೂರು 2 ಗ್ರಾಮಗಳನು ಒಟ್ಟಿಗೆ ಸೇರಿಸಿ ಸುವರ್ಣ ಗ್ರಾಮ ಮಾಡಿಸುವುದಾಗಿ ಶಾಸಕರು ಭರವಸೆ ನೀಡಿದರು. ಟಿ ಮಾಯಿಗೌಡನಹಳ್ಳಿ ರಾಜಾಪುರ ಮಠದ ಅವರಣದಲ್ಲಿರುವ ಸಮುದಾಯ ಭವನ ಶಿಥಿಲವಾಗಿದ್ದು ಅದಕ್ಕೂ ತಮ್ಮ ಅನುದಾನದಲ್ಲಿ ಹೆಚ್ಚಿನ ಸಹಾಯ ಮಾಡುವುದಾಗಿ ತಿಳಿಸಿದರು.
ರಾಜಾಪುರ ಮಠದ ಸೋಮಶೇಖರ ಶಿವಾಚಾರ್ಯಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿ, ಟಿ.ಮಾಯಿಗೌಡನಹಳ್ಳಿ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಹಲವು ಸಮಸ್ಯೆಗಳಾದ ರಸ್ತೆಗಳು, ಗ್ರಾಮದ ಚರಂಡಿಗಳು, ಕುಡಿಯುವ ನೀರು, ವಿದ್ಯುತ್ ಹಾಗೂ ಅಗತ್ಯ ಮೂಲಭೂತ ಸೌಲಭ್ಯಗಳನು ಮಾಡಿಸಿ ಕ್ರಮಕೈಗೊಳ್ಳುವಂತೆ ಸಲಹೆ ನೀಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಾಂಭಶಿವಪ್ಪ, ನಿವೃತ್ತ ಮುಖ್ಯ ಶಿಕ್ಷಕ ಪರಮೇಶ್ವರಪ್ಪ ಹಾಗೂ ಮಾದಪ್ಪ, ಮುಖಂಡ ಶಿರದನಹಳ್ಳಿ ಚಿಕ್ಕಪ್ಪಾಜಿ, ಎಂ.ವಿ ಪ್ರಕಾಶ್, ದೇವರಾಜ್, ಎಂ.ಸಿ.ಮಹದೇವ್ ಅರಕಲಗೂಡು ತಾಲ್ಲೂಕು ವಿಶ್ವ ವೀರಶೈವ ಲಿಂಗಾಯಿತ ಮಹಾ ವೇದಿಕೆ ಪ್ರಧಾನ ಕಾರ್ಯದರ್ಶಿ ಕೊಣನೂರು ಪುಟ್ಟಸ್ವಾಮಿ, ಹೊಳೆನರಸಿಪುರ ಮಹಾ ವೇದಿಕೆ ಅಧ್ಯಕ್ಷ ಷಡಕ್ಷರಿ ಮುಂತಾದವರು ಉಪಸ್ಥಿತರಿದ್ದರು. ಶಿಕ್ಷಕ ಕುಮಾರಸ್ವಾಮಿ ಸ್ವಾಗತಿಸಿದರು. ಮೂರ್ತಿ ವಂದಿಸಿದರು.
