ಇಂಟರ್‌ನೆಟ್‌ಸದುಪಯೋಗಕ್ಕೆಬಿಇಓ ಕರೆ
ಆಲೂರು: ಬೆರಳ ತುದಿಯಲ್ಲಿ ಪ್ರಪಂಚದ ಮೂಲೆಮೂಲೆಯ ಮಾಹಿತಿಯನ್ನು ಪಡೆಯುವ ಇಂಟರ್‌ನೆಟ್ ಪ್ರತಿಯೊಂದು ಕ್ಷೇತ್ರದಲ್ಲೂ ತನ್ನ ಛಾಪು ಮೂಡಿಸಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಬಿಇಓ ಪುಷ್ಪಲತ ತಿಳಿಸಿದರು. ಪಟ್ಟಣದ ಸಪಪೂ ಕಾಲೇಜಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾಪಂಚಾಯ್ತಿ ಸಹಯೋಗದಲ್ಲಿ ಆಯೋಜಿಸಲಾದ ವಿದ್ಯಾರ್ಥಿ ಇಂಟರ್‌ನೆಟ್ ಪ್ರಪಂಚ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದ ಉದ್ದೇಶ ಮಕ್ಕಳಿಗೆ ಕಂಪ್ಯೂಟರ್ ಬಗ್ಗೆ ಸೂಕ್ತ ತಿಳಿವಳಿಕೆ ನೀಡುವುದಾಗಿದ್ದು, ಆಧುನಿಕ ಶಿಕ್ಷಣದಲ್ಲಿ ಕಂಪ್ಯೂಟರ್ ಶಿಕ್ಷಣ ಅವಶ್ಯಕವಾಗಿದೆ. ಮಕ್ಕಳ ಮುಂದಿನ ಶಿಕ್ಷಣಕ್ಕೆ ಪೂರ್ವ ತಯಾರಿಯಾಗಿ ಈ ಕಾರ್ಯಕ್ರಮ ಸಹಾಯಕ ಎಂದ ಅವರು ಇದರ ಪೂರ್ಣ ಪ್ರಯೋಜನ ಪಡೆಯಬೇಕೆಂದರು. ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಯಶೋಧ ಹರೀಶ್ ಬಿಆರ್‌ಸಿ ರವಿಶಂಕರ್ ಹಾಗೂ ಪ್ರಾಂಶುಪಾಲ ವೆಂಕಟರಾಮು ಮಾತನಾಡಿದರು. ವಿದ್ಯಾರ್ಥಿ ನಂದಿನಿ ಪ್ರಾರ್ಥಿಸಿದರು. ಶಿಕ್ಷಕಿ ಪೂರ್ಣಿಮಾ ಭಾವಗೀತೆ ಹಾಡಿದರು.ಶಿಕ್ಷಕಿ ದಾಕ್ಷಾಯಿಣಿ ನಿರೂಪಿಸಿದರು. ಟಿಪಿಒ ನಾಗರಾಜ್, ಶಿಕ್ಷಣ ಸಂಯೋಜಕ ವಿರೂಪಾಕ್ಷ, ಬಸವರಾಜ್, ತಾ. ಶಿಕ್ಷಕ ಸಂಘದ ಅಧ್ಯಕ್ಷ ವರದರಾಜು, ಕುಮಾರ್, ಚಂದ್ರಯ್ಯ ಮುಂತಾದವರಿದ್ದರು.
ಕಾಂಗ್ರೆಸ್ ಕಚೇರಿಯಲ್ಲಿ ಕನಕ ಜಯಂತಿ
ಹಾಸನ: ಕನಕದಾಸ ಜಯಂತಿಯನ್ನು ನಗರದಲ್ಲಿ ಬುಧವಾರ ನಾನಾ ಸಂಘಸಂಸ್ಥೆಗಳು ಶ್ರದ್ಧೆಯಿಂದ ಆಚರಿಸಿದವು. ಕಾಂಗ್ರೆಸ್ ಭವನದಲ್ಲಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕನಕದಾಸರಿಗೆ ಗೌರವ ಸಲ್ಲಿಸಲಾಯಿತು. ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ನಾರಾಯಣಗೌಡ, ಮುಖಂಡ ವಿಷ್ಣು ಸೇನೆ ಅಧ್ಯಕ್ಷ ಬಿ.ಎನ್. ಮಹಂತೇಶ್, ಗೃಹ ನಿರ್ಮಾಣ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ವಿಜಯಕುಮಾರ್, ಅಂದಾನಿಗೌಡ, ಅಮೀರ್‌ಜಾನ್, ಚಿಗಳ್ಳಿ ಅಪ್ಪಾಜಿಗೌಡ, ಕುಮಾರಸ್ವಾಮಿ, ವಾಸು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಬಂದಿಖಾನೆಯಲ್ಲಿ ಸಂಗೀತ ಕಾರ್ಯಕ್ರಮ
ಹಾಸನ: ನಗರದ ಬಂಧಿಖಾನೆಯಲ್ಲಿ ಖೈದಿಗಳಿಗೆ ಸಂಗೀತದ ರಸದೌತಣ ಕಾರ್ಯಕ್ರಮ ನಡೆಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಹಾಸನಾಂಬ ಕಲಾಕ್ಷೇತ್ರ ಹಾಗೂ ಶ್ರೀ ಶಾರದ ಕಲಾ ಸಂಘ ಸಂಯುಕ್ತಾಶ್ರಯದಲ್ಲಿ ವಿಶೇಷ ಘಟಕ ಯೋಜನಾ ಕಾರ್ಯಕ್ರಮದಡಿ ಕನಕದಾಸರ ಜಯಂತಿ ಪ್ರಯುಕ್ತ ಎಚ್.ಜಿ.ಗಂಗಾಧರ್ ಸಂಗಡಿಗರು ಸುಗಮ ಸಂಗೀತ ಮತ್ತು ಭಕ್ತಿ ಗೀತೆ, ಜನಪದ ಗೀತೆ, ಭಾವಗೀತೆ ಕಾರ್ಯಕ್ರಮ ನಡೆಸಿಕೊಟ್ಟರು. ಉಪ ಕಾರಾಗೃಹ ಅಧೀಕ್ಷಕ ಕೃಷ್ಣಮೂರ್ತಿ ಉದ್ಘಾಟಿಸಿದರು. ದೊಡ್ಡಳ್ಳಿ ರಮೇಶ್ ಪ್ರಾರ್ಥಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕುಮಾರ್ ಪ್ರಾಸ್ತ್ತಾವಿಕ ನುಡಿ ನುಡಿದರು. ಸಮಾಜ ಸೇವಕ ಆರ್.ಕೆ. ಸ್ವರೂಪ್ ನಿರೂಪಿಸಿದರು. ನಾಟಕ ನಿರ್ದೇಶಕ ಎ.ಸಿ. ರಾಜು, ಗೋವಿಂದೇಗೌಡ ಇತರರು ಪಾಲ್ಗೊಂಡಿದ್ದರು.
