ಹೊಟೇಲ್ ಉದ್ಯಮ ಉಚಿತ ತರಬೇತಿ
ಹಾಸನ: ಭಾರತ ಸರ್ಕಾರ, ಪ್ರವಾಸೋದ್ಯಮ ಮಂತ್ರಾಲಯದ ರೋಜ್ಗಾರ್ ಯೋಜನೆಯಡಿಯಲ್ಲಿ ನಿರುದ್ಯೋಗಿ ಯುವಕ ಯುವತಿಯರಿಗೆ ಔಪಚಾರಿಕ (ಹೋಟೆಲ್ ಉದ್ಯಮ) ಕ್ಷೇತ್ರದಲ್ಲಿ ಉಚಿತ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಆಹಾರ ತಯಾರಿಕೆ- 8 ವಾರ, ಆಹಾರ ವಿತರಣೆ - 6 ವಾರ, ಮತ್ತು ವಸತಿ ನಿರ್ವಹಣೆ - 6 ವಾರ ತರಬೇತಿ ನಡೆಯಲಿದೆ. ಅಭ್ಯರ್ಥಿ 18 ರಿಂದ 28 ವರ್ಷದೊಳಗಿರಬೇಕು.
ತರಬೇತಿಯನ್ನು ಫುಡ್ಕ್ರಾಫ್ಟ್ ಸಂಸ್ಥೆಯಿಂದ ನೀಡಲಾಗುವುದು. ಸಂಸ್ಥೆಯು 4 ತಂಡಗಳ ತರಬೇತಿ ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ತರಬೇತಿ ಪಡೆದವರಿಗೆ ಪ್ರತಿಷ್ಠಿತ ಹೋಟೆಲ್ಗಳಲ್ಲಿ ಉದ್ಯೋಗಾವಕಾಶ ಕಲ್ಪಿಸಲಾಗಿದೆ.
ತರಬೇತಿ ಅವಧಿಯಲ್ಲಿ ಆಹಾರ ತಯಾರಿಕಾ ಅಭ್ಯರ್ಥಿಗಳಿಗೆ ರು.2000 ಹಾಗೂ ಆಹಾರ ವಿತರಣೆ, ವಸತಿ ನಿರ್ವಹಣೆ ಅಭ್ಯರ್ಥಿಗಳಿಗೆ ರು.1500 ಗಳ ಸ್ಟೈಫೆಂಡ್ ನೀಡಲಾಗುವುದು. ಮಧ್ಯಾಹ್ನದ ಊಟ, ಸಮವಸ್ತ್ರ ಹಾಗೂ ಕಲಿಕಾ ಸಾಮಗ್ರಿಗಳನ್ನು ಉಚಿತವಾಗಿ ನೀಡಲಾಗುವುದು.
ನಿಗದಿತ ಅರ್ಜಿ ನಮೂನೆಯಲ್ಲಿ ಇತ್ತೀಚಿನ 2 ಭಾವಚಿತ್ರದೊಂದಿಗೆ ಸಲ್ಲಿಸಬೇಕು. ವಯಸ್ಸಿನ ಬಗ್ಗೆ ಶಾಲೆಯಿಂದ ಪಡೆದ ವರ್ಗಾವಣೆ ಪತ್ರ, ಅಂಕ ಪಟ್ಟಿ ಪ್ರತಿ. ಪಡಿತರ ಚೀಟಿ ಪ್ರತಿ, ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್, ಚಾಲನಾ ಪರವಾನಗಿ ಪತ್ರ ಈ ಎಲ್ಲಾ ಷರತ್ತಿಗೆ ಒಳಪಟ್ಟಿರುವ ಅಭ್ಯರ್ಥಿಗಳು, ಕಚೇರಿ ವೇಳೆಯಲ್ಲಿ ನಿಗದಿಪಡಿಸಿರುವ ಅಜಿಯನ್ನು ಪಡೆದು ಸಲ್ಲಿಸಬಹುದು.
ಫುಡ್ಕ್ರಾಫ್ಟ್ ಇನ್ಸ್ಟಿಟ್ಯೂಟ್, ಯಗಚಿ ಜಲಾಶಯ ಮುಂಭಾಗ, ಬೇಲೂರು, ದೂರವಾಣಿ 08177-222134. ಡಿ.2ರಿಂದ ತರಬೇತಿ ಪ್ರಾರಂಭವಾಗುವುದೆಂದು ಬೇಲೂರು ಫುಡ್ಕ್ರಾಫ್ಟ್ ಇನ್ಸ್ಟಿಟ್ಯೂಟ್ನ ಪ್ರಾಂಶುಪಾಲರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

