'ವಿಜ್ಞಾನದಿಂದ ಮಾತ್ರ ದೇಶದ ಅಭ್ಯುದಯ ಸಾಧ್ಯ'
ಹಾಸನ: ದೇಶದ ಅಭ್ಯುದಯ ವಿಜ್ಞಾನದಿಂದ ಮಾತ್ರ ಸಾಧ್ಯ. ವಿಜ್ಞಾನವನ್ನು ಜನಪರ ವಿಜ್ಞಾನವನ್ನಾಗಿ ಮಾರ್ಪಡಿಸಲು ವೈಜ್ಞಾನಿಕ ಮನೋಧರ್ಮ, ವೈಚಾರಿಕ ಚಿಂತನೆ, ಸಾಕ್ಷರತೆಯನ್ನು ಸಾಧಿಸಿದಾಗ ಮಾತ್ರ ಸಾಧ್ಯ ಎಂದು ಭಾರತ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾ ಉಪಾಧ್ಯಕ್ಷ ಎಚ್.ಟಿ.ಗುರುರಾಜು ಅಭಿಪ್ರಾಯಪಟ್ಟರು.
ಜಿಲ್ಲಾ ಬಿಜಿವಿಎಸ್, ರಾಜ್ಯ ವಿಜ್ಞಾನ ಪರಿಷತ್ ಸಂಯುಕ್ತಾಶ್ರಯದಲ್ಲಿ ನಡೆದ ನಗರದಲ್ಲಿ ಹಮ್ಮಿಕೊಂಡಿದ್ದ ಇಸಾನ್ ಧೂಮಕೇತು ಜಿಲ್ಲಾ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡದರು.
ದೇಶ ಸ್ವಾತಂತ್ರ್ಯ ಇಷ್ಟು ವರ್ಷವಾದರೂ ಮೌಢ್ಯಗಳು ಮನೆಯಿಂದ ರಾಜ್ಯಾಂಗದವರೆಗೂ ಶರವೇಗದಲ್ಲಿ ಪಸರಿಸಲಾರಂಭಿಸಿದೆ. ಈ ಹಿನ್ನೆಲೆಯಲ್ಲಿ ಭಾರತ ಸ್ವಾವಲಂಬಿಯಾಗಲು ಸಾಧ್ಯವೇ ಇಲ್ಲ. ಮೂಢನಂಬಿಕೆಗಳನ್ನೆಲ್ಲಾ ಕಳಚಿ ವಿಜ್ಞಾನ ದೀವಿಗೆ ಹಿಡಿಯದ ಹೊರತು ಭಾರತಾಂಬೆಗೆ ಮುಕುತಿ ಇಲ್ಲ ಎಂದು ವಿವೇಕಾನಂದ, ಕುವೆಂಪು ಸಾರಿ ಸಾರಿ ಹೇಳಿರುವುದು ಜನಮಾನಸದಲ್ಲಿ ಅದನ್ನು ಇನ್ನೂ ತುಂಬಲಾಗಿಲ್ಲ ಎಂದು ವಿಷಾದಿಸಿದರು. ಮೂಢನಂಬಿಕೆ ವಿಧೇಯಕವನ್ನು ಮುಕ್ತ ಮನಸಿನಿಂದ ವಿಮರ್ಶೆಗೆ ಒಳಪಡಿಸದೆ ಪುರೋಹಿತಶಾಹಿ ಮನಸುಗಳ ಮಾಧ್ಯಮಗಳು ಹಾಗೂ ರಾಜಕೀಯ ದುರ್ಲಾಭ ಪಡೆದುಕೊಳ್ಳಲು ಜಾತ್ಯತೀತ ಮುಖವಾಡ ಹೊತ್ತ ಪಕ್ಷಗಳು ವಿರೋಧಿಸುತ್ತಿರುವುದು ಅತ್ಯಂತ ಹೊಣೆಗೇಡಿತನ ಎಂದರು.
