'ಚ.ರಾ.ಪಟ್ಟಣ,ಅರಸೀಕೆರೆ ಬರ ಪಟ್ಟಿಗೆ ಸೇರಿಸಿ'
ಹಾಸನ: ಚನ್ನರಾಯಪಟ್ಟಣ ಮತ್ತು ಆರಸೀಕೆರೆ ತಾಲೂಕನ್ನು ಕೂಡಲೇ ಬರಪೀಡಿತ ಪ್ರದೇಶಗಳ ಪಟ್ಟಿಗೆ ಸೇರಿಸುವಂತೆ ಶಾಸಕ ಸಿ.ಎನ್.ಬಾಲಕೃಷ್ಣ ಸರ್ಕಾರವನ್ನು ಒತ್ತಾಯಿಸಿದ್ದಾರೆ. ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರ ವಿಚಾರದಲ್ಲಿ ಈ ರೀತಿ ರಾಜಕೀಯ ಮಾಡುವುದು ಸರಿಯಲ್ಲ. ಈ ತಿಂಗಳು ನಡೆಯುವ ಅದಿವೇಶನದಲ್ಲಿ ಮುಖ್ಯಮಂತ್ರಿ ಹಾಗೂ ಕಂದಾಯ ಇಲಾಖೆ ಸಚಿವರ ಜೊತೆಗೆ ಈ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಆದ್ದರಿಂದ ಸರ್ಕಾರ ಬರ ವಿಚಾರದಲ್ಲಿ ತಾರತಮ್ಯ ಮಾಡಬಾರದು ಎಂದು ಹೇಳಿದರು. ಕೃಷಿ ಅಧಿಕಾರಿಗಳು ಸೆಪ್ಟೆಂಬರ್ನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಅದೇ ಜೂನ್, ಜುಲೈ ಮತ್ತು ಆಗಸ್ಟ್ನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ ಎಂದು ತಿಳಿಸಿದ್ದಾರೆ. ಶೇ.80ರಷ್ಟು ಮಳೆ ಆಧಾರಿತ ಬೆಳೆಗಳನ್ನು ಈ ಭಾಗದಲ್ಲಿ ಬೆಳೆಯುವುದರಿಂದ ಬೆಳೆ ಬಿತ್ತಿದ್ದ ಸಂದರ್ಭದಲ್ಲಿ ಮಳೆಯಾಗದೇ, ಸೆಪ್ಟೆಂಬರ್ನಲ್ಲಿ ಮಳೆಯಾದರೆ ಪ್ರಯೋಜನವಾಗುವುದಿಲ್ಲ. ಆದ್ದರಿಂದ ಕೃಷಿ ಸಚಿವರು ತಾಲೂಕಿಗೆ ಬಂದು ಪರಿಶೀಲಿಸಿ ಸೂಕ್ತ ತೀರ್ಮಾನ ಕೈಗೊಳ್ಳುವಂತೆ ಒತ್ತಾಯಿಸಿದರು.
ಜೂಜು: 10 ಜನರ ಬಂಧನ
ಹಾಸನ: ಜಿಲ್ಲೆಯ ನಾನಾ ಕಡೆಗಳಲ್ಲಿ ಅಕ್ರಮವಾಗಿ ಮಟ್ಕಾ ಜೂಜಾಡುತ್ತಿದ್ದ 10 ಜನರನ್ನು ಬಂಧಿಸಿದ್ದು, 36,500 ರು.ಗಳನ್ನು ನಗದು ಹಾಗೂ 4 ಬೈಕ್ ವಶಪಡಿಸಿಕೊಂಡಿರುವ ಘಟನೆ ಹಾಸನದಲ್ಲಿ ಶುಕ್ರವಾರ ನಡೆದಿದೆ. ತಾಲೂಕಿನ ಶಾಂತಿಗ್ರಾಮ ಠಾಣಾ ವ್ಯಾಪ್ತಿ ಚಿಗಹಳ್ಳಿ ಫಾರೆಸ್ಟ್ನಲ್ಲಿ ಜೂಜಾಡುತ್ತಿದ್ದಾಗ ಹಾಸನ ಗ್ರಾಮಾಂತರ ಠಾಣೆಯ ಸಿಪಿಐ ವೀರೇಂದ್ರಪ್ರಸಾದ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿ ಜತೆ ಸ್ಥಳಕ್ಕೆ ತೆರಳಿ ದಾಳಿ ನಡೆಸಿ ಸತೀಶ (25), ಶಂಕರ (50), ವಿನಯ (32), ಗಿರೀಶ (30), ಅರುಣ (44) ಮತ್ತು ಕುಮಾರ (38) ಎಂಬುವರನ್ನು ಬಂಧಿಸಿದರು. ಪಣಕ್ಕಿಟ್ಟಿದ್ದ 31 ಸಾವಿರ ರು. ನಗದು ಹಾಗೂ ಬೈಕ್ಗಳನ್ನು ವಶಪಡಿಸಿಕೊಂಡಿದ್ದಾರೆ. ಶಾಂತಿಗ್ರಾಮ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೇಲೂರು ತಾ. ಶೆಟ್ಟಿಹಳ್ಳಿ ಗ್ರಾಮದಲ್ಲಿ ಮರದ ಕೆಳಗೆ ಜೂಜಾಡುತ್ತಿದ್ದಾಗ ಬೇಲೂರು ಠಾಣೆ ಪಿಎಸ್ಐ ಅಶ್ವಿನ್ ಕುಮಾರ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿ ಜತೆ ಸ್ಥಳಕ್ಕೆ ತೆರಳಿ ದಾಳಿ ನಡೆಸಿ ನಾಗರಾಜು (30), ಧರ್ಮರಾಜು (30) ಮತ್ತು ದಿಲೀಪ್ (23) ಎಂಬುವರನ್ನು ಬಂಧಿಸಿ, ಪಣಕ್ಕಿಟ್ಟದ್ದ 5 ಸಾವಿರ ರು. ನಗದು ಪಲ್ಸರ್ ಹಾಗೂ ಡಿಸ್ಕವರಿ ಬೈಕ್ಗಳನ್ನು ವಶಪಡಿಸಿಕೊಂಡಿದ್ದಾರೆ. ಬೇಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಾಸನ ನಗರ ಕಟ್ಟಿನಕೆರೆ ಮಾರ್ಕೆಟ್ ಶೌಚಾಲಯ ಬಳಿ ಮಟ್ಕಾ ಜೂಜಾಡುಸುತ್ತಿದ್ದಾಗ ಪಿಎಸ್ಐ ಜೆ.ಇ.ಮಹೇಶ್ ಸಿಬ್ಬಂದಿ ಜತೆ ಸ್ಥಳಕ್ಕೆ ತೆರಳಿ ದಾಳಿ ನಡೆಸಿ ರಂಗೇಗೌಡ (45) ಎಂಬಾತನನ್ನು ಬಂಧಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

