ರೈತರು ಹೈನುಗಾರಿಕೆಗೆ ಒತ್ತು ನೀಡಲಿ'
ಕ.ಪ್ರ.ವಾರ್ತೆ ಅರಸೀಕೆರೆ ನ.22
ಸತತ ಮಳೆಯ ಅಭಾವದಿಂದ ಕಂಗಾಲಾಗಿರುವ ಅರಸೀಕೆರೆ ತಾಲೂಕಿನ ರೈತರು ಕೃಷಿಯೊಂದಿಗೆ ಹೈನುಗಾರಿಕೆಗೆ ಹೆಚ್ಚಿನ ಶ್ರಮ ವಹಿಸಿದಲ್ಲಿ ಆರ್ಥಿಕ ಸಂಕಷ್ಟದಿಂದ ಪಾರಾಗಬಹುದೆಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಚೆನ್ನಪ್ಪಗೌಡ ಅಭಿಪ್ರಾಯಪಟ್ಟರು.
ತಾಲೂಕಿನ ಸುಂಕದಹಳ್ಳಿ ಗ್ರಾಮದಲ್ಲಿ ಯೋಜನೆ ಆಶ್ರಯದಲ್ಲಿ ರೈತ ಕ್ಷೇತ್ರ ಪಾಠಶಾಲೆಯಡಿ ಹೈನುಗಾರಿಕಾ ತರಭೇತಿ ಕಾರ್ಯಕ್ರಮದಲ್ಲಿ ಜಾನುವಾರು ವಿಮೆ ಕುರಿತು ಮಾಹಿತಿ ಕಾರ್ಯಕ್ರಮ ನಡೆಯಿತು.
ಕೃಷಿ ಚಟುವಟಿಕೆ ಮಳೆಯಿಲ್ಲದೆ ಕ್ಷೀಣಿಸುತ್ತಿರುವ ಅರಸೀಕೆರೆಯಲ್ಲಿ ರೈತರ ಕೈ ಹಿಡಿದಿರುವುದು ಹೈನುಗಾರಿಕೆ. ಹೈನುಗಾರಿಕೆಗೆ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಸಾಲಸೌಲಭ್ಯಗಳನ್ನು ನೀಡಲಾಗುತ್ತಿದ್ದು ಅದನ್ನು ಸದುಪಯೋಗಪಡಿಸಿಕೊಂಡು ಆರ್ಥಿಕ ಸಂಕಷ್ಟದಿಂದ ಪಾರಾಗಬೇಕೆಂದು ಕರೆ ನೀಡಿದರು.
ಸಂಪನ್ಮೂಲ ವ್ಯಕ್ತಿ ರಘು ಮಾತನಾಡಿ, ಜಾನುವಾರು ವಿಮೆ ಸರ್ಕಾರದ ಮಹತ್ವದ ಯೋಜನೆಯಾಗಿದ್ದು ಒಂದು, ಎರಡು ಮತ್ತು ಮೂರು ವರ್ಷದ ವಿಮೆಯಿದೆ. ಫಲಾನುಭವಿಗಳು ಕೇವಲ ವಿಮಾ ಕಂತಿನ ಅರ್ಧದಷ್ಟೆ ಹಣವನ್ನು ಪಾವತಿಸುವುದು. ಇನ್ನರ್ಧ ಸರ್ಕಾರ ಭರಿಸುತ್ತದೆ. ವಿಮಾ ಅವಧಿಯಲ್ಲಿ ಏನಾದರು ಹಸು ಖಾಯಿಲೆಯಿಂದ ಸತ್ತರೆ, ಕೊಟ್ಟಿಗೆಗೆ ಬೆಂಕಿ ಬಿದ್ದರೆ, ನೀರಿನಲ್ಲಿ ಕೊಚ್ಚಿ ಹೋದರೆ, ವೈದ್ಯರ ಶಿಫಾರಿಸ್ಸಿನ ಮೇಲೆ ಪರಿಹಾರ ಪಡೆಯಬಹುದೆಂದು ತಿಳಿಸಿದರು.
ವೈದ್ಯರು ಹಸುವಿನ ಬೆಲೆಯನ್ನು ನಿಗದಿಗೊಳಿಸಿ ವಿಮಾ ಕಂತನ್ನು ಸೂಚಿಸುತ್ತಾರೆ. ಪ್ರತಿಯೊಬ್ಬರು ಕಡ್ಡಾಯಾವಾಗಿ ಗೋವಿನ ರಕ್ಷಣೆಗೆ ಬದ್ದರಾಗಿ ಆ ಮೂಲಕ ಸರ್ಕಾರದ ಯೋಜನೆಯ ಪ್ರಯೋಜನ ಪಡೆಯಬೇಕೆಂದು ವಿನಂತಿಸಿದರು.
ವೈಜ್ಞಾನಿಕ ರೀತಿಯಲ್ಲಿ ತಾಂತ್ರಿಕತೆಯನ್ನು ಬಳಸಿಕೊಂಡು ಹೈನುಗಾರಿಕೆ ಮಾಡುತ್ತಿರುವ ತೇಜಸ್ವಿಯವರು ಮಾತನಾಡಿ ಏನೇ ತಾಂತ್ರಿಕ ಮಾಹಿತಿ ಬೇಕೆಂದರೂ ತಾವು ನೀಡಲು ಸಿದ್ದರೆಂದು ತಿಳಿಸಿದರು.
ಸುಂಕದಹಳ್ಳಿಯ ಮುಖಂಡಶಾಂತಪ್ಪ, ಮಾದರಿ ಹೈನುಗಾರ ತೇಜಸ್ವಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಯೋಜನಾಧಿಕಾರಿ ಪಿ. ಚೆನ್ನಪ್ಪಗೌಡ, ಹಿರಿಯ ಪಶು ವೈಧ್ಯಕೀಯ ಸಹಾಯಕ ರಘು, ಗ್ರಾಮ ಪಂಚಾಯ್ತಿ ಸದಸ್ಯೆ ಕುಮಾರಿಬಾಯಿ ಇದ್ದರು.
ಕಾರ್ಯಕ್ರಮವನ್ನು ಬಾಣಾವರದ ವಲಯ ಮೇಲ್ವಿಚಾರಕ ಮನೀಶ್ ನಿರೂಪಿಸಿದರು, ಹೈನುಗಾರಿಕಾ ಮೇಲ್ವಿಚಾರಕ ಎಂ. ಶ್ರೀನಿವಾಸ್ ಸ್ವಾ ಗತಿಸಿದರು, ಸೇವಾ ಪ್ರತಿನಿಧಿ ಪರಮೇಶ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