ಎಲ್ಲಿಯವರೆಗೂ ನಮ್ಮ ಮಾಧ್ಯಮಗಳು ವೈಜ್ಞಾನಿಕತೆಯನ್ನು ರೂಢಿಸಿಕೊಳ್ಳುವುದಿಲ್ಲವೂ, ಎಲ್ಲಿಯವರೆಗೆ ರಾಜಕೀಯ ಪಕ್ಷಗಳು ಮೂಢನಂಬಿಕೆ, ನಂಬಿಕೆ ಮತ್ತು ವೈಜ್ಞಾನಿಕ ಮನೋಧರ್ಮದ ಲಕ್ಷಣಗಳ ಸೂಕ್ಷ್ಮತೆಗಳನ್ನು ಅರ್ಥೈಸಿಕೊಂಡು ಅನುಸರಿಸುವುದಿಲ್ಲವೂ ಅಲ್ಲಿಯವರೆಗೂ ವಿಜ್ಞಾನ ಮತ್ತು ತಂತ್ರಜ್ಞಾನನದಲ್ಲಿ ದೇಶ ಸ್ವಾವಲಂಬನೆ ಸಾಧಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.
ಬಿಜಿವಿಎಸ್ ಜಿಲ್ಲಾ ಕಾರ್ಯದರ್ಶಿ ಅಹಮದ್ ಮಾತನಾಡಿ, ಈ ಮಾಸಾಂತ್ಯದಲ್ಲಿ ಇಸಾನ್ ಧೂಮಕೇತು ಬರೀಗಣ್ಣಿಗೆ ಬೆಳಗಿನ ಸೂರ್ಯೋದಯಕ್ಕೆ ಅರ್ಧಗಂಟೆ ಮೊದಲು ಗೋಚರಿಸಲಿದ್ದು ಜನವರಿ ಮಾಸಾಂತ್ಯದವರೆಗೂ ಕಾಣಿಸಲಿದೆ ಎಂದರು. ಧೂಮಕೇತುಗಳ ನಿಜಸ್ವರೂಪ ತಿಳಿಸಲಿಕ್ಕೆ ಇತರೆ ವಿಜ್ಞಾನ ಸಂಘಟನೆಗಳ ಜೊತೆ ಬಿಜಿವಿಎಸ್ ಹಾಗೂ ಕರಾವಿಪ ರಾಜ್ಯಾದ್ಯಂತ ಶ್ರಮಿಸುತ್ತಿದೆ ಎಂದರು.
ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದ ಅಧ್ಯಕ್ಷೆ ಮಮತ ಶಿವು, ಜನರಲ್ಲಿ ಮೂಢನಂಬಿಕೆ ಆಳವಾಗಿ ಬೇರು ಬಿಟ್ಟಿದ್ದು ಅದು ಕಂದಾಚಾರದೊಳಗೆ ಸುಲಭವಾಗಿ ಸಿಲುಕಿಸಲು ಸಾಧ್ಯವಾಗಿದೆ ಜನರನ್ನು ಕಂದಾಚಾರಗಳಿಂದ ಮುಕ್ತಗೊಳಸಿ ಪ್ರಜಾತಾಂತ್ರಿಕ ನೆಲೆಗಟ್ಟಿನಲ್ಲಿ ಬದುಕಲು ವೈಜ್ಞಾನಿಕ ಚಿಂತನೆ ಬೆಳೆಸಬೇಕಿದೆ ಈ ನಿಟ್ಟಿನಲ್ಲಿ ಶಿಬಿರವು ಆಚರಣೆ ಯಾವುದು ಮೂಢಾಚರಣೆ ಯಾವುದು, ನಂಬಿಕೆ ಯಾವುದು ಮೂಢನಂಬಿಕೆ ಯಾವುದು ಬದುಕು ಯಾವುದು ನೆಮ್ಮದಿಯ ಬದುಕು ಯಾವುದು ಎಂಬುದನ್ನು ತಿಳಿಸಲಿದೆ ಎಂದು ಹೇಳಿದರು. ನಿರ್ವಾಹಕಿ ಕವಿತ ಸ್ವಾಗತಿಸಿದರು. ಕಾರ್ಯದರ್ಶಿ ಜಯಪ್ರಕಾಶ್ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