ಕಾಡಾನೆ ದಾಳಿಗೆ ವ್ಯಕ್ತಿ ಬಲಿ
ಎಚ್.ಡಿ. ಕೋಟೆ: ದನ ಮೇಯಿಸುವ ವೇಳೆ ಕಾಡಾನೆ ದಾಳಿ ನಡೆಸಿದ ಪರಿಣಾಮ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವೀರನಹೊಸಹಳ್ಳಿ ಅರಣ್ಯ ಪ್ರದೇಶದ ತಾರೆ ಮರದ ಕಂಡಿ ಎಂಬಲ್ಲಿ ಮಂಗಳವಾರ ಜರುಗಿದೆ.ತಾಲೂಕಿನ ರಾಜೇಗೌಡನಹುಂಡಿ ಗ್ರಾಮದ ಜಯರಾಮೇಗೌಡ ಮೃತ ವ್ಯಕ್ತಿ. ಗ್ರಾಮದ ಹಲವು ಮಂದಿ ಕಾಡಿನ ಒಳಭಾಗದಲ್ಲಿ ದನ, ಕರುಗಳನು ಮೇಯಿಸಲು ತೆರಳಿದಾಗ ಕಾಡಾನೆ ಕಾಣಿಸಿಕೊಂಡಿದ್ದು, ಜಯರಾಮೇಗೌಡನನು ಹೊರತುಪಡಿಸಿ ಉಳಿದವರು ಜಾನುವಾರನು ಬಿಟ್ಟು ಗ್ರಾಮದ ಕಡೆ ಓಡಿ ಬಂದರು. ಆದರೆ ಜಯರಾಮೇಗೌಡ ಸಂಜೆ ಸುಮಾರು 5 ಗಂಟೆಯಾದರೂ ಗ್ರಾಮಕ್ಕೆ ಹಿಂತಿರುಗದೆ ಇ್ಟಜ್ಟಜಿದ್ದರಿಂದ ಭಯಗೊಂಡ ಗ್ರಾಮಸ್ಥರು ಹಾಗೂ ಕುಟುಂಬ ವರ್ಗದವರು ಕಾಡಿನ ಒಳಭಾಗಕ್ಕೆ ತೆರಳಿ ನೋಡಿದಾಗ, ಮೃತ ದೇಹ ಪತ್ತೆಯಾಯಿತು. ಆನೆ ತುಳಿದು ಜಯರಾಮೇಗೌಡ ಮೃತಪಟ್ಟಿರುವುದಾಗಿ ಅರಣ್ಯ ಇಲಾಖೆಗೆ ಹಾಗೂ ಪಟ್ಟಣದ ಪೊಲೀಸ್ ಠಾಣೆಗೆ ಕುಟುಂಬದವರು ದೂರು ನೀಡಿದ್ದಾರೆ. ಸ್ಥಳಕ್ಕೆ ಶಾಸಕ ಎಸ್.ಚಿಕ್ಕಮಾದು, ತಹಸೀಲ್ದಾರ್ ಕೃಷ್ಣ, ವಲಯ ಅರಣ್ಯಾಧಿಕಾರಿ ಮೋಹನ್ ಕುಮಾರ್ ಭೇಟಿ ನೀಡಿದ್ದರು. ಪರಿಹಾರಕ್ಕಾಗಿ ಕುಟುಂಬದವರು ಒತ್ತಾಯಿಸಿದ್ದಾರೆ.
ಯುವಕ ನೀರುಪಾಲು
ಮೈಸೂರು: ಬಹಿರ್ದೆಸೆಗೆ ತೆರಳಿದ್ದ ಯುವಕನೊಬ್ಬ ನೀರು ಪಾಲಾಗಿದ್ದು, ಆತನ ಮೃತದೇಹವು ಮೈಸೂರು ತಾಲೂಕು ಟಿ.ಕಾಟೂರು ಬಳಿ ವರುಣ ನಾಲೆಯಲ್ಲಿ ಬುಧವಾರ ಪತ್ತೆಯಾಗಿದೆ. ಮೈಸೂರು ತಾಲೂಕು ಚಿಕ್ಕಹಳ್ಳಿ ನಿವಾಸಿ ಮಾದಶೆಟ್ಟಿ ಎಂಬವರ ಪುತ್ರ ಶಿವರಾಮು(25) ಮೃತಪಟ್ಟವರು.
---
ಸುದ್ದಿ ಸಂಕ್ಷೇಪ
'ಸಮಾಜ ಪರಿವರ್ತನೆಗೆ ಸಂತ ಕನಕದಾಸರ ಕೊಡುಗೆ ಅಪಾರ'
ಅರಕಲಗೂಡು: ಕನಕದಾಸರು ಹಿಂಸೆಯಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂಬುದನ್ನು ಮನಗಂಡು ಅಹಿಂಸಾ ಮಾರ್ಗದಲ್ಲಿ ನಡೆದು ತತ್ವ ಸಿದ್ದಾಂತಗಳನ್ನಾಧರಿಸಿ ಕೀರ್ತನೆಗಳ ಮೂಲಕ ದೇವರನ್ನು ಒಲಿಸಿಕೊಂಡವರು ಎಂದು ಶಾಸಕ ಎ.ಮಂಜು ತಿಳಿಸಿದರು. ಇಲ್ಲಿನ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ತಾಲೂಕು ಆಡಳಿತ ಆಯೋಜಿಸಿದ್ದ ಕನಕದಾಸ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇಂದು ಜಾತಿ,ಮತ ಪಂಥಗಳು ವೈಯಕ್ತಿಕ ಲಾಭಗಳಿಗಾಗಿ ರೂಪುಗೊಂಡಿವೆ.