ವ್ಯಕ್ತಿ ನಾಪತ್ತೆ
ಹಾಸನ: ಜಿಲ್ಲೆಯ ಹೊಳೆನರಸೀಪುರ ಪಟ್ಟಣದ ವಾಸಿ ಭಾನುಪ್ರಕಾಶ್ (38) ಮನೆಯಿಂದ ಕೆಲಸಕ್ಕೆ ಹೋದವರು ವಾಪಸ್ ಮನೆಗೆ ಬಾರದೆ ಕಾಣೆಯಾಗಿದ್ದಾರೆ.
ಕಲಾಸುರುಚಿಯಿಂದ ಸಾಹಿತ್ಯ ಸಂವಾದ
ಮೈಸೂರು: ಕಲಾಸುರುಚಿ ವತಿಯಿಂದ ನ.24ರ ಬೆಳಗ್ಗೆ 10.30ಕ್ಕೆ ಸುರುಚಿ ರಂಗಮನೆಯಲ್ಲಿ ನಡೆಯುವ ಸಾಹಿತ್ಯ ಚಾವಡಿ-ಸಂವಾದ ಕಾರ್ಯಕ್ರಮದಲ್ಲಿ ಹಿರಿಯ ರಂಗಕರ್ಮಿ ಹಾಗೂ ಪ್ರಾದೇಶಿಕ ಶಿಕ್ಷಣ ಸಂಸ್ಥೆಯ ನಿವೃತ್ತ ಶ್ರವಣ ಕಾರ್ಯಕ್ರಮ ನಿರ್ಮಾಪಕ ಡಾ.ಎಚ್.ಕೆ. ರಾಮನಾಥ್ ಅವರು ಮಾತನಾಡುವರು. ಮಾಹಿತಿಗಾಗಿ ದೂ. 2541795 ಸಂಪರ್ಕಿಸಬಹುದು.
ಅಭಿನಂದನಾ ಕಾರ್ಯಕ್ರಮ
ಮೈಸೂರು: ಕುವೆಂಪುನಗರದ ಕಲಾಸುರುಚಿ ವತಿಯಿಂದ ನ.23ರ ಸಂಜೆ 4.30 ರಿಂದ ಸಂಜೆ 5.15 ರವರೆಗೆ ಸುರುಚಿ ರಂಗಮನೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ನ. ರತ್ನ ಮತ್ತು ರಂಗಾಯಣ ನಿರ್ದೇಶಕ ಎಚ್. ಜನಾರ್ದನ್ ಅವರನ್ನು ಅಭಿನಂದಿಸಲಿದೆ.
ಸ್ವರ್ಣಾಮೃತ ಪ್ರಾಶನ
ಮೈಸೂರು: ಸರಸ್ವತಿಪುರಂನಲ್ಲಿರುವ ದೀಕ್ಷಿತ್ ಹೆಲ್ತ್ ಕ್ಲಿನಿಕ್ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ನ.23ರ ಬೆಳಗ್ಗೆ 7 ರಿಂದ ಸಂಜೆ 7ರವರೆಗೆ ಸ್ವರ್ಣಾಮೃತಪ್ರಾಶನ ಕಾರ್ಯಕ್ರಮ ಆಯೋಜಿಸಿದೆ. ಹೆಚ್ಚಿನ ವಿವರಗಳಿಗೆಗಾಗಿ ದೂ. 2543619, 4244620 ಸಂಪರ್ಕಿಸಬಹುದು. ಶಂಕರಮಠದ ರಸ್ತೆಯಲ್ಲಿರುವ ಎಸ್.ಎನ್. ಪಂಡಿತ್ ಆ್ಯಂಡ್ ಸನ್ಸ್ ವತಿಯಿಂದ ನ. 23ರ ಬೆಳಗ್ಗೆ 8 ರಿಂದ ಸಂಜೆ 6 ರವರೆಗೆ ಹತ್ತು ವರ್ಷದೊಳಗಿನ ಮಕ್ಕಳಿಗೆ ಸುವರ್ಣ ಪ್ರಾಶನವನ್ನು ಕಾರ್ಯಕ್ರಮ ಆಯೋಜಿಸಿದೆ. ಮೊ. 9886350575 ಸಂಪರ್ಕಿಸಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

