ಹಾಸನ

ಜೂಜಾಟ 9 ಜನರ ಸೆರೆ, ರು. 8935 ನಗದು ವಶ

Published On :

ಹಾಸನ: ಜಿಲ್ಲೆಯಲ್ಲಿ ಪ್ರತ್ಯೇಕ ಪ್ರಕರಣಗದಲ್ಲಿ ಅಕ್ರಮವಾಗಿ ಮಟ್ಕಾ ಜೂಜಾಡುತ್ತಿದ್ದ 9 ಮಂದಿಯನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ. ಹಾಸನದ ಸಿದ್ದಯ್ಯ ನಗರ ಆಟೋ ನಿಲ್ದಾಣ ಹತ್ತಿರ ಮಟ್ಕಾ ಜೂಜಾಡಿಸುತ್ತಿರುವ ಬಗ್ಗೆ ಮಾಹಿತಿ ಪಡೆದ ಪಿಎಸ್‌ಐ ಮೋಹನ್‌ಕುಮಾರ್ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ದಾಳಿ ನಡೆಸಿ ಮಟ್ಕಾ ಜೂಜಾಡಿಸುತ್ತಿದ್ದ ಜಮೀರ್ (30) ಎಂಬಾತನನ್ನ ಬಂಧಿಸಿದ್ದು, ಮಟ್ಕಾ ಜೂಜಾಟದಿಂದ ಗಳಿಸಿದ್ದ 150 ರು. ನಗದನ್ನು ವಶಪಡಿಸಿಕೊಂಡಿದ್ದಾರೆ. ಪೆನ್‌ಷನ್ ಮೊಹಲ್ಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ಅಂಬೇಡ್ಕರ್‌ನಗರ ಸರ್ಕಲ್ ಆಟೋ ಸ್ಟ್ಯಾಂಡ್ ಹತ್ತಿರ ಮಟ್ಕಾ ಜೂಜಾಡಿಸುತ್ತಿದ್ದಾಗ ಪಿಎಸ್‌ಐ ಮೋಹನ್‌ಕುಮಾರ್‌ಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ದಾಳಿ ನಡೆಸಿ ಮಟ್ಕಾ ಜೂಜಾಡಿಸುತ್ತಿದ್ದ ವಾಸೀಂ (27) ಎಂಬಾತನನ್ನು ಬಂಧಿಸಿದ್ದು,  ಮಟ್ಕಾ ಜೂಜಾಟದಿಂದ ಗಳಿಸಿದ್ದ 180 ರು. ನಗದನ್ನು ವಶಪಡಿಸಿಕೊಂಡಿದ್ದಾರೆ.  ಪೆನ್‌ಷನ್ ಮೊಹಲ್ಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅರಸೀಕೆರೆ ತಾ. ಕಾಳನಕೊಪ್ಪಲು ಗ್ರಾಮದ ಗಂಗಾನಗರ ಸಮೀಪ ಸರ್ಕಾರಿ ಗುಡ್ಡದ ಹಲಸಿನ ಮರದ ಕೆಳಗೆ ಜೂಜಾಡುತ್ತಿದ್ದಾಗ ಗ್ರಾಮಾಂತರ ಠಾಣೆಯ ಪಿಎಸ್‌ಐ ಸುನಿಲ್‌ಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ದಾಳಿ ನೆಡಸಿ ಮಂಜು (28), ರೇವಣ್ಣ (32), ಲಕ್ಷ್ಮಣ (44), ಶ್ರೀನಿವಾಸ (38) ಮತ್ತು ನವೀನ (28) ಎಂಬವರನ್ನು ಬಂಧಿಸಿದ್ದು, ಜೂಜಾಟದಲ್ಲಿ ಪಣಕ್ಕಿಟ್ಟಿದ್ದ 7,300 ರು. ನಗದು ವಶಪಡಿಸಿಕೊಂಡಿದ್ದಾರೆ. ಅರಸೀಕೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾಸನ ಸಂತೆಪೇಟೆ, ಕೆಇಬಿ ಕಾಂಪೌಂಡ್ ಸಾರ್ವಜನಿಕ ಸ್ಥಳದಲ್ಲಿ ಮೋಸದಿಂದ ಮಟ್ಕಾ ಜೂಜಾಡಿಸುತ್ತಿದ್ದಾಗ ಸತ್ಯ (39) ಎಂಬಾತನನ್ನು ಬಂಧಿಸಿದ್ದು, ಮಟ್ಕಾ ಜೂಜಾಟದಿಂದ ಗಳಿಸಿದ 745 ರು. ನಗದನ್ನು ವಶಪಡಿಸಿಕೊಂಡಿದ್ದು, ಹಾಸನ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಹಾಸನ ನಗರ ಎವಿಕೆ ಕಾಲೇಜು ರಸ್ತೆ ಕಾರು ನಿಲ್ದಾಣದ ಸಾರ್ವಜನಿಕ ಸ್ಥಳದಲ್ಲಿ ಮೋಸದಿಂದ ಮಟ್ಕಾ ಜೂಜಾಡುಸುತ್ತಿದ್ದಾಗ ಪ್ರದೀಪ (25) ಎಂಬಾತನನ್ನು ಬಂಧಿಸಿದ್ದು, ಮಟ್ಕಾ ಜೂಜಾಟದಿಂದ ಗಳಿಸಿದ್ದ 560 ರು. ನಗದನ್ನು ವಶಪಡಿಸಿಕೊಂಡಿದ್ದಾರೆ. ಹಾಸನ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.