ಇದು ರಾಜಕೀಯ ಲಾಭಗಳಿಗಾಗಿ ಬಳಕೆಯಾಗುತ್ತಿರುವುದು ಒಳ್ಳೆಯ ಲಕ್ಷಣಗಳಲ್ಲ ಎಂದ ಅವರು ಇಂಥ ಮಹನೀಯರ ತತ್ವಾದರ್ಶಗಳನ್ನು ಮಕ್ಕಳಿಗೆ ತಿಳಿಸಿ, ಸಮಾಜದ ಪರಿವರ್ತನೆಗೆ ಕಾರಣವಾಗಬೇಕು ಎಂದು ಅವರು ನುಡಿದರು. ಡಾ.ಯೋಗೇಶ್,ಮುಖಂಡ ಶೇಷೇಗೌಡ, ತಾಲೂಕು ಕುರುಬರ ಸಂಘದ ಅಧ್ಯಕ್ಷ ತಿಪ್ಪೇಗೌಡ, ತಾಪಂ ಅಧ್ಯಕ್ಷೆ ಕಾಮಾಕ್ಷಮ್ಮ, ಪಾಪಣ್ಣ, ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಶಿವರಾಮ್,ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ರೇವಣ್ಣ, ಕಂದಾಯ ನಿರೀಕ್ಷಕ ಬಸವರಾಜ್ ಇತರರು ಉಪಸ್ಥಿತರಿದ್ದರು. ತಹಸೀಲ್ದಾರ್ ಜಗದೀಶ್ ಸ್ವಾಗತಿಸಿದರು.ಇದೇ ವೇಳೆ ಗಾಯಕಿ ನಾಗಮಣಿ ಅವರು ಕನಕದಾಸರ ಕೀರ್ತನೆಗಳನ್ನು ಹಾಡಿದರು.ಇದಕ್ಕೂ ಮುನ್ನ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿವಿಧ ಕಲಾತಂಡಗಳೊಂದಿಗೆ ಕನಕದಾಸರ ಭಾವ ಚಿತ್ರವನ್ನು ಮೆರವಣಿಗೆ ಮಾಡಲಾಯಿತು.
ದೀರ್ಘಾವಧಿ ಹೊಲಿಗೆ ತರಬೇತಿ
ನುಗ್ಗೇಹಳ್ಳಿ: ಹಳ್ಳಿಯ ಮಹಿಳೆಯರು ಹೊಲಿಗೆ ತರಬೇತಿ ಪಡೆದು ವೃತ್ತ್ತಿಯಲ್ಲಿ ಕೌಶಲ್ಯ ಹೊಂದಿದರೆ ಸ್ವಂತ ದುಡಿಮೆ ಮಾಡಬಹುದು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು. ಇಲ್ಲಿಯ ಶಂಕರ್ ಕಾಂಪ್ಲೆಕ್ಸ್ನಲ್ಲಿ ನಡೆದ ನೆಹರು ಯುವ ಕೇಂದ್ರ ಹೇಮಾವತಿ ಮಹಿಳಾ ಸಮಾಜ ಇವರ ಆಶ್ರಯದಲ್ಲಿ ದೀರ್ಘಾವಧಿ ಹೊಲಿಗೆ ಅಭಿವೃದ್ಧಿ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡುತ್ತ ಮಹಿಳೆಯರ ಆರ್ಥಿಕ ಬದುಕಿಗೆ ವೃತ್ತಿ ತರಬೇತಿಗಳು ಹೆಚ್ಚು ಅವಶ್ಯಕತೆಯಿದೆ ಎಂದು ತಿಳಿಸಿದರು. ವಿದ್ಯಾವಂತ ಯುವತಿಯರು ಹೊಲಿಗೆ ತರಬೇತಿ ಪಡೆಯುವದರಿಂದ ಗಾರ್ಮೆಂಟ್ಸ್ಗಳಲ್ಲಿ ಹೆಚ್ಚು ಉದ್ಯೋಗ ಅವಕಾಶಗಳು ಪಟ್ಟಣಗಳಲ್ಲಿ ಲಭಿಸುತ್ತದೆ ಎಂದರು. ಜಿಪಂ ಮಾಜಿ ಅಧ್ಯಕ್ಷೆ ಮಹದೇವಮ್ಮ ಶಂಕರ್, ಮಂಜುನಾಥ, ಸಂಘದ ಅಧ್ಯಕ್ಷೆ ರೇಣುಕಮ್ಮ, ಜೆಡಿಎಸ್ ಸಿ.ಜಿ ನಾಗೇಶ್, ಖಜಾಂಜಿ ಜಯಮ್ಮ, ಎನ್.ವೈ.ಸಿ ಬಾಲಾಜಿಗೌಡ ರೂಪ ಅಂಜಲಿ